ಸಂಸತ್ತಿನಲ್ಲಿ ಜನಪರ ವಿಷಯಗಳ ಕುರಿತು ಚರ್ಚೆ ನಡೆಯಬೇಕು : ಉಪರಾಷ್ಟ್ರಪತಿ

ಬೆಂಗಳೂರು

     ಸಂಸತ್ತಿನಲ್ಲಿ ಜನಪರ ವಿಷಯಗಳ ಕುರಿತು ಚರ್ಚೆ ನಡೆಯಬೇಕು ಎಂದು ಉಪರಾಷ್ಟçಪತಿ ಜಗದೀಪ್ ಧನ್‌ಕರ್ ಪ್ರತಿಪಾದಿಸಿದ್ದಾರೆ. ಎಂ.ಎಸ್ ರಾಮಯ್ಯ ಕಾಲೇಜಿನ ಆವರಣದಲ್ಲಿ ಎಂ.ಎಸ್. ರಾಮಯ್ಯ ಅವರ ಜನ್ಮಶತಮಾನೋತ್ಸವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ ದೇಗುಲವಾಗಿದೆ. ಕಾರ್ಯಾಂಗದ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಸಮಪರ್ಕವಾಗಿ ಅವಲೋಕಿಸುವುದು ಸಂಸತ್ತು ಎಂದರು.

     ಇದಾಗಲೇ ಭಾರತ 5ನೇ ದೊಡ್ಡ ಆರ್ಥಿಕ ದೇಶವಾಗಿ ಹೊಮ್ಮಿದೆ. 2047ರಲ್ಲಿ ಭಾರತವು ಸ್ವಾತಂತ್ರ÷್ಯ ಶತಮಾನೋತ್ಸವವನ್ನು ಆಚರಿಸಲಿದೆ. ಈ ಸಂದರ್ಭದಲ್ಲಿ ವಿಶ್ವದಲ್ಲಿಯೇ ಭಾರತ ನಂ.1 ಆಗುವ ಗುರಿ ಹೊಂದಲಾಗಿದೆ. ಭಾರತವನ್ನು ವಿಶ್ವ ಗುರುವನ್ನಾಗಿಸುವ ಗುರಿಯನ್ನು ಸಾಧಿಸುವಲ್ಲಿ ಇಂದಿನ ಯುವ ಶಕ್ತಿ ಅಗತ್ಯವಾಗಿದೆ.

    ಸೂಕ್ತ ಶಿಕ್ಷಣ ಪಡೆಯುವ ಮೂಲಕ ಯುವಕರು ಗುರಿಯನ್ನು ಸಾಧಿಸಬೇಕಿದೆ ಎಂದರು. ಉತ್ತಮ ಅಭಿಪ್ರಾಯದ ಸಂಗ್ರಹದ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡುವುದು ಸಂಸದರ ಜವಾಬ್ದಾರಿ. ಈ ನಿಟ್ಟಿನಲ್ಲಿ ಸಂಸದರು ಕಾರ್ಯಪ್ರವೃತ್ತರಾಗಬೇಕು ಎಂದು ಪ್ರತಿಪಾದಿಸಿದ ಅವರು, ಯುವ ಜನತೆ ಇದರ ಬಗ್ಗೆ ಅರಿಯಬೇಕು ಎಂದು ಜಗದೀಪ್ ಧನ್‌ಕರ್ ಹೇಳಿದರು.

    ಇದೊಂದು ಅವಿಸ್ಮರಣೀಯ ದಿನ. ಶಿಕ್ಷಣ ಜೀವನದ ಬುನಾದಿ. ಈ ಬುನಾದಿಯನ್ನು ಗಟ್ಟಿಗೊಳಿಸಿರುವ ಅಪೂರ್ವ ವ್ಯಕ್ತಿ ಡಾ.ಎಂ.ಎಸ್‌ರಾಮಯ್ಯ ಎಂದು ಶ್ಲಾಘಿಸಿದರು. ದೇಶದಲ್ಲಿ ಶಿಕ್ಷಣವನ್ನು ಉನ್ನತೀಕರಣಗೊಳಿಸಲು ರಾಮಯ್ಯನವರು ಜೀವನ ಮುಡುಪಾಗಿಟ್ಟಿದ್ದ ಕರ್ಮಯೋಗಿ ಎಂದರು. ಕೋವಿಡ್ ಸಮಯದಲ್ಲಿ ಇಡೀ ಜಗತ್ತೇ ಭಾರತವನ್ನು ಕೊಂಡಾಡಿದೆ. 220 ಕೋಟಿ ಲಸಿಕೆಯನ್ನು ಉಚಿತವಾಗಿ ನೀಡಿದ್ದು ಮಾತ್ರವಲ್ಲದೇ, ವಿದೇಶಿಗರಿಗೂ ಲಸಿಕೆಯನ್ನು ನೀಡಲಾಗಿದೆ. ಭಾರತದ ಈ ಅದ್ಭುತ ಶಕ್ತಿಯನ್ನು ಭವಿಷ್ಯದಲ್ಲಿ ಉಳಿಸಿಕೊಂಡು ಹೋಗುವುದು ಇಂದಿನ ಯುವ ಸಮುದಾಯದ ಕರ್ತವ್ಯವಾಗಿದೆ ಎಂದರು.

     ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು , ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕ ಉತ್ತಮ ಪಾತ್ರವಹಿಸಿದೆ. ರಾಜ್ಯಕ್ಕೆ ಡಾ.ಎಂ.ಎಸ್. ರಾಮಯ್ಯ ಅವರ ಸೇವೆ ಅವಿಸ್ಮರಣೀಯ ಎಂದರು. ಕರ್ನಾಟಕದಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿದ್ದು, ಅವುಗಳ ಬೆಳವಣಿಗೆಯಿಂದ ದೇಶದ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಲಿದೆ. ಮುಂದಿನ 25 ವರ್ಷಗಳಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟçವಾಗಿ ನಿರ್ಮಾಣವಾಗಲಿದೆ ಎಂದು ಪ್ರತಿಪಾಧಿಸಿದರು. ಕರ್ನಾಟಕ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದ್ದು, ಅದು ದೇಶದ ಬೆಳವಣಿಗೆಗೆ ಪೂರಕವಾಗಲಿದೆ ಎಂದು ರಾಜ್ಯಪಾಲರು ತಿಳಿಸಿದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap