ಆಹಾರ ಪ್ಯಾಕಿಂಗ್‌ ನಲ್ಲಿ ಪ್ಲಾಸ್ಟಿಕ್‌ ಬಳಕೆ : ನಿಮ್ಮ ಆರೋಗ್ಯಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ….!

ತುಮಕೂರು :
 
    ಪ್ಲಾಸ್ಟಿಕ್ ವಸ್ತುಗಳ ಬಳಕೆ ಮತ್ತು ಅದರಲ್ಲಿ ಆಹಾರ ಸೇವನೆ ಮಾಡುವುದರಿಂದ ಕ್ಯಾನ್ಸರ್ ನಂತಹ ಅಪಾಯಕಾರಿ ರೋಗವನ್ನು ಆಹ್ವಾನಿಸಿದಂತೆ. ಇದೇ ಕಾರಣಕ್ಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಆದರೆ ನೀವು ಪ್ಲಾಸ್ಟಿಕ್ ಪಾತ್ರೆ, ಕವರ್ ಬಳಕೆ ಮಾಡದೆ ಇದ್ದರೂ ನಿಮ್ಮ ಆರೋಗ್ಯ ಹಾಳಾಗ್ತಿದೆ ಎಂಬುದು ನಿಮಗೆ ಗೊತ್ತಾ?
   ಪ್ಲಾಸ್ಟಿಕ್ ಭೂಮಿಗೆ ಹಾನಿಯನ್ನುಂಟು ಮಾಡುವುದಲ್ಲದೆ ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲಿಯೂ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮತ್ತು ಅದರಲ್ಲಿ ಆಹಾರ ಸೇವನೆ ಮಾಡುವುದರಿಂದ ಕ್ಯಾನ್ಸರ್ ನಂತಹ ಅಪಾಯಕಾರಿ ರೋಗವನ್ನು ಆಹ್ವಾನಿಸಿದಂತೆ. ಇದೇ ಕಾರಣಕ್ಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಆದರೆ ನೀವು ಪ್ಲಾಸ್ಟಿಕ್ ಪಾತ್ರೆ, ಕವರ್ ಬಳಕೆ ಮಾಡದೆ ಇದ್ದರೂ ನಿಮ್ಮ ಆರೋಗ್ಯ ಹಾಳಾಗ್ತಿದೆ ಎಂಬುದು ನಿಮಗೆ ಗೊತ್ತಾ? ಹೌದು ನಿಮಗೆ ಗೊತ್ತಿಲ್ಲದೇ ನೀವು ಮೈಕ್ರೋಪ್ಲಾಸ್ಟಿಕ್ ಸೇವನೆ ಮಾಡುತ್ತಿರಬಹುದು. ಹೇಗೆ? ತಿಳಿದುಕೊಳ್ಳಿ. 

   ಮನೆಯಲ್ಲಿ ಅಥವಾ ಹೊರಗಡೆ ಹೋದಾಗ ಟೀ, ಕಾಫಿ ಕುಡಿಯಲು ಪ್ಲಾಸ್ಟಿಕ್ ಕಪ್ ಬದಲು ಪೇಪರ್ ಕಪ್ ಗಳ ಬಳಕೆ ಮಾಡುತ್ತೀರಾ? ಸಾಯುವಂತ ಪರಿಸ್ಥಿತಿ ಬಂದರೂ ಇಂತ ಪೇಪರ್ ಕಪ್ ನಲ್ಲಿ ಟೀ ಕುಡಿಯಬೇಡಿ. ಯಾಕೆ ಗೊತ್ತಾ? ಹೆಸರಿಗೆ ಮಾತ್ರ ಪೇಪರ್ ಆದರೆ ಇದನ್ನು ಕೆಮಿಕಲ್ ನಲ್ಲಿ ಅದ್ದಿ ನೋಡಿದರೆ ನಿಮಗೆ ಪ್ಲಾಸ್ಟಿಕ್ ನ ಪದರ ಕಾಣಿಸುತ್ತದೆ. ಈ ರೀತಿಯ ಕಪ್ ಗಳಲ್ಲಿ ಟೀ ಕುಡಿಯುವುದರಿಂದ 25000 ಮೈಕ್ರೋಪ್ಲಾಸ್ಟಿಕ್ ನಮ್ಮ ದೇಹದೊಳಗೆ ಹೋಗುತ್ತದೆ. 

   ಮೈಕ್ರೋಪ್ಲಾಸ್ಟಿಕ್ ನರಮಂಡಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಯಕೃತ್ತು ಮತ್ತು ಮೂತ್ರಪಿಂಡದ ಹಾನಿಗೆ ಕಾರಣವಾಗಬಹುದು. ಜೊತೆಗೆ ಪೇಪರ್ ಕಪ್ ಗಳಲ್ಲಿ ಟೀ, ಕಾಫಿ ಕುಡಿಯುವುದರಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ, ಬಿಪಿ, ಶುಗರ್ ಎಲ್ಲವೂ ಬರಬಹುದು. ಹಾಗಾಗಿ ಇದರ ಬಳಕೆ ಜೊತೆಗೆ ಮನೆಯಲ್ಲಿಯೂ ಆದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಆರೋಗ್ಯವಾಗಿರಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap