ತ್ಯಾಜ್ಯಕ್ಕೆ ಬೆಂಕಿ: ಸ್ಥಳೀಯ ನಿವಾಸಿಗಳಿಗೆ ಹೊಗೆಯ ಕಿರಿಕಿರಿ

ತುಮಕೂರು

     ತುಮಕೂರು ವಿಶ್ವವಿದ್ಯಾಲಯದ ಕುವೆಂಪು ನಗರದ ಸಂಪರ್ಕ ರಸ್ತೆಗೆ ಲಗತ್ತಾಗಿರುವ ವಿವಿ ಹಾಸ್ಟೆಲ್‍ಗಳ ತ್ಯಾಜ್ಯವನ್ನು ಪಾಲೆಟೆಕ್ನಿಕ್ ಕಾಲೇಜು ಹಿಂಭಾಗದ ಗುಡಿಯಲ್ಲಿ ಸುರಿದು ಬೆಂಕಿಯಿಡಲಾಗುತ್ತಿದ್ದು, ವಿದ್ಯಾನಗರ ಸುತ್ತಮುತ್ತಲ ಸ್ಥಳೀಯ ನಿವಾಸಿಗಳು ಹೊಗೆಯ ಕಿರಿಕಿರಿಯನ್ನು ಅನುಭವಿಸುವಂತಾಗಿದೆ.

   ವಿವಿಯ ಸ್ನಾತಕ ಪದವಿ, ಸ್ನಾತಕೋತ್ತರ ಪದವಿ ಹಾಸ್ಟೆಲ್ ಹಾಗೂ ಪಾಲೆಟೆಕ್ನಿಕ್ ವಿದ್ಯಾರ್ಥಿಗಳ ಹಾಸ್ಟೆಲ್‍ಗಳು ಈ ಭಾಗದಲ್ಲಿದ್ದು ಹಾಸ್ಟೆಲ್‍ಗಳಲ್ಲಿ ಸಂಗ್ರಹವನ್ನು ಪಾಲಿಕೆ ಕಸ ಎತ್ತುವಳಿ ವಾಹನಗಳು ಸಮರ್ಪಕವಾಗಿ ಸಂಗ್ರಹ ಮಾಡದಿರುವ ಹಿನ್ನೆಲೆಯಲ್ಲಿ ಹಿಂಭಾಗದ ಗುಂಡಿಗೆ ತೆಗೆದುಕೊಂಡು ಹೋಗಿ ಸಿಬ್ಬಂದಿ ಸುರಿಯುತ್ತಿದ್ದು, ಅಲ್ಲಿಯೇ ಬೆಂಕಿ ಹಚ್ಚಿ ವಿಲೇ ಮಾಡುವ ಕಾರ್ಯ ಮಾಡುತ್ತಿದ್ದಾರೆ.

    ಇದರಿಂದ ವಿದ್ಯಾನಗರ ವಾಟರ್ ಟ್ಯಾಂಕ್ ಸುತ್ತಮುತ್ತಲ ನಿವಾಸಿಗಳು, ಹನುಮಂತಪುರ ಲಿಂಕ್ ರಸ್ತೆಯ ಮನೆಗಳವರಿಗೆ ತೊಂದರೆಯಾಗುತ್ತಿದ್ದು ಎಂದು ದೂರಿದ್ದು, ಸುಡುವ ತ್ಯಾಜ್ಯದ ಹೊಗೆ ಕೆಟ್ಟವಾಸನೆ ಮನೆಗಳಿಗೆ ನುಸುಳುತ್ತಿದ್ದು, ಆರೋಗ್ಯದ ಮೇಲೆ ಪರಿಣಾಮಬೀರುತ್ತಿದೆ. ಮನೆಗಳಲ್ಲಿ ಹಿರಿಯರು, ಗರ್ಭಿಣಿಯರು, ಬಾಣಂತಿ ಮಕ್ಕಳು ಎಲ್ಲರೂ ವಾಸಿಸುತ್ತಿದ್ದು, ತ್ಯಾಜ್ಯ ಸುಡುವ ಹೊಗೆಯಿಂದ ಕಿರಿಕಿರಿ, ಸಮಸ್ಯೆ ಎದುರಿಸುತ್ತಿದ್ದಾರೆ.

  ಸಂಬಂಧ ಪಟ್ಟ ತುಮಕೂರು ವಿವಿ, ಪಾಲಿಟೆಕ್ನಿಕ್ ಕಾಲೇಜು ಆಡಳಿತಮಂಡಳಿಯವರಾಗಲೀ, ಪಾಲಿಕೆಯವರ ಗಮನಕ್ಕೆ ತಂದರೂ ಈ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ಹೊರಹಾಕಿದ್ದಾರೆ. ತ್ಯಾಜ್ಯ ಸಮರ್ಪಕ ವಿಲೇ ಮಾಡದೆ ಗುಂಡಿಯಲ್ಲೆ ಸುಡುವುದರಿಂದ ವಾಯುಮಾಲಿನ್ಯ ಉಂಟಾಗುತ್ತಿರುವ ಜೊತೆಗೆ ಅನಾರೋಗ್ಯಕ್ಕೂ ಕಾರಣವಾಗುತ್ತಿದೆ. ಕೂಡಲೇ ಈ ಸಮಸ್ಯೆಗೆ ಮುಕ್ತಿ ಕಾಣಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap