ನವದೆಹಲಿ:
ಸಂಸತ್‍ನಲ್ಲಿ ಪ್ರತಿಪಕ್ಷಗಳ ನಡವಳಿಕೆಯ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದರ ಸಭೆಯಲ್ಲಿ ಮಾತನಾಡಿದ ಮೋದಿ, ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರ ಪೆಗಾಸಸ್ ಕುರಿತ ಕಾಗದಪತ್ರವನ್ನು ಹರಿದುಹಾಕಿದ್ದ ಟಿಎಂಸಿ ಸಂಸದ ಸಂತನು ಸೇನ್ರ ಬಗೆಗೆ ಮೋದಿ ಉಲ್ಲೇಖಿಸಿದರು.
‘ಎರಡೂ ಸದನಗಳಲ್ಲಿ ವಿರೋಧಪಕ್ಷಗಳ ನಡವಳಿಕೆಗಳಿಂದ ಸಂಸತ್ತನ್ನು ಅವಮಾನಿಸಲಾಗುತ್ತಿದೆ. ಕಲಾಪದಲ್ಲಿ ಚರ್ಚೆಗೆ ಅವಕಾಶ ನೀಡದಂತೆ ಪ್ರತಿಪಕ್ಷಗಳು ಅಡ್ಡಿ ಪಡಿಸುತ್ತಿವೆ. ಕಾಗದ ಗಳನ್ನು ಹರಿದು ಸಭಾಧ್ಯಕ್ಷರ ಮೇಲೆ ಎಸೆಯುತ್ತಿದ್ದಾರೆ. ಕಾಗದ ಗಳನ್ನು ಕಸಿದು ಹರಿದುಹಾಕಿದ ವ್ಯಕ್ತಿಗೆ ಆ ಬಗ್ಗೆ ಪಶ್ಚಾತ್ತಾಪವೇ ಇಲ್ಲ, ಪ್ರಜಾಪ್ರಭುತ್ವದಲ್ಲಿ ಚರ್ಚೆಯ ನಂತರ ಮಸೂದೆಗಳು ಅಂಗೀಕಾರಗೊಳ್ಳಬೇಕು. ಆದರೆ ಪ್ರತಿಪಕ್ಷಗಳ ಸದಸ್ಯರ ನಡವಳಿಕೆಗಳಿಂದ ಸಂಸತ್‍ಗೆ ಅಪಮಾನವಾಗುತ್ತಿದೆ’ ಎಂದು ಮೋದಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ