ನವದೆಹಲಿ :
ಆಡಳಿತ ಬದಲಾವಣೆಯ ಪಿತೂರಿಗೆ ಇಂದು ಪಾಕಿಸ್ತಾನದ ಜನರು ಭಾರೀ ಬೆಲೆ ತೆರುತ್ತಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ.
ಮಾಜಿ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಮತ್ತೊಮ್ಮೆ ಕೆಲವು ಅಪರಾಧಿಗಳು ಅಧಿಕಾರಕ್ಕೆ ಬರಲು ಸಹಾಯ ಮಾಡಿದ್ದಾರೆ ಎಂದು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಆರೋಪಿಸಿದ್ದು ಸರ್ಕಾರದ ಸಾಲವನ್ನು ಹೆಚ್ಚಿಸಿದೆ ಮತ್ತು ಹಣದುಬ್ಬರವು ಕಾಡಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಾರುಕಟ್ಟೆಯಲ್ಲಿ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ 18.74 ಪಾಯಿಂಟ್ ಗಳ ಕುಸಿತ ಕಂಡಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಗೆ ಸರ್ಕಾರದ ನಿಲುವು ಇದಕ್ಕೆ ಕಾರಣ ಎಂದು ವಿಶ್ಲೇಷಕರು ಹೇಳಿದ್ದಾರೆ. ಪಾಕಿಸ್ತಾನದ ಆರ್ಥಿಕತೆಯು ನಗದು ಕೊರತೆಯನ್ನು ಎದುರಿಸುತ್ತಿರುವ ಅಸ್ಥಿರ ಸ್ಥಿತಿಯಲ್ಲಿದೆ. ಕೆಲವು ವಾರಗಳ ಹಿಂದೆ, ಇಲ್ಲಿನ ವಿದೇಶೀ ವಿನಿಮಯ ಸಂಗ್ರಹವು ಸಾರ್ವಕಾಲಿಕ ಕನಿಷ್ಠ $2.9 ಶತಕೋಟಿಗೆ ಕುಸಿಯಿತು ಎಂದರು.
ಇಮ್ರಾನ್ ಖಾನ್ ಅವರನ್ನು ಏಪ್ರಿಲ್‌ನಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಅಧಿಕಾರದಿಂದ ಹೊರಹಾಕ ಲಾಯಿತು. ಅಂದಿನಿಂದ ಅವರ ಮತ್ತು ಬಾಜ್ವಾ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಮಾಜಿ ಸೇನಾ ಮುಖ್ಯಸ್ಥ ತನ್ನನ್ನು ಕೊಲ್ಲಲು ಮತ್ತು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲು ಬಯಸಿದ್ದರು ಎಂದು ಖಾನ್ ಈ ಹಿಂದೆ ಆರೋಪಿಸಿದ್ದರು.