ತುಮಕೂರು
ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾವಿನಕೆರೆಯಲ್ಲಿ ಜಾತ್ರೆಯ ಪ್ರಯುಕ್ತ ದೇವರ ಕೊಂಡವನ್ನು ಸಿದ್ಧಪಡಿಸಿದ್ದರು.
ಜಿಲ್ಲೆಯಲ್ಲಿ ದೇವರ ಕೊಂಡ ಹಾಯುತ್ತಿದ್ದ ವೇಳೆಯಲ್ಲಿ ನೂಕು ನುಗ್ಗಲು ಉಂಟಾದ ಪರಿಣಾಮ, 30ಕ್ಕೂ ಹೆಚ್ಚು ಭಕ್ತರು ಕೊಂಡಕ್ಕೆ ಬಿದ್ದು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.ದೇವರ ಕೊಂಡ ಹಾಯುವುದಕ್ಕೆ ನೂಕು ನುಗ್ಗಲು ಉಂಟಾಗಿದೆ. ಈ ವೇಳೆ ಕೊಂಡದಲ್ಲಿ ಭಕ್ತರು ಬಿದ್ದ ಪರಿಣಾಮ 30ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿರುವುದಾಗಿ ಹೇಳಲಾಗುತ್ತಿದೆ.
ಕೊಂಡಕ್ಕೆ ಬಿದ್ದು ಸುಟ್ಟ ಗಾಯವಾಗಿರುವಂತ ಜನರನ್ನು ತುರುವೆಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ