ಪಾವಗಡ : ಅಂಗಡಿ ಮಳಿಗೆಗಳ ಬಾಡಿಗೆ ವಸೂಲಿ ಮಾಡಿ

 ಪಾವಗಡ :

      ಪುರಸಭೆಗೆ ಸೇರಿದ ಅಂಗಡಿ ಮಳಿಗೆಗಳ ಬಾಡಿಗೆಯನ್ನು ಕಡ್ಡಾಯವಾಗಿ ವಸೂಲಿ ಮಾಡಬೇಕು ಎಂದು ಶಾಸಕÀ ವೆಂಕಟರಮಣಪ್ಪ ಪುರಸಭಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಶುಕ್ರವಾರ ಪುರಸಭಾ ಸಭಾಂಗಣದಲ್ಲಿ ಅಧ್ಯಕ್ಷ ರಾಮಾಂಜಿನಪ್ಪ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪುರಸಭೆಯ ಅದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿದ್ದು, ಪುರಸಭೆಗೆ ಬರುವ ಎಲ್ಲಾ ರೀತಿಯ ಕಂದಾಯಗಳನ್ನು ವಸೂಲಿ ಮಾಡಬೇಕು ಎಂದು ಹೇಳಿದರು.

      ಪಟ್ಟಣದಲ್ಲಿ ಇಲ್ಲಿಯವರೆಗೂ ಪುರಸಭೆಯಾಗಿ 10 ವರ್ಷ ಕಳೆದರೂ ಯಾವುದೇ ರೀತಿಯ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಿಲ್ಲ, ಹಿರಿಯ ನಾಗರಿಕರು, ಮಕ್ಕಳು ಆರೋಗ್ಯವಾಗಿರಲು, ನೆಮ್ಮದಿಯಾಗಿ ಕಾಲ ಕಳೆಯಲು ಉತ್ತಮ ವಾತಾವರಣ ಕಲ್ಪಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

      ಪಟ್ಟಣದ ಎಂಎಜೆ ಸರ್ಕಲ್‍ನಿಂದ ಬಳ್ಳಾರಿ ರಸ್ತೆಯ ಮಾರ್ಗದಲ್ಲಿರುವ ಟ್ಯೂಬುಲರ್ ಪೋಲ್‍ಗಳಿಗೆ ಎಲ್‍ಇಡಿ ವಿದ್ಯುತ್ ದ್ವೀಪಗಳನ್ನು ಅಳವಡಿಸುವಂತೆ ಶಾಸಕರು ಸೂಚಿಸಿದಾಗ ಎಂಜನೀಯರ್ ಅರುಣ್‍ಕುಮಾರ್ ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಪಟ್ಟಣದ ಟೋಲ್‍ಗೇಟ್ ಮತ್ತು ಹೊಸ ಬಸ್ ನಿಲ್ದಾಣದಲ್ಲಿರುವ ಎಸ್‍ಸಿ, ಎಸ್‍ಟಿ ಮೀಸಲಾತಿಯಲ್ಲಿ ಹರಾಜು ಪಡೆದ 11 ಅಂಗಡಿ ಮಳಿಗೆಗಳನ್ನು ಮುಟ್ಟುಗೋಲು ಹಾಕಿಕೊಂಡು, ಕಳೆದ 2 ವರ್ಷಗಳಿಂದ ಮರುಹರಾಜು ಮಾಡದೆ ಪುರಸಭೆಗೆ ನಷ್ಟವುಂಟು ಮಾಡುತ್ತಿದ್ದೀರಾ ಎಂದು ಸದಸ್ಯರಾದ ಪಿ.ಎಚ್.ರಾಜೇಶ್ ಹಾಗೂ ಮುಖ್ಯಾಧಿಕಾರಿ ಸೇರಿದಂತೆ ಅಧಿಕಾರಗಳನ್ನು ತರಾಟೆಗೆ ತೆಗೆದುಕೊಂಡಾಗ, ಸದಸ್ಯರಾದ ಸುರೇಶ್‍ಬಾಬು ಅವರು ಧನಿಗೂಡಿಸಿ, ಕೂಡಲೆ ಮರುಹರಾಜು ಹಾಕಬೇಕು ಎಂದು ಒತ್ತಾಯಿಸಿದಾಗ, ಖಂದಾಯ ತನಿಖಾಧಿಕಾರಿ ನಾಗಭೂಷಣ್ ಪ್ರತಿಕ್ರಿಯಿಸಿ, ಹೀಗಾಗಲೆ ಅಂಗಡಿ ಮಳಿಗೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಅವರ ಆಸ್ತಿ ವಿವರಗಳ ಮಾಹಿತಿ ಪಡೆದುಕೊಂಡಿದು,್ದ ಬಾಕಿ ಇರುವ ಬಾಡಿಗೆಯನ್ನು ವಸೂಲಿ ಮಾಡಲಾಗುತ್ತಿದು,್ದ ಬಾಡಿಗೆ ಕಟ್ಟದಿದ್ದ ಪಕ್ಷದಲ್ಲಿ ಆಸ್ತಿಯನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಭೆಗೆ ತಿಳಿಸಿದರು.

      ಸದಸ್ಯರಾದ ವಿಜಯಕುಮಾರ್ ಮಾತನಾಡಿ, ಪಟ್ಟಣದ ಚರಂಡಿಗಳ ಅಭಿವೃದ್ಧಿಗಾಗಿ ಶಾಸಕರು ಅನುದಾನ ನೀಡಬೇಕು ಎಂದು ಮನವಿ ಮಾಡಿಕೊಂಡರು.

      ತುಮಕೂರಿನ ಕೇಂದ್ರ ಗ್ರಂಥಾಲಯದ ಸದಸ್ಯರಾಗಿ 7ನೆ ವಾರ್ಡನ ಸದಸ್ಯರಾದ ಬಾಲಸುಭ್ರಮಣ್ಯರವರನ್ನು ಆವಿರೋಧವಾಗಿ ಆಯ್ಕೆ ಮಾಡಲಾಯಿತು. ಪುರಸಭಾ ವ್ಯಾಪ್ತಿಯಲ್ಲಿ ವಸತಿ ಉದ್ದೇಶಕ್ಕಾಗಿ ಅಭಿವೃದ್ಧಿ ಪಡಿಸುತ್ತಿರುವ ಲೇಔಟ್‍ಗಳಲ್ಲಿ ಯುಜಿಡಿ ಪಾರ್ಕ್ ಅಭಿವೃದ್ದಿ, ರಸ್ತೆ, ಚರಂಡಿ, ವಿದ್ಯುತ್ ದ್ವೀಪ, ನೀರು ಸರಬರಾಜು ಮತ್ತಿತರ ಸೌಲಭ್ಯಗಳನ್ನು ಸರ್ಕಾರದ ಅದೇಶದಂತೆ ಲೇಔಟ್ ಮಾಲೀಕರೆ ನಿರ್ವಹಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

      ಅಧ್ಯಕ್ಷರಾದ ರಾಮಾಂಜಿನಪ್ಪ, ಮುಖ್ಯಾಧಿಕಾರಿ ಬಿ.ಸಿ.ಅರ್ಚನಾ ಮಾತನಾಡಿದರು. ಸಭೆಯಲ್ಲಿ ಸದಸ್ಯರಾದ ಮಹಮದ್ ಇಮ್ರಾನ್, ಟೆಂಕಾಯಲ ರವಿ, ವೇಲು ರಾಜು, ಧನಲಕ್ಷ್ಮಿ, ಲಕ್ಷ್ಮಿದೇವಿ, ಶಶಿಕಲಾ, ಸುಜಾತ ಮತ್ತಿತರರು ಹಾಜರಿದ್ದರು.
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link