ಬೆಂಗಳೂರು:
ದುಡ್ಡುಕೊಟ್ಟು ಎಲ್ಲೆಂದರಲ್ಲಿ ಕಾಸು ವಾಟರ್ ಬಾಟಲ್ ಖರೀದಿಸಿ ನೀರು ಕುಡಿಯುವ ಅಭ್ಯಾಸವಿದೆಯೇ? ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಹೋಟೆಲ್, ಸಿನಿಮಾಗಳಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಸಿಗುವ ನೀರು ಕುಡಿಯುತ್ತೀರಾ? ಹಾಗಾದರೆ, ನಿಮ್ಮ ಆರೋಗ್ಯ ಅಪಾಯದಲ್ಲಿದೆ. ಹೌದು, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಈ ಆತಂಕಕಾರಿ ಮಾಹಿತಿಯನ್ನು ತಿಳಿಸಿದೆ.
ಪ್ರಾಧಿಕಾರವು ಪ್ಯಾಕೇಜ್ ಮಾಡಲಾದ ಕುಡಿಯುವ ಮಿನರಲ್ ವಾಟರ್ ಮತ್ತು ಖನಿಜಯುಕ್ತ ನೀರನ್ನು ʼಹೆಚ್ಚಿನ ಅಪಾಯದ ಆಹಾರ ವರ್ಗʼ ಎಂದು ಪರಿಗಣಿಸಿದ್ದು, ವಾರ್ಷಿಕ ತಪಾಸಣೆಗಳನ್ನು ಕಡ್ಡಾಯಗೊಳಿಸಿದೆ.
ಪ್ಯಾಕ್ ಮಾಡಲಾದ ಕುಡಿಯುವ ಮತ್ತು ಖನಿಜಯುಕ್ತ ನೀರಿನ ಉದ್ಯಮಕ್ಕಾಗಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್‌ನಿಂದ ಪ್ರಮಾಣೀಕರಣವನ್ನು ಪಡೆಯಬೇಕಾದ ಕಡ್ಡಾಯ ಷರತ್ತನ್ನು ತೆಗೆದು ಹಾಕಲು ಸರ್ಕಾರ ತೀರ್ಮಾನ ಮಾಡಿದ ಬೆನ್ನಲ್ಲೇ ಎಫ್‌ಎಸ್‌ಎಸ್‌ಎಐ ಈ ಘೋಷಣೆ ಮಾಡಿದೆ. ಕೆಲವು ಉತ್ಪನ್ನಗಳಿಗೆ ಕಡ್ಡಾಯ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಪ್ರಮಾಣೀಕರಣ ಅಗತ್ಯವಾಗಿಲ್ಲದ ಕಾರಣ, ‘ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಮತ್ತು ಮಿನರಲ್ ವಾಟರ್’ ಅನ್ನು ‘ಅಧಿಕ ಅಪಾಯದ ಆಹಾರ ವರ್ಗಗಳ’ ಅಡಿಯಲ್ಲಿ ಪರಿಗಣಿಸಲಾಗುತ್ತದೆ’ ಎಂದು ಆದೇಶದಲ್ಲಿ ತಿಳಿಸಿದೆ.
“ಹೈ ರಿಸ್ಕ್” ವರ್ಗದ ಅಡಿಯಲ್ಲಿ ಬರುವ ಆಹಾರ ಉತ್ಪನ್ನಗಳನ್ನು ಕಡ್ಡಾಯವಾಗಿ ಅಪಾಯ-ಆಧಾರಿತ ತಪಾಸಣೆಗೆ ಒಳಪಡಿಸಲಾಗುತ್ತದೆ. ಪ್ಯಾಕ್ ಮಾಡಲಾದ ಕುಡಿಯುವ ನೀರು ಮತ್ತು ಖನಿಜಯುಕ್ತ ನೀರಿನ ವರ್ಗಗಳನ್ನು ಸೇರಿಸಲು ತನ್ನ ಅಪಾಯ-ಆಧಾರಿತ ತಪಾಸಣೆ ನೀತಿಯಲ್ಲಿ ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ತಿಳಿಸಿದೆ.
ಇದರೊಂದಿಗೆ, ಪ್ಯಾಕೇಜ್ಡ್ ಕುಡಿಯುವ ನೀರು ಮತ್ತು ಖನಿಜಯುಕ್ತ ನೀರಿನ ತಯಾರಕರು ಪ್ರತಿ ವರ್ಷಕ್ಕೊಮ್ಮೆ ಅಪಾಯ ಆಧಾರಿತ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಪರವಾನಗಿ ಅಥವಾ ನೋಂದಣಿಯನ್ನು ನೀಡುವ ಮೊದಲು ತಪಾಸಣೆಗೆ ಒಳಗಾಗಬೇಕು.ಈ ಹಿಂದೆ, ಪ್ಯಾಕೇಜ್ಡ್ ಕುಡಿಯುವ ನೀರಿನ ಉದ್ಯಮವು ಸರಳೀಕೃತ ಅನುಸರಣೆ ಮಾನದಂಡಗಳಿಗೆ ಸರ್ಕಾರವನ್ನು ಒತ್ತಾಯಿಸಿತ್ತು. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಮತ್ತು ಎಫ್‌ಎಸ್‌ಎಸ್‌ಎಐ ಎರಡರಿಂದಲೂ ಕಡ್ಡಾಯ ದ್ವಿ ಪ್ರಮಾಣೀಕರಣವನ್ನು ಪಡೆಯುವ ಷರತ್ತನ್ನು ತೆಗೆದುಹಾಕುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದರು.