ಬೆಂಗಳೂರು:
ಮದುವೆಯಾಗುವುದಾಗಿ ನಂಬಿಸಿ ಮಹಿಳಾ ಕಾನ್ಸ್ ಟೇಬಲ್ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ್ದ ಇನ್ಸ್ ಪೆಕ್ಟರ್ ಗರ್ಭಪಾತದ ಮಾತ್ರೆ ನುಂಗಿಸಿ ಹಲ್ಲೆ ಮಾಡಿರುವುದಾಗಿ ಗೋವಿಂದರಾಜಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ರಾಜ್ಯ ಗುಪ್ತದಳ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಇನ್ಸ್ ಪೆಕ್ಟರ್ ವಿರುದ್ಧ ಮಹಿಳಾ ಕಾನ್ಸ್ಟೇಬಲ್ ದೂರು ನೀಡಿದ್ದಾರೆ.
2017ರಲ್ಲಿ ಪರಿಚಿತನಾಗಿದ್ದ ಇನ್ಸ್ ಪೆಕ್ಟರ್ ಮದುವೆಯಾಗುವುದಾಗಿ ನಂಬಿಸಿ ಬಿಡದಿ ಸಮೀಪದ ರೆಸಾರ್ಟ್ ವೊಂದಕ್ಕೆ ಕರೆದುಕೊಂಡು ಹೋಗಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದರು.
ನಂತರ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದು 2019 ರಲ್ಲಿ ಮೂರು ತಿಂಗಳ ಗರ್ಭಿಣಿಯಾಗಿದ್ದ ವೇಳೆ ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಗರ್ಭಪಾತದ ಮಾತ್ರೆ ನುಂಗಿಸಿದ್ದರು. ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ನಂತರ ಮೂಡಲಪಾಳ್ಯದ ಬಾಡಿಗೆ ಮನೆಯಲ್ಲಿ ಇರಿಸಿದ್ದರು. ಮತ್ತೆ ದೈಹಿಕ ಸಂಪರ್ಕ ಬೆಳಸಿದ್ದರಿಂದ ಗರ್ಭಿಣಿಯಾಗಿದ್ದೆ. ಮದುವೆಯಾಗುವಂತೆ ಒತ್ತಾಯಿಸಿದ್ದರಿಂದ ಫೆಬ್ರವರಿ 13 ಮಧ್ಯರಾತ್ರಿ ಮನೆಗೆ ಬಂದು ಹೊಟ್ಟೆ ಮೇಲೆ ಹೊಡೆದಿದ್ದಾರೆ.
ಇದರಿಂದ ಮತ್ತೆ ಗರ್ಭಪಾತವಾಗಿದೆ. ಅಲ್ಲದೇ, ಇನ್ಸ್ ಪೆಕ್ಟರ್ ಜೀವ ಬೆದರಿಕೆ ಕೂಡ ಹಾಕಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೊಂದ ಮಹಿಳಾ ಕಾನ್ಸ್ ಟೇಬಲ್ ದೂರು ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ