ಆಫ್ರಿಕಾದಲ್ಲಿ ಕಂಡು ಬಂತು ಅತಿ ವಿಚಿತ್ರ ಆಚರಣೆ …!

ವಿಂಡ್ಹೋಕ್: 

     ಮನುಷ್ಯನ ಕಲ್ಪನೆಯನ್ನೂ ಮೀರಿ ಜಗತ್ತು ಬೆಳೆಯುತ್ತಿದೆ. ಇಂದು ಟೆಕ್ನಾಲಜಿಗಳೇ ಎಲ್ಲಡೆ ಆವರಿಸಿದೆ. ಆದರೆ, ತಾಂತ್ರಿಕವಾಗಿ ಎಷ್ಟೇ ಮುಂದುವರಿದರೂ ಜನರು ಇಂದಿಗೂ ಕೆಲವು ವಿಚಿತ್ರ ಆಚರಣೆಗಳನ್ನು ಮಾಡುತ್ತಿರುವುದು ವಿಪರ್ಯಾಸವೇ ಸರಿ. ವಿಶ್ವದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯ ಮತ್ತು ಪದ್ಧತಿಗಳಿವೆ.

     ಕೆಲವೊಂದು ಸಾಮಾನ್ಯ ಎನಿಸಿದರೆ, ಕೆಲವು ಆಚರಣೆಗಳು ಎಲ್ಲರನ್ನೂ ಅಚ್ಚರಿಗೆ ದೂಡುತ್ತದೆ. ಅದರಲ್ಲೂ ಆಫ್ರಿಕನ್ ಬುಡಕಟ್ಟು ಜನಾಂಗದವರ ಆಚರಣೆಗಳು ತುಂಬಾ ವಿಭಿನ್ನವಾಗಿರುತ್ತವೆ. ಜಗತ್ತೇ ಅವರ ಆಚರಣೆಗಳತ್ತ ಕುತೂಹಲದಿಂದ ನೋಡುತ್ತದೆ. ಆಫ್ರಿಕನ್​ ಬುಡಕಟ್ಟು ಜನಾಂಗದ ವಿಚಿತ್ರ ಆಚರಣೆಯೊಂದರ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.

     ಆಫ್ರಿಕಾದ ಕೆಲ ಬುಡಕಟ್ಟು ಜನಾಂಗದಲ್ಲಿ ಮದುವೆಯಾದ ದಂಪತಿ ಮೊದಲ ರಾತ್ರಿಯನ್ನು ವಧುವಿನ ತಾಯಿಯೊಂದಿಗೆ ಕಳೆಯುವುದು ವಾಡಿಕೆಯಾಗಿದೆ. ವಧುವಿನ ತಾಯಿ ಮೊದಲ ರಾತ್ರಿಯ ದಿನ ಹಾಜರಾಗಲು ಸಾಧ್ಯವಾಗದಿದ್ದರೆ, ದಂಪತಿಯ ಕೋಣೆಯಲ್ಲಿ ಕುಟುಂಬದ ಹಿರಿಯ ಮಹಿಳೆಯ ಉಪಸ್ಥಿತಿ ಅಗತ್ಯವಾಗಿರುತ್ತದೆ. ಈ ವಿಚಿತ್ರ ಪದ್ಧತಿಯ ಹಿಂದೆ ಒಂದು ಕಾರಣವೂ ಇದೆ. ವಧುವಿನ ತಾಯಿಯು ದಂಪತಿಗೆ ಆ ರಾತ್ರಿಯಲ್ಲಿ ವೈವಾಹಿಕ ಜೀವನವನ್ನು ಹೇಗೆ ಸಂತೋಷದಿಂದ ಮುಂದುವರಿಸಬೇಕೆಂದು ಹೇಳಬೇಕು. ಹೀಗಾಗಿ ವಧುವಿನ ತಾಯಿಯೂ ಕೋಣೆಯಲ್ಲಿ ಇರಬೇಕೆಂದು ಈ ವಿಚಿತ್ರ ಪದ್ಧತಿ ಹೇಳುತ್ತದೆ.

    ಮೊದಲ ರಾತ್ರಿ ವಧು ಏನು ಮಾಡಬೇಕು ಎಂಬ ಸಲಹೆಯನ್ನೂ ತಾಯಿ ನೀಡುತ್ತಾಳೆ. ದಂಪತಿ ಮೊದಲ ರಾತ್ರಿಯನ್ನು ಕಳೆದ ನಂತರ, ತಾಯಿ ತನ್ನ ಮಗಳು ಸಂತೋಷದಿಂದ ಮದುವೆಯಾಗಿದ್ದಾಳೆ ಎಂಬುದನ್ನು ಖಚಿತಪಡಿಸುತ್ತಾಳೆ.

   ಅಂದಹಾಗೆ ಇಂಡೋನೇಷ್ಯಾದಲ್ಲಿಯೂ ವಿಚಿತ್ರವಾದ ವಿವಾಹ ಪದ್ಧತಿಗಳು ಅಸ್ತಿತ್ವದಲ್ಲಿವೆ. ವಿವಾಹಿತ ದಂಪತಿಗಳು ಸ್ನಾನಗೃಹವನ್ನು ಬಳಸದೆ ಮೂರು ದಿನಗಳವರೆಗೆ ಒಟ್ಟಿಗೆ ಇರುವುದು ಇಲ್ಲಿನ ವಾಡಿಕೆ. ಇಂಡೋನೇಷ್ಯಾದ ಟಿಡಾಂಗ್ ಬುಡಕಟ್ಟು ಜನಾಂಗದವರು ಈ ರೀತಿಯ ಆಚರಣೆಯನ್ನು ಮಾಡುತ್ತಾರೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ ದೀರ್ಘಾವಧಿಯ ದಾಂಪತ್ಯ ಜೀವನ ನಡೆಸುತ್ತಾರೆ ಎಂಬುದು ಇಲ್ಲಿನ ಜನರ ನಂಬಿಕೆ. ಇದರಲ್ಲಿ ವಿಫಲರಾದರೆ ಅವರ ದಾಂಪತ್ಯ ಜೀವನ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಜನರು ನಂಬುತ್ತಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap