ಜನರ ಹಣದಲ್ಲಿ ಬಿಜೆಪಿ ಮೋಜು ಮಸ್ತಿ

 ಪಾವಗಡ : 

     ರಾಜ್ಯದ ಜನರ ತೆರಿಗೆ ಹಣದಲ್ಲಿ ಬಿಜೆಪಿ ಸರ್ಕಾರ ಮೋಜು ಮಸ್ತಿ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿ ಜನ ಸಾಮಾನ್ಯರು ಬದುಕಲು ಪರದಾಡುವಂತೆ ಮಾಡಿವೆ ಎಂದು ಶಾಸಕ ವೆಂಕಟರವಣಪ್ಪ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

      ಅವರು ಪೆಟ್ರೋಲಿಯಂ ಉತ್ಪನ್ನ, ವಿದ್ಯುತ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ, ಸೋಮವಾರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಸೈಕಲ್ ಮತ್ತು ಎತ್ತಿನಗಾಡಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬೆಲೆ ಏರಿಕೆಯಾದರೆ ಬಿಜೆಪಿ ತೀವ್ರ ತರಹ ಪ್ರತಿಭಟನೆ ಮಾಡುತ್ತಿತ್ತು. ಆದರೆ ಇಂದು ಬಿಜೆಪಿಯೆ ಅಧಿಕಾರದ ಚುಕ್ಕಾಣಿ ಹಿಡಿದು, ಸುಮ್ಮನಿರುವುದು ನಾಚಿಕೆ ಗೇಡಿನ ಸಂಗತಿ. ಜನ ಸಾಮಾನ್ಯರು ಕೊರೊನಾ ಸಂಕಷ್ಟವನ್ನು ಎದುರಿಸಲು ಸಾಧ್ಯವಾಗದೆ, ಶವಸಂಸ್ಕಾರ ಮಾಡಲು ಸಾಧ್ಯವಾಗದೆ, ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಇಡೀ ದೇಶದಲ್ಲಿ ರೈತರ ಕಷ್ಟಗಳನ್ನು ಅರ್ಥಮಾಡಿಕೊಳ್ಳದೆ, ಬಂಡವಾಳಷಾಹಿಗಳ ಪರವಾಗಿ ನಿಂತಿದೆ. ಆದ್ದರಿಂದ ಯಡಿಯೂರ ಪ್ಪ ಮತ್ತು ನರೇಂದ್ರ ಮೋದಿ ರಾಜೀನಾಮೆ ಕೊಟ್ಟು ಅಧಿಕಾರದಿಂದ ಇಳಿಯಬೇಕು ಎಂದು ಆಗ್ರಹಿಸಿದರು.

      ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಮಾತನಾಡಿ, ಪ್ರಯಾಣಿಕರಿಗೆ ಬಸ್ ದರ ಏರಿಸಿದೆ, ಇದರಿಂದ ಬಡವರಿಗೆ ತೀವ್ರ ತೊಂದರೆಯಾಗುತ್ತಿದೆ. ಬೆಲೆ ಏರಿಕೆಯನ್ನು ಕಡಿಮೆ ಮಾಡಬೇಕು. ದೇಶದಾದ್ಯಂತ ಕಾಂಗ್ರೆಸ್ ಪಕ್ಷದಿಂದ ಬೆಲೆ ಏರಿಕೆಯ ವಿರುದ್ದ ಪ್ರತಿಭಟನೆ ಮಾಡುತ್ತಿದ್ದರೂ ಮೋದಿ ಕಿವಿಗೊಡುತಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಸುಭದ್ರ ಸರ್ಕಾರ ನೀಡಲು ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ. ಅಂದು ಯುಪಿಎ ಸರಕಾರ ಜಾರಿಗೆ ತಂದ ಮಹತ್ವಾಕಾಂಕ್ಷಿ ಯೋಜನೆಯಾದ ನರೇಗಾ ಇಂದು ಇಲ್ಲದೆ ಹೋಗಿದ್ದರೆ ಕೊವಿಡ್ ಸಂಕಷ್ಟ ಸಮಯದಲ್ಲಿ ಜನ ಸಾಮಾನ್ಯರ ಆತ್ಮಹತ್ಯೆಗಳನ್ನು ಕಾಣಬೇಕಿತ್ತು. ಬಿಜಿಪಿಗೆ ಬಡವರ ಕ್ಷೇಮಕ್ಕಿಂತ ಬಂಡವಾಳಷಾಹಿಗಳ ಉದ್ದಾರವೆ ಮುಖ್ಯವಾಗಿದೆ ಎಂದರು.ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸುದೇಶ್ ಬಾಬು ಮಾತನಾಡಿದರು.

ಎತ್ತಿನಗಾಡಿ, ಸೈಕಲ್ ಏರಿದ ಶಾಸಕ ವೆಂಕಟರವಣಪ್ಪ

      ಪಕ್ಷದ ಕಛೇರಿಯಿಂದ ಹೊರಟ ಪ್ರತಿಭಟನಾ ರ್ಯಾಲಿಯಲ್ಲಿ ಶಾಸಕ ವೆಂಕಟರವಣಪ್ಪ ಮತ್ತು ಎಚ್.ವಿ.ವೆಂಕಟೇಶ್ ಸೈಕಲ್ ತುಳಿದು ಮತ್ತು ಎತ್ತಿನಗಾಡಿಯಲ್ಲಿ ಸವಾರಿ ಮಾಡಿದರು. ಪ್ರತಿಭಟನೆಯು ಪಟ್ಟಣದ ಮಾರುತಿ ಚಿತ್ರಮಂದಿರದ ಪಕ್ಷದ ಕಛೇರಿಯಿಂದ, ಶಿರಾ ರಸ್ತೆ ಮಾರ್ಗದಲ್ಲಿ ಸಾಗಿ, ಬಳ್ಳಾರಿ ರಸ್ತೆಯ ಟೋಲ್‍ಗೇಟ್‍ನ ಅಂಬೇಡ್ಕರ್ ಪುತ್ಥಳಿಗೆ ಮಾರ್ಲಾಪಣೆ ಮಾಡಲಾಯಿತು.

      ಪುರಸಭಾದ್ಯಕ್ಷ ರಾಮಾಂಜಿನಪ್ಪ, ಪುರಸಭಾ ಸದಸ್ಯ ಪಿ.ಎಚ್. ರಾಜೇಶ್, ತೆಂಗಿನಕಾಯಿ ರವಿ, ನಾಗಭೂಷಣರೆಡ್ಡಿ, ವೇಲುರಾಜು, ಮಹಮದ್ ಇಮ್ರಾನ್, ಬಾಲಸುಬ್ರಹ್ಮಣ್ಯ, ವೆಂಕಟರವಣಪ್ಪ, ಪುರಸಭಾ ಮಾಜಿ ಅಧ್ಯಕ್ಷ ಎ.ಶಂಕರರೆಡ್ಡಿ, ಗುರ್ರಪ್ಪ, ಮುಖಂಡರಾದ ಕೋಳಿಬಾಲಾಜಿ, ಸ್ಟುಡಿಯೋ ಅಮರ್‍ನಾಥ್, ಶೇಷಗಿರಿ, ಸುಜಿತ್, ಮಹೇಶ್, ಕಿರಣ್, ಪಿ.ಎಲ್.ಮಣಿ, ವಿ.ಎಚ್.ಪಾಳ್ಯ ಹರೀಶ್, ಪಾಪಣ್ಣ, ಆರ್.ಎ.ಹನುಮಂತರಾಯಪ್ಪ, ಅಲ್ಪಸಂಖ್ಯಾತ ಮುಖಂಡರಾದ ಷಾ, ಬಾಬು, ರಿಜ್ವಾನ್‍ವುಲ್ಲ, ಅಲಿ, ಷಂಷುದ್ದೀನ್, ನೂರಾರು ಕಾರ್ಯಕರ್ತರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap