ತಿಪಟೂರು:
ಗುಡಿಗೊಂಡನಹಳ್ಳಿ ಗ್ರಾಪಂನಲ್ಲಿ ನಕಲಿ ಎನ್‍ಎಂಆರ್ ಸೃಷ್ಠಿಸಿ ವಂಚನ
ಲಂಚಕೊಟ್ಟರೆ ತಕ್ಷಣ ಬಿಲ್, ಇಲ್ಲಿದಿದ್ದರೆ ಬಿಲ್ಲೆ ಆಗೋಲ್ಲ (ಸ್ಲಗ್‍ನಲ್ಲಿ ಬರಲಿ)
ಕೊರೋನಾ ಸಂಕಷ್ಟದ ಸಮಯದಲ್ಲಿ ಸಾಲ-ಸೋಲ ಮಾಡಿ ಹಣ ಹೊಂದಿಸಿಕೊಂಡು ಮನೆ ಮಂದಿಯಲ್ಲಾ ಸೇರಿ ಎನ್‍ಆರ್‍ಇಜಿಪಿ ಕೆಲಸಮಾಡಿ ಇಂದು ಹಣಕ್ಕಾಗಿ ಅಲೆಯವಂತಾಗಿದೆ. ಸುಮ್ಮನೆ ಇದ್ದಿದ್ದರೆ ಮನೆಯ ಚಿನ್ನಾಭರಣವಾದರೂ ಉಳಿಯುತ್ತಿತ್ತೆಂದು ಎನ್‍ಆರ್‍ಇಜಿಪಿ ಯೋಜನೆಯಲ್ಲಿ ಕೃಷಿಹೊಂಡ, ಉದಿಬದು, ತೊಟ್ಟಿ ಕಟ್ಟಿಕೊಂಡವರು ಬಿಲ್ ಆಗದೇ ವ್ಯಥೆ ಪಡುತ್ತಿದ್ದು, ಶೀಘ್ರ ಬಿಲ್ ಮಾಡಿಕೊಡುವಂತೆ ಆಗ್ರಹಿಸಿ ಗುಡಿಗೊಂಡನಹಳ್ಳಿ ಗ್ರಾಪಂ ಕಚೇರಿ ಮುಂದೆ ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕಿಗೆ ಅಲೆಯುವ ಫಲಾನುಭವಿಗಳು :
ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಮಾಡಿ ಹಣ ಕೇಳಲು ಹೋದರೆ ನಕಲಿ ಎನ್‍ಎಂಆರ್‍ಗಳನ್ನು ತೆಗೆದುಕೊಡುತ್ತಾರೆ. ನಾವು ಈಗ ಹಣ ಬ್ಯಾಂಕಿಗೆ ಬಂದಿರಬಹುದೆಂದು ಬ್ಯಾಂಕಿಗೆ ಹೋದರೆ ನಮ್ಮ ಖಾತೆಗೆ ಹಣ ಬಂದೆ ಇರುವುದಿಲ್ಲವೆಂದು ಮಹಿಳೆಯೊಬ್ಬರು ನೊಂದು ನುಡಿದಿದ್ದಾರೆ. ಇದೇ ರೀತಿ ನಾವು ಖರ್ಚು ಮಾಡಿದ ಹಣವೆಲ್ಲಾ ಬ್ಯಾಂಕಿಗೆ ತಿರುಗಾಡುವುದಕ್ಕೆ ಸರಿ ಹೋಗುತ್ತಿದೆ. ಸರಕಾರ ಕೊರೋನಾ ಸಂಕಷ್ಟದ ಸಮಯದಲ್ಲಿ ಜನರಿಗೆ ಅನುಕೂಲವಾಗಲೆಂದು ಮಾಡಿದ ಯೋಜನೆ ಸಂಪೂರ್ಣವಾಗಿ ನಮ್ಮ ಗ್ರಾಪಂಯಲ್ಲಿ ಸಂಪೂರ್ಣವಾಗಿ ನೆಲಕಚ್ಚಿದೆ ಎಂದು ಮಹಿಳೆ ಇದೇ ವೇಳೆ ದೂರಿದರು.
ಲಂಚ ಕೊಟ್ಟರೆ ಬಿಲ್ :
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದಿಬದು ನಿರ್ಮಾಣ ಮಾಡಿ 16 ತಿಂಗಳು ಕಳೆದಿವೆ. ಒಟ್ಟು 27 ಸಾವಿರ ರೂ. ಖರ್ಚಾಗಿದ್ದು, ಇತ್ತೀಚೆಗೆ 9000 ರೂ ಗಳನ್ನು ಎನ್‍ಎಂಆರ್ ಮಾಡಿ ಬಿಲ್‍ಹಣ ನೀಡಿದ್ದಾರೆ. ಬಿಲ್ ಪೂರ್ಣ ಮಾಡಿಕೊಡಿ ಎಂದರೆ 2 ಸಾವಿರ ಲಂಚ ಕೇಳುತ್ತಾರೆ. ಮೊದಲು ಕೆಲಸಮಾಡಿ ಕೊಡಿ ನಂತರ ಹಣ ಕೊಡುತ್ತೇನೆ ಎಂದರೂ ಕೆಲಸ ಮಾಡಿಕೊಟ್ಟಿಲ್ಲ. ಆದರೆ ತಕ್ಷಣ ಲಂಚಕೊಟ್ಟರೆ 2021ರ ಜೂನ್‍ನಲ್ಲಿ ಕಾಮಗಾರಿ ಮಾಡಿದವರಿಗೆ ಬಿಲ್ ಮಾಡಿಕೊಡತ್ತಾರೆ ಇದು ಹೇಗೆ ಸಾಧ್ಯವೆಂದು ಗ್ರಾಮಸ್ಥ ಮನೊರಂಜನ್ ಪ್ರಶ್ನಿಸಿದ್ದಾರೆ
ವಾರದಲ್ಲಿ ಒಂದು ದಿನ ಬಂದು ಸಹಿ :
ಗ್ರಾಪಂ ನೌಕರರು ಪ್ರತಿ ದಿನ ಕಚೇರಿಗೆ ಬರುವುದೇ ಇಲ್ಲ. ವಾರಕ್ಕೊಂದು ದಿನ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕುತ್ತಾರೆ. ಹೀಗಾದರೆ ಗ್ರಾಮಗಳು ಉದ್ದಾರವಾಗುವುದು ಹೇಗೆ? ಇಷೆಲ್ಲಾ ಆರೋಪಗಳಿದ್ದರೂ ಪಿಡಿಓ ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ, ತಾಪಂ ಇಓ ಪರಿಶೀಸುತ್ತೇನೆ ಎನ್ನುತ್ತಾರೆ. ಹೀಗಾದರೆ ಕೆಲಸ ಮಾಡಿದ ನಾವು ಹಣಕ್ಕಾಗಿ ಎಷ್ಟು ದಿನ ತಿರುಗಬೇಕು ಎಂಬುದೇ ತಿಳಿಯದಾಗಿದ್ದು, ಸರ್ಕಾರಿ ಯೋಜನೆಗಳ ಸಹವಾಸವೇ ಬೇಡವೆಂಬ ಭಾವನೆ ಉಂಟಾಗುತ್ತಿದೆ ಎಂದು ನೊಂದವರು ನುಡಿದಿದ್ದಾರೆ.
ಸದಸ್ಯರಾದ ನಮಗೆ ಗ್ರಾಪಂನಲ್ಲಿ ಕೆಲಸಗಳನ್ನು ಮಾಡಿಕೊಡುತ್ತಿಲ್ಲವೆಂದರೆ ಸಾಮಾನ್ಯ ಜನರ ಪರಿಸ್ಥಿತಿ ಹೇಗಿರಬೇಕು? ತೊಟ್ಟಿ ಕಟ್ಟಿಸಿ ವರ್ಷವಾದರೂ ಹಣ ಬಿಡುಗಡೆಯಾಗಿಲ್ಲ, ಆದರೇ ನನಗಿಂತ ಕೊನೆಯಲ್ಲಿ ಕೆಲಸ ಮಾಡಿದವರಿಗೆ ಹೇಗೆ ಬಿಲ್ ಆಗುತ್ತಿದೆ, ಇಲ್ಲಿ ಲಂಚ ಕೊಟ್ಟವರ ಕೆಲಸಗಳು ಮಾತ್ರ ಆಗುತ್ತವೆ.
-ಪ್ರಭು, ಗ್ರಾಪಂ ಸದಸ್ಯ
ಗುಡಿಗೊಂಡನಹಳ್ಳಿ ಗ್ರಾಪಂನಲ್ಲಿ ಒಂದೂ ಗ್ರಾಮಸಭೆ, ವಾರ್ಡ್ ಸಭೆಗಳೂ ನಡೆಯುತ್ತಿಲ್ಲ, ಎನ್‍ಎಂಆರ್‍ಜಿಪಿ ಯೋಜನೆಯಂತೂ ಸಂಪೂರ್ಣವಾಗಿ ಹಾಳಾಗಿ ಹೋಗಿದೆ.
-ನಾಗತೀ ಸದಸ್ಯಹಳ್ಳಿ ಕೃಷ್ಣಮೂರ್ತಿ, ಗ್ರಾಪಂ
ಈ ಬಗ್ಗೆ ನನಗೆ ಯಾವುದೇ ದೂರುಗಳು ಬಂದಿಲ್ಲ, ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರಷ್ಟೆ, ದಾಖಲೆಗಳನ್ನು ಕೊಟ್ಟರೆ ಪರೀಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ.
-ಸುದರ್ಶನ್, ತಾಪಂ ಇಓ
ಜೈಲಿಗೆ ಕಳಿಸುತ್ತಾರೆ, ಪಿಡಿಓ ಸಂಭಾಷಣೆ : ನಾನು ಬೆಳಗ್ಗೆ 11 ಗಂಟೆಗೆ ಬರುತ್ತೇನೆ, ಅಷ್ಟರಲ್ಲಿ ಎಲ್ಲಾ ಎನ್‍ಎಂಆರ್‍ಗಳನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿಬಿಡು ಇಲ್ಲದಿದ್ದರೆ ಇವರು (ಅವ್ಯಾಚವಾಗಿ) ನಮ್ಮನ್ನು ಜೈಲಿಗೆ ಕಳುಹಿಸಿಬಿಡುತ್ತಾರೆ, ಹಿಂದಿನವರು ಹೀಗೆಯೇ ಲೋಕಾಯುಕ್ತದಲ್ಲಿ ತಗಲಾಕಿಕೊಂಡಿದ್ದಾರೆ. ನಾನು ಎನ್‍ಎಂಆರ್‍ಗಳನ್ನು ಮಾಡು ಎಂದು ಹೇಳುತ್ತೇನೆ, ಆದರೇ ನೀನು ಏನು ಮಾಡಬೇಡ. ಇಲ್ಲದಿದ್ದರೆ ತಗಲಾಕಿಕೊಳ್ಳುತ್ತೇವೆ ಎಚ್ಚರವಾಗಿರು ಎಂದು ಕಂಪ್ಯೂಟರ್ ಆಪರೇಟರ್‍ಗೆ ಹೇಳಿರುವ ಆಡಿಯೋ ದೊರಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ