ಕೆಳಗಿನ ಬರ್ತ್ ನಲ್ಲಿ ಮಲಗಿದ್ದ ವ್ಯಕ್ತಿ ಮೇಲೆ‌ ಬಿದ್ದ ಯುವಕ : ವ್ಯಕ್ತಿ ಸಾವು

ಹೈದರಾಬಾದ್: 

   ಸ್ಲೀಪರ್ ಕೋಚ್ ರೈಲಿನ ಕೆಳಗಿನ ಬರ್ತ್ ನಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಮದ್ಯದಲ್ಲಿದ್ದ ಬರ್ತ್ ನ ಕೊಕ್ಕೆ ಬೇರ್ಪಟ್ಟು ಯುವಕ ಬಿದ್ದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಮೃತ ಪಟ್ಟಿರುವ ಘಟನೆ ಹೈದಾರಾಬಾದ್ ನಲ್ಲಿ ನಡೆದಿದೆ.

   ಕೇರಳದ 60 ವರ್ಷದ ಅಲಿ ಖಾನ್ ಟಿಕೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಜೂನ್ 16 ರಂದು ಮಿಲೇನಿಯಂ ಎಕ್ಸ್‌ಪ್ರೆಸ್‌ನಲ್ಲಿ ತ್ರಿಶೂರ್‌ನಿಂದ ಆಗ್ರಾ ಕಂಟೋನ್ಮೆಂಟ್‌ಗೆ ಪ್ರಯಾಣಿಸುತ್ತಿದ್ದರು. ಅವರು ಸ್ಲೀಪರ್ ಕೋಚ್‌ನ ಕೆಳಗಿನ ಬರ್ತ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

   ಮಧ್ಯದ ಬರ್ತ್ ನ ಚೈನ್ ಸರಿಯಾಗಿ ಲಾಕ್ ಮಾಡಲಾಗಿತ್ತು ಎಂದು ವರದಿಯಾಗಿದೆ. ಆದರೆ ಪ್ರಯಾಣದ ಸಮಯದಲ್ಲಿ, ಕೊಕ್ಕೆ ಬೇರ್ಪಟ್ಟಿದೆ. ಮಧ್ಯದ ಬರ್ತ್ ಅವರ ಮೇಲೆ ಬಿದ್ದು ಕುತ್ತಿಗೆಗೆ ಗಾಯವಾಗಿತ್ತು. ಪರಿಣಾಮ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರೈಲ್ವೆ ಸಿಬ್ಬಂದಿ ಸಂಜೆ 6.30 ರ ಸುಮಾರಿಗೆ ಘಟನೆಯ ಬಗ್ಗೆ ಮಾಹಿತಿ ಪಡೆದು, ರಾಮಗುಂಡಂನಲ್ಲಿ ರೈಲು ನಿಲ್ಲಿಸಿ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap