ಬೆಂಗಳೂರು
ನಗರದ ಹರವಲಯದಿಂದ ದಟ್ಟಣೆ ರಹಿತ ಸಂಚಾರಕ್ಕಾಗಿ ನಿರ್ಮಾಣವಾದ ನೈಸ್ ರಸ್ತೆಯಲ್ಲಿ ಮರು-ಟಾರಿಂಗ್ ತಿಂಗಳುಗಳಿಂದ ನಡೆಯುತ್ತಿದ್ದು ಇದು ಮುಗಿಯುವ ಸೂಚನೆ ಕಾಣುತ್ತಿಲ್ಲ. ರಸ್ತೆಯುದ್ದಕ್ಕೂ ಜಾಮ್‌ಗಳು ಸಾಮಾನ್ಯವಾಗಿದ್ದು ಹೀಗಿರುವಾಗ ಇಲ್ಲಿ ಏಕೆ ಟೋಲ್ ತೆಗೆದುಕೊಳ್ಳುತ್ತಿದ್ದಾರೆ? ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
ನೈಸ್ ರಸ್ತೆಯ ದುರಸ್ತಿ ಮತ್ತು ಮರು-ಟಾರಿಂಗ್ ತಿಂಗಳುಗಳಿಂದ ನಡೆಯುತ್ತಿದ್ದರೂ ಟೋಲ್ ಮಾತ್ರ ಅಚ್ಚುಕಟ್ಟಾಗಿ ಪಡೆಯಲಾಗುತ್ತಿದೆ. ಇದು ಅಪರಾಧವಾಗಿದೆ. ರಸ್ತೆ ಕಾಮಗಾರಿ ಮುಗಿಯುವವರೆಗೆ ಟೋಲ್ ತೆಗೆದುಕೊಳ್ಳುವುದನ್ನು ನಿಲ್ಲಿಸುವಂತೆ ಸರಕಾರ ಆದೇಶ ನೀಡಬೇಕು ಎಂದು ಜನಸಾಮಾನ್ಯರು ಮನವಿ ಮಾಡಿದ್ದಾರೆ. ಜೊತೆಗೆ ಈ ಸಂದೇಶವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಟ್ಯಾಗ್ ಮಾಡಲಾಗಿದೆ.
ನೈಸ್ ರಸ್ತೆ ಮೂಲಕ ನಿತ್ಯ ಲಕ್ಷಾಂತರ ವಾಹನಗಳು ಸಂಚಾರ ಮಾಡುತ್ತಿವೆ. ಅದರೆ ದುಬಾರಿ ಟೋಲ್ ಶುಲ್ಕ ಪಾವತಿಸಿ ಪ್ರಯಾಣ ಮಾಡುವ ವಾಹನ ಸವಾರರು ರಸ್ತೆಯ ಹದಗೆಟ್ಟ ಸ್ಥಿತಿಯಿಂದಾಗಿ ನಿತ್ಯ ಪರದಾಡುವಂತಾಗಿದೆ. ರಸ್ತೆ ದುಸ್ಥಿತಿ ಬಗ್ಗೆ ಸಾರ್ವಜನಿಕರು ಹಾಗೂ ನಿವಾಸಿಗಳ ಮತ್ತು ಉದ್ಯಮಿಗಳು ದೂರು ನೀಡುತ್ತಲೇ ಇರುತ್ತಾರೆ. ದೂರಗಳ ಬಗ್ಗೆ ತಡವಾಗಿ ಎಚ್ಚೆತ್ತುಕೊಂಡರೂ ನೈಸ್ ರಸ್ತೆಯ ದುರಸ್ತಿ ಮತ್ತು ಮರು-ಟಾರಿಂಗ್ ತಿಂಗಳುಗಳಿಂದ ನಡೆಯುತ್ತಲೇ ಇದೆ. ಆದ್ದರಿಂದ ಇಲ್ಲಿ ಟ್ರಾಫಿಕ್ ಉಂಟಾಗುತ್ತಿದೆ. ಹೀಗಿದ್ದರೂ ಟೋಲ್ ಯಾಕೆ ಸ್ವೀಕರಿಸಲಾಗುತ್ತಿದೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
