ಜನರ ಕಷ್ಟಕ್ಕೆ ದುಡ್ಡಿಲ್ಲ, ಸಂಬಳ, ಭತ್ಯೆ ಹೆಚ್ಚಿಸಿಕೊಂಡ ಶಾಸಕರು, ಸಚಿವರು!

ಜನರ ಕಷ್ಟಕ್ಕೆ ದುಡ್ಡಿಲ್ಲ, ಸಂಬಳ, ಭತ್ಯೆ ಹೆಚ್ಚಿಸಿಕೊಂಡ ಶಾಸಕರು, ಸಚಿವರು!

ಶಾಸಕರು, ಸಭಾಧ್ಯಕ್ಷರು, ವಿಪಕ್ಷ ನಾಯಕ ಹಾಗೂ ಸಚೇತಕರ ಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಸದನ ಕಲಾಪ ಯಾವುದೇ ಚರ್ಚೆ ಇಲ್ಲದೇ ನಡೆದರೂ ಯಾವುದೇ ಪ್ರತಿರೋಧವಿಲ್ಲದೇ ಶಾಸಕರು, ಸಚಿವರು, ಸಭಾಧ್ಯಕ್ಷರು ಹಾಗೂ ವಿಪಕ್ಷ ನಾಯಕರು ತಮ್ಮ ಸಂಬಳ ಹಾಗೂ ಭತ್ಯೆ ಹೆಚ್ಚಿಸಿಕೊಂಡಿದ್ದಾರೆ.

ಸರಕಾರಕ್ಕೆ ಜನರ ಕಷ್ಟಗಳಿಗೆ ಸ್ಪಂದಿಸಲು ಹಣವಿಲ್ಲ. ಆದರೆ ಇದಕ್ಕೆ ಹಣ ಎಲ್ಲಿಂದ ಬರುತ್ತದೆ?

ಸಭಾಧ್ಯಕ್ಷರು/ ಉಪಸಭಾಧ್ಯಕ್ಷರ ಪರಿಷ್ಕೃತ ಭತ್ಯೆ (ರೂ.ಗಳಲ್ಲಿ)

ಸಂಬಳ: 50,000ದಿಂದ 75,000

ಆತಿಥ್ಯ ವೇತನ ವಾರ್ಷಿಕ: 3,00,000ದಿಂದ 4,00,000

ಮನೆ ಬಾಡಿಗೆ: 80,000 ರಿಂದ 1,60,000

ವಾಹನ ಇಂಧನ: 1000 ಲೀಟರ್ ರಿಂದ 2000 ಲೀಟರ್

ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 30 ರಿಂದ 40

ದಿನ ಭತ್ಯೆ (ಪ್ರಯಾಣ): ದಿನಕ್ಕೆ 2000ದಿಂದ 3000

ಹೊರ ರಾಜ್ಯ ಪ್ರವಾಸ: ದಿನಕ್ಕೆ 2500 +5000 ದಿಂದ 3000+7000

ವಿಪಕ್ಷ ನಾಯಕರ ಪರಿಷ್ಕೃತ ಭತ್ಯೆ

ಸಂಬಳ:40,000 ದಿಂದ 60,000

ಆತಿಥ್ಯ ವೇತನ ವಾರ್ಷಿಕ: 2,00,000 ದಿಂದ 2,50,000

ಇಂಧನ: 1000 ಲೀಟರ್ ರಿಂದ 2000 ಲೀಟರ್

ಪ್ರಯಾಣ ಬತ್ಯೆ: ಪ್ರತಿ ಕಿಲೋಮೀಟರ್ 30

ದಿನ ಬತ್ತೆ(ಪ್ರಯಾಣ): ದಿನಕ್ಕೆ 2000 ದಿಂದ 3000

ಹೊರ ರಾಜ್ಯ ಪ್ರವಾಸ: 5000 ದಿಂದ 7000

ಶಾಸಕರ ಭತ್ಯೆ:

ಸಂಬಳ:20,000ದಿಂದ 40,000

ಕ್ಷೇತ್ರದ ಭತ್ಯೆ: 40,000 ರಿಂದ 60,000

ಆತಿಥ್ಯ ವೇತನ (ವಾರ್ಷಿಕ): 2,00,000 ದಿಂದ 2,50,000

ಇಂಧನ: 1000 ಲೀಟರ್ ರಿಂದ 2000 ಲೀಟರ್

ಪ್ರಯಾಣ ಬತ್ತೆ: ಪ್ರತಿ ಕಿಲೋಮೀಟರ್ 25 ರಿಂದ 30

ದಿನ ಭತ್ಯೆ(ಪ್ರಯಾಣ): ದಿನಕ್ಕೆ 2000 ದಿಂದ 2500

ಹೊರ ರಾಜ್ಯ ಪ್ರವಾಸ: 5000 ದಿಂದ 7000

ದೂರವಾಣಿ ವೆಚ್ಚ ಯಥಾಸ್ಥಿತಿ ತಿಂಗಳಿಗೆ 20,000 ರೂ.

‘ಆಪ್ತ ಸಹಾಯಕ ಮತ್ತು ರೂಮ್ ಬಾಯ್ ಗೆ ತಿಂಗಳಿಗೆ 10,000 ರಿಂದ 20,000

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link