ನವದೆಹಲಿ :
ಮೂರು ರಾಷ್ಟ್ರಗಳ ನಿರ್ಣಾಯಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರಮೋದಿ ಅವರು, ಯುರೋಪಿಯನ್ ಪಾಲುದಾರರೊಂದಿಗೆ ಶಾಂತಿ, ಸಮೃದ್ಧಿಗಾಗಿ ಸಹಕಾರದ ಮನೋಭಾವ ಬಲಪಡಿಸಲು ಹಾಗೂ ಕೋವಿಡ್ ಆರ್ಥಿಕ ಚೇತರಿಕೆಯನ್ನು ಬಲಪಡಿಸಲು ಬರ್ಲಿನ್, ಕೋಪನ್ ಹೇಗನ್ ಮತ್ತು ಪ್ಯಾರಿಸ್ ಪ್ರವಾಸಕ್ಕೆ ತೆರಳುತ್ತಿದ್ದಾರೆ.ಅವರಿಂದು ಜರ್ಮನಿಯ ಫೆಡರಲ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರ ಆಹ್ವಾನದ ಮೇರೆಗೆ ಜರ್ಮನಿಯ ಬರ್ಲಿನ್‌ಗೆ ಭೇಟಿ ನೀಡಿದ್ದಾರೆ.
ಇದರೊಂದಿಗೆ ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನೂ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಪ್ರವಾಸಕ್ಕೂ ಮುನ್ನ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು,
ಭಾರತವು ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಯುರೋಪ್ ಪ್ರವಾಸ ಮಾಡುತ್ತಿದ್ದೇನೆ ಎಂದಿದ್ದಾರೆ ಎಂದು ಹೇಳಿದೆ. ಭಾರತ ಮತ್ತು ಜರ್ಮನಿ ನಡುವಿನ ದೀರ್ಘಕಾಲದ ವಾಣಿಜ್ಯ ಸಂಬಂಧಗಳು ನಮ್ಮ ಕಾರ್ಯತಂತ್ರದ ಸಹಭಾಗಿತ್ವದ ಆಧಾರ ಸ್ತಂಭಗಳಲ್ಲಿ ಒಂದಾಗಿದೆ.
2021ಕ್ಕೆ ಭಾರತ ಮತ್ತು ಜರ್ಮನಿ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಗೆ 70 ವರ್ಷ ಕಳೆದಿದೆ. ಚಾನ್ಸೆಲರ್ ಸ್ಕೋಲ್ಜ್ ಮತ್ತು ನಾನು ಜಂಟಿಯಾಗಿ ನಮ್ಮ ಉದ್ಯಮ ಉತ್ತೇಜಿಸುವ ಗುರಿ ಹೊಂದಿದ್ದು, ಜಾಗತಿಕ ಬೆಳವಣಿಗಳ ಬಗ್ಗೆ ಚರ್ಚಿಸಲಿದ್ದೇವೆ. ಇದರಿಂದ ಎರಡೂ ದೇಶಗಳಲ್ಲಿ ಕೋವಿಡ್ ಆರ್ಥಿಕ ಚೇತರಿಕೆ ಬಲಪಡಿಸಲು ಸಹಾಯ ಮಾಡುತ್ತದೆ.
ಪಿಎಸ್ಐ ಮರು ಪರೀಕ್ಷೆ ಬೇಡ : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
ಬರ್ಲಿನ್‌ಗೆ ನನ್ನ ಭೇಟಿಯು ಚಾನ್ಸೆಲರ್ ಸ್ಕೋಲ್ಜ್ ಅವರೊಂದಿಗೆ ವಿವರವಾದ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಲು ಒಂದು ಅವಕಾಶವಾಗಿದೆ. ಇದೇ ವೇಳೆ ಉಕ್ರೇನ್ ಯುದ್ಧದ ಬಗ್ಗೆಯೂ ಗಮನ ಹರಿಸಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ