ವಿಮಾನದ ಶೌಚಾಲಯದಲ್ಲಿ ಪೈಲೆಟ್‌ ಸಾವು…!

ಅಮೇರಿಕ: 

      ಮಿಯಾಮಿಯಿಂದ ಚಿಲಿಗೆ ಹೊರಟಿದ್ದ ವಿಮಾನದ ಪೈಲಟ್ ಇದ್ದಕ್ಕಿದ್ದಂತೆ ಸಾವಿಗೀಡಾದ ಘಟನೆ ಭಾನುವಾರ ರಾತ್ರಿ ಅಮೆರಿಕದಲ್ಲಿ ನಡೆದಿದೆ. ವಿಮಾನದ ಟಾಯ್ಲೆಟ್​ನಲ್ಲಿ ಪೈಲಟ್​ ಮೃತಪಟ್ಟಿದ್ದು ತಕ್ಷಣವೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು. 

    ಮಿಯಾಮಿಯಿಂದ ಚಿಲಿಗೆ ತೆರಳುತ್ತಿದ್ದ ವಾಣಿಜ್ಯ ವಿಮಾನ ಲಾಟಾಮ್ ಏರ್‌ಲೈನ್ಸ್‌ನ ಕಮಾಂಡರ್ ಇವಾನ್ ಆಂಡೌರ್ (56) ಅವರು ಬಾತ್‌ರೂಂನಲ್ಲಿ ಹಠಾತ್ತನೆ ಕುಸಿದು ಬಿದ್ದಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಅವರಿಗೆ ಹೃದಯ ಸ್ತಂಭನ ಉಂಟಾಗಿದೆ. ಕೂಡಲೇ ಸಮಯ ಸ್ಫೂರ್ತಿ ಮೆರೆದ ಸಹ ಪೈಲಟ್‌ಗಳು ಪನಾಮಾದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ.

    ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಾಟಾಮ್ ಏರ್‌ಲೈನ್ಸ್, ವಿಮಾನ ಹಾರಾಟದ ವೇಳೆ ಜೀವಗಳನ್ನು ಉಳಿಸುವ ಗುರಿಯೊಂದಿಗೆ ಇರುವ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಲ್ಯಾಂಡಿಂಗ್ ವೇಳೆ ಸೂಕ್ತ ವೈದ್ಯಕೀಯ ಗಮನ ಹರಿಸಿದರೂ ಇವಾನ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗದ್ದು ಖೇದಕರ ಎಂದು ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link