ಲಂಡನ್‌ : ಕುರಾನ್ ಸುಟ್ಟ ವ್ಯಕ್ತಿ ಮೇಲೆ ಚಾಕುವಿನಿಂದ ಹಲ್ಲೆ

ನವದೆಹಲಿ:

   ಲಂಡನ್‌ನಲ್ಲಿರುವ ಟರ್ಕಿಶ್ ರಾಯಭಾರ ಕಚೇರಿಯ ಹೊರಗೆ ವ್ಯಕ್ತಿಯೊಬ್ಬ ಕುರಾನ್ ಅನ್ನು ಸುಡಲು ಯತ್ನಿಸಿದ್ದಾನೆ. ಇದಾದ ನಂತರ ಆತನ ಮೇಲೆ ವ್ಯಕ್ತಿಯೊಬ್ಬ ಕೋಪದಿಂದ ಆತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ನೈಟ್ಸ್‌ಬ್ರಿಡ್ಜ್‌ನಲ್ಲಿರುವ ಟರ್ಕಿಶ್ ಕಾನ್ಸುಲೇಟ್ ಬಳಿ ನಡೆದ ಈ ಘಟನೆಯನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ.

   ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಕುರಾನ್​ಗೆ ಬೆಂಕಿ ಹಚ್ಚಿದ್ದರಿಂದ ಚಾಕುವಿನ ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವನ ಬೆರಳುಗಳ ಮೇಲೆ ಆಗಿರುವ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ.

Recent Articles

spot_img

Related Stories

Share via
Copy link