ಪ್ರತಿಪಕ್ಷಗಳ ನಡೆಗೆ ಪ್ರಧಾನಿ ಮೋದಿ ಅಸಮಾಧಾನ!

ನವದೆಹಲಿ:

     ಸಂಸತ್‍ನಲ್ಲಿ ಪ್ರತಿಪಕ್ಷಗಳ ನಡವಳಿಕೆಯ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

     ಇಂದು ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದರ ಸಭೆಯಲ್ಲಿ ಮಾತನಾಡಿದ ಮೋದಿ, ಐಟಿ ಸಚಿವ ಅಶ್ವಿನಿ ವೈಷ್ಣವ್​ ಅವರ ಪೆಗಾಸಸ್ ಕುರಿತ ಕಾಗದಪತ್ರವನ್ನು ಹರಿದುಹಾಕಿದ್ದ ಟಿಎಂಸಿ ಸಂಸದ ಸಂತನು ಸೇನ್​ರ ಬಗೆಗೆ ಮೋದಿ ಉಲ್ಲೇಖಿಸಿದರು.

     ‘ಎರಡೂ ಸದನಗಳಲ್ಲಿ ವಿರೋಧಪಕ್ಷಗಳ ನಡವಳಿಕೆಗಳಿಂದ ಸಂಸತ್ತನ್ನು ಅವಮಾನಿಸಲಾಗುತ್ತಿದೆ. ಕಲಾಪದಲ್ಲಿ ಚರ್ಚೆಗೆ ಅವಕಾಶ ನೀಡದಂತೆ ಪ್ರತಿಪಕ್ಷಗಳು ಅಡ್ಡಿ ಪಡಿಸುತ್ತಿವೆ. ಕಾಗದ ಗಳನ್ನು ಹರಿದು ಸಭಾಧ್ಯಕ್ಷರ ಮೇಲೆ ಎಸೆಯುತ್ತಿದ್ದಾರೆ. ಕಾಗದ ಗಳನ್ನು ಕಸಿದು ಹರಿದುಹಾಕಿದ ವ್ಯಕ್ತಿಗೆ ಆ ಬಗ್ಗೆ ಪಶ್ಚಾತ್ತಾಪವೇ ಇಲ್ಲ, ಪ್ರಜಾಪ್ರಭುತ್ವದಲ್ಲಿ ಚರ್ಚೆಯ ನಂತರ ಮಸೂದೆಗಳು ಅಂಗೀಕಾರಗೊಳ್ಳಬೇಕು. ಆದರೆ ಪ್ರತಿಪಕ್ಷಗಳ ಸದಸ್ಯರ ನಡವಳಿಕೆಗಳಿಂದ ಸಂಸತ್‍ಗೆ ಅಪಮಾನವಾಗುತ್ತಿದೆ’ ಎಂದು ಮೋದಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap