ಮನೆ ಇಲ್ಲದ ಬಡವರು, ಗ್ರಾಮೀಣ ಜನತೆಗೆ ಪ್ರಧಾನಿ ಮೋದಿ ಗುಡ್ ನ್ಯೂಸ್

ನವದೆಹಲಿ:

 ಗ್ರಾಮೀಣ ಬಡವರಿಗೆ ಮನೆ ಒದಗಿಸುವ ಅಭಿಯಾನವು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಬದ್ಧತೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ ರಾಜ್ಯದಲ್ಲಿ ನಿರ್ಮಿಸಲಾದ ಮಧ್ಯಪ್ರದೇಶದ 5 ಲಕ್ಷ 21 ಸಾವಿರ ಮನೆಗಳ ವಾಸ್ತವ ‘ಗೃಹ ಪ್ರವೇಶ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಫಲಾನುಭವಿಗಳನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.

ಬಡವರು ಸಬಲೀಕರಣಗೊಂಡರೆ ಬಡತನದ ವಿರುದ್ಧ ಹೋರಾಡುವ ಧೈರ್ಯ ಬರುತ್ತದೆ. ಸರ್ಕಾರ ಮತ್ತು ಬಡವರ ಪ್ರಯತ್ನಗಳು ಒಟ್ಟಿಗೆ ಸೇರಿದಾಗ ಬಡತನ ಹೋಗಲಾಡಿಸಬಹುದು ಎಂದು ಅವರು ಹೇಳಿದರು.

ಇಂದು ಆರ್​ಸಿಬಿ- ಕೆಕೆಆರ್ ಪಂದ್ಯ; ಫಾಫ್ ಬಳಗದಲ್ಲಿ ಮಹತ್ತರ ಬದಲಾವಣೆ?

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗ್ರಾಮಗಳಲ್ಲಿ ನಿರ್ಮಿಸಲಾದ ಈ 5 ಲಕ್ಷದ 21 ಸಾವಿರ ಮನೆಗಳು ಕೇವಲ ಮನೆಗಳಲ್ಲ, ದೇಶದ ಬಡವರು ಸಬಲರಾಗುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಡವರಿಗೆ ಪಕ್ಕಾ ಮನೆ ನೀಡುವ ಅಭಿಯಾನ ಕೇವಲ ಸರಕಾರದ ಯೋಜನೆಯಾಗದೆ ಗ್ರಾಮಸ್ಥರಲ್ಲಿ ಹಾಗೂ ಬಡವರಲ್ಲಿ ನಂಬಿಕೆ ಮೂಡಿಸುವ ಬದ್ಧತೆಯಾಗಿದೆ. ಬಡತನದ ಸಂಕೋಲೆಯಿಂದ ಹೊರ ಬರಲು ಬಡವರನ್ನು ಪ್ರೋತ್ಸಾಹಿಸಲು ಇದು ಮೊದಲ ಹೆಜ್ಜೆಯಾಗಿದೆ ಎಂದರು.

ದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಮನೆಗಳಲ್ಲಿ ಮಹಿಳೆಯರು ಸುಮಾರು ಎರಡು ಕೋಟಿ ಮನೆಗಳ ಮಾಲೀಕತ್ವವನ್ನು ಹೊಂದಿದ್ದಾರೆ. ಈ ಮಾಲೀಕತ್ವವು ಮನೆಯ ಇತರ ಆರ್ಥಿಕ ನಿರ್ಧಾರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಬಲಪಡಿಸಿದೆ ಎಂದರು.

 5ನೇ ದಿನ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದ RRR

ಸರ್ಕಾರ ಪ್ರತಿ ಮನೆಗೂ ಕುಡಿಯುವ ನೀರು ಒದಗಿಸಲು ಮುಂದಾಗಿದೆ. ಈ ಯೋಜನೆಯಡಿ ಕಳೆದ ಎರಡೂವರೆ ವರ್ಷಗಳಲ್ಲಿ ದೇಶಾದ್ಯಂತ 6 ಕೋಟಿಗೂ ಹೆಚ್ಚು ಕುಟುಂಬಗಳು ಶುದ್ಧ ಕುಡಿಯುವ ನೀರಿನ ಸಂಪರ್ಕ ಪಡೆದಿವೆ.

ಮಹಾಮಾರಿ ಸಂದರ್ಭದಲ್ಲಿ ಸರ್ಕಾರ ಬಡವರಿಗೆ ಉಚಿತ ಪಡಿತರಕ್ಕಾಗಿ 2 ಲಕ್ಷ 60 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದು, ಮುಂದಿನ 6 ತಿಂಗಳಲ್ಲಿ 80 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು ಎಂದು ಹೇಳಿದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap