ಬೆಂಗಳೂರು :
ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಪವಿತ್ರಾ ಗೌಡ ತಮ್ಮ ಐಷಾರಾಮಿ ಜೀವನದಿಂದ ಜೈಲಿನ ಕೊಂಪೆಗೆ ಅಡ್ಜಸ್ಟ್ ಆಗಲು ಹರಸಾಹಸ ಪಡುತ್ತಿದ್ದಾರೆ. ಅವರೀಗ ಕೈದಿ ನಂ 6024. ಬೆಳಗ್ಗೆ ಕೈದಿಗಳಿಗೆ ಕೊಡುವ ಉಪ್ಪಿಟ್ಟು ತಿಂದ ಪವಿತ್ರಾ ಜೈಲಿನ ಆವರಣದಲ್ಲಿಯೇ ವಾಕಿಂಗ್ ಸಹ ಮಾಡಿದ್ದಾರೆ.
ಪ್ರತ್ಯೇಕ ಕೊಠಡಿಯಲ್ಲಿ ಇರುವ ಪವಿತ್ರ ಮೌನಕ್ಕೆ ಮೊರೆ ಹೋಗಿದ್ದಾರೆ. ಮತ್ತೊಂದೆಡೆ ಪ್ರಕರಣದ ಇತರೆ ಒಂಬತ್ತು ಆರೋಪಿಗಳನ್ನು ಒಂದೇ ಕಡೆ ಕ್ವಾರೆಂಟೈನ್ ನಲ್ಲಿ ಇರಿಸಲಾಗಿದೆ. ಪವನ್, ರಾಘವೇಂದ್ರ, ನಂದೀಶ್, ಜಗದೀಶ್, ಅನು ಕುಮಾರ್, ನಾಗರಾಜ್, ಲಕ್ಷ್ಮಣ್, ದೀಪಕ್ ಮತ್ತು ಕೇಶವ ಅವರನ್ನು ಒಂದೇ ಬ್ಯಾರೆಕ್ ನಲ್ಲಿ ಇರಿಸಲಾಗಿದೆ.
ಪರಪ್ಪನ ಅಗ್ರಹಾರ ಮುಖ್ಯ ಜೈಲಿನ ಮಹಿಳಾ ಬ್ಯಾರಾಕ್ನಲ್ಲಿ ಒಂಟಿಯಾಗಿದ್ದು, ಇಂದು ಜೈಲಿನ ಆಸ್ಪತ್ರೆಯ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಯಲಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ