ಯುನೈಟೆಡ್ ನೇಷನ್ಸ್:
ಜಗತ್ತಿನಾಧ್ಯಂತ ತನ್ನ ವಿಲಯ ನರ್ತನ ಮಾಡುತ್ತಿರುವ ಕೊರೋನ ಸೋಂಕು ಈಗ ವಿಶ್ವಸಂಸ್ಥೆಯನ್ನು ಬಿಡೆದೆ ಆವರಿಸಿಕೊಂಡಿದೆ. ಫಿಲಿಪೈನ್ಸ್ನ ಶಾಶ್ವತ ಕಾರ್ಯಾಚರಣೆ ವಿಶ್ವಸಂಸ್ಥೆಯ ಪ್ರತಿನಿಧಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ ಎಂದು ಪರೀಕ್ಷೆಯಿಂದ ಧೃಡಪಟ್ಟಿದೆ.ಇನ್ನು ವಿಶ್ವ ಸಂಸ್ಥೆ ಕಚೇರಿಯಲ್ಲಿ ಮೊದಲ ಕೋವಿಡ್ ಪ್ರಕರಣವಾಗಿದೆ.
ಫಿಲಿಪೈನ್ಸ್ ಕಛೇರಿಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು, ಇತರ ಎಲ್ಲಾ ಸಿಬ್ಬಂದಿಗಳಿಗೂ ಸ್ವಯಂ ತಪಾಸಣೆಗೆ ಒಳಗಾಗುವಂತೆ ಸೂಚನೆ ನೀಡಲಾಗಿದೆ. ಈ ಪ್ರಕರಣ ಬಹಿರಂಗವಾದಾಗಿನಿಂದಲೂ ನಮ್ಮೆಲ್ಲರಿಗೂ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ವಿಶ್ವಸಂಸ್ಥೆಯಲ್ಲಿರುವ ಫಿಲಿಪೈನ್ಸ್ ನ ಹಂಗಾಮಿ ರಾಯಭಾರಿ ಸಂದೇಶ ರವಾನಿಸಿರುವುದನ್ನು ರಾಯ್ಟರ್ಸ್ ವರದಿ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ