ಗ್ರಾಹಕರೊಂದಿಗೆ ಅಗೌರವದ ವರ್ತನೆ : ವ್ಯವಸ್ಥಾಪಕಿ ವಿರುದ್ಧ ಆಕ್ರೋಶ

ಮಧುಗಿರಿ :

     ಆಭರಣದ ಸಾಲ ಮರು ಪಾವತಿ ಮಾಡಿದರು ಸಹ ಗ್ರಾಹಕರಿಗೆ ಆಭರಣವನ್ನು ಶಾಖಾ ವ್ಯವಸ್ಥಾಪಕಿ ವಾಪಸ್ ನೀಡದೆ ಅಗೌರವದೊಂದಿಗೆ ವರ್ತಿಸುತ್ತಿದ್ದಾರೆಂದು ಆರೋಪಸಿ ಗ್ರಾಮಸ್ಥರು ಬ್ಯಾಂಕಿನ ಮುಖ್ಯ ದ್ವಾರಕ್ಕೆ ಬೀಗ ಜಡಿದು ಪ್ರತಿಭಟಿಸಿದರು.

    ತಾಲೂಕಿನ ಮಿಡಿಗೇಶಿ ಹೋಬಳಿಯ ಹೊಸಕೆರೆ ಗ್ರಾಮದಲ್ಲಿನ ಎಸ್ ಬಿ ಐ ಬ್ಯಾಂಕ್ ವ್ಯವಸ್ಥಾಪಕಿ ಆಸ್ತಾ ರವರು ಗುಜರಾತ್ ಮೂಲದವರಾಗಿದ್ದು ಗ್ರಾಹಕರೊಂದಿಗೆ ಸೌಜನ್ಯವಾಗಿ ವರ್ತಿಸುತ್ತಿಲ್ಲಾ , ಗ್ರಾಹಕರು ಏನಾದರೂ ಪ್ರಶ್ನೆ ಮಾಡಿದರೆ ಪದೆ ಪದೇ ಮೊಬೈಲ್ ತೆಗೆದು ವಿಡಿಯೋ ಮಾಡುವುದು , ಯಾರಿ ಬೇಕಾದರೂ ಹೇಳಿ ಕೊಳ್ಳಿ ಎನ್ನುವುದು ನಾನು ಕನ್ನಡ ಭಾಷೆ ಮಾತನಾಡುವುದಿಲ್ಲ , ನನ್ನ ಬಳಿ ಮಾತನಾಡಬೇಕೆಂದರೆ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಯೇ ಮಾತನಾಡಬೇಕು ಇಲ್ಲವಾದರೆ ಬ್ಯಾಂಕಿನಿಂದ ಹೊರ ಹೋಗಿ ಎಂದು ಗದರಿಸಿ ಕಳಿಸುತ್ತಿದ್ದಾರೆಂಬ ಗಂಭೀರ ಆರೋಪಗಳು ವ್ಯವಸ್ಥಾಪಕಿ ವಿರುದ್ಧ ಕೇಳಿ ಬಂದಿವೆ.

     ಗ್ರಾಮದ ತಿಮ್ಮಣ್ಣ ಎನ್ನುವವರು ಬ್ಯಾಂಕಿನಲ್ಲಿ ಆಭರಣವನ್ನು ಅಡಮಾಡನ ಮಾಡಿದ್ದು ಆಕಾಲಿಕ ವಾಗಿ ಮೃತ ಪಟ್ಟಿದ್ದರು , ಪತ್ನಿ ಹಾಗೂ ಪುತ್ರ ಆಭರಣದ ಸಾಲದ ಮೊತ್ತ 1,73000 ರೂ ಪಾವತಿ ಮಾಡಿ ಬ್ಯಾಂಕಿಗೆ ನೀಡಬೇಕಾಗಿದ್ದ ಅಗತ್ಯ ದಾಖಲೆಗಳನ್ನು ನೀಡಿದ್ದರು ಸಹ ಆಭರಣವನ್ನು ಸುಮಾರು ಒಂದು ತಿಂಗಳಿನಿಂದ ವಾಪಸ್ ನೀಡದೆ ಇಂಗ್ಲೀಷ್ ಭಾಷೆಯಲ್ಲಿ ಮನಸೋ ಇಚ್ಚೆ ಬೈದು ಕಳುಹಿಸುತ್ತಿದ್ದಾರೆ ಎಂದು ಮೃತ ತಿಮ್ಮಣನ ಕುಟುಂಬದವರು ಆರೋಪಸಿದ್ದಾರೆ.

    ವಿಷಯ ತಿಳಿದ ಗ್ರಾಮಸ್ಥರು ಪಂಚಾಯತಿ ಸದಸ್ಯರು ಬ್ಯಾಂಕಿಗೆ ಬೀಗ ಜಡಿದು ವ್ಯವಸ್ಥಾಪಕಿಯ ವಿರುದ್ಧ ಶನಿವಾರ ಪ್ರತಿಭಟಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap