ಹ್ಯಾಕ್‌ ಆಯ್ತು ಪ್ರಧಾನಿ ಕಛೇರಿ…..!?

ನವದೆಹಲಿ

    ಬ್ಯಾಂಕ್‌ಗಳು, ಕಂಪನಿಗಳು ಸೇರಿದಂತೆ ಮುಂತಾದ ಕಡೆಗಳಲ್ಲಿ ಸೈಬರ್ ದಾಳಿ, ಹ್ಯಾಕಿಂಗ್ ಕೇಳಿದ್ದೀವಿ. ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಕಚೇರಿ ಮೇಲೆ ಹ್ಯಾಕರ್ಸ್‌ಗಳಿಂದ ದಾಳಿ ನಡೆದಿದೆ ಎಂಬ ಮಾಹಿತಿ ಬಹಿರಂಗವಾಗಿದೆ.ಭಾರತದ ಸರ್ಕಾರಿ ಕಚೇರಿಗಳು, ಸೇನಾ ಕಚೇರಿಗಳನ್ನು ಗುರಿಯಾಗಿಸಿ ಸದಾ ದಾಳಿ ನಡೆಸುವ ಚೀನಾ ಸರ್ಕಾರದ ಬೆಂಬಲಿತ ಹ್ಯಾಕರ್‌ಗಳು ಇದೀಗ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯನ್ನು ಗುರಿಯಾಗಿಸಿಕೊಂಡಿವೆ.

    ಇದರೊಂದಿಗೆ ಖಾಸಗಿ ವಲಯದ ರಿಲಯನ್ಸ್ ಏರ್ ಇಂಡಿಯಾ ಸಂಸ್ಥೆಗಳನ್ನು ಗುರಿಯಾಗಿಸಿ ಹ್ಯಾಕರ್ಸ್‌ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ಈ ದಾಳಿ ಕುರಿತು ಪಿಎಂಒ ಇಲ್ಲವೇ ಖಾಸಗಿ ವಲಯದ ಕಂಪನಿಗಳಾಗಲೀ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ಹ್ಯಾಕ್ ಮಾಡಿದ ಮಾಹಿತಿ ಸೋರಿಕೆ ಆದ ಬಳಿಕ ವಿಷಯ ಗೊತ್ತಾಗಿದೆ ಎಂದು ಆಂಗ್ಲ ವೆಬ್‌ಸೈಟ್‌ವೊಂದು ವರದಿ ಮಾಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಚೀನಾ ಸರ್ಕಾರವು ತನಿಖೆಗೆ ಆದೇಶಿಸಿದೆ ಎನ್ನಲಾಗಿದೆ.

    ಚೀನಾ ಸಾರ್ವಜನಿಕ ಭದ್ರತಾ ಸಚಿವಾಲಯವು ಐ-ಸೂನ್ ಎಂಬ ಎಂಬ ಸೈಬರ್ ಸೆಕ್ಯುರಿಟಿ ಕಂಪನಿಯ ಸೇವೆಯನ್ನು ಗುತ್ತಿಗೆ ಪಡೆದುಕೊಂಡಿದೆ. ಈ ಐ-ಸೂನ್ ತಂತ್ರಜ್ಞರು ಭಾರತ ಸರ್ಕಾರಕ್ಕೆ ಸಂಬಂಧಿಸಿದ ವಿವಿಧ ದತ್ತಾಂಶಗಳನ್ನು ಹ್ಯಾಕ್ ಮಾಡಿ ಚೀನಾ ಸರ್ಕಾರಕ್ಕೆ ಒಗಿಸಿದ್ದಾರೆ ಎಂದು ಹೇಳಲಾಗುತ್ತಿದೆ.ಹೀಗೆ ಹ್ಯಾಕ್ ಮಾಡಲಾದ ಭಾರೀ ಪ್ರಮಾಣದ ಮಾಹಿತಿಗಳನ್ನು ಇದೀಗ ಗಿಟ್ ಹಬ್ ಎಂಬ ‘ಡೆವಲಪರ್ ಪ್ಲಾಟ್‌ಫಾರಂ’ನಲ್ಲಿ ಅನಾಮಧೇಯ ಹ್ಯಾಕರ್‌ಗಳು ಹ್ಯಾಕ್ ಮಾಡಿ ಸೋರಿಕೆ ಮಾಡಿದ್ದಾರೆ.

   ಇದು ಚೀನಾ ಸರ್ಕಾರವನ್ನೇ ಬೆಚ್ಚಿ ಬೀಳಿಸಿದೆ. ಹೀಗಾಗಿ ಇವನ್ನು ಸೋರಿಕೆ ಮಾಡಿದವರು ಯಾರು ಎಂದು ಚೀನಾ ಪೊಲೀಸರು ಹಾಗೂ ಐ-ಸೂನ್ ಯಾವ ದತ್ತಾಂಶ ಸೋರಿಕೆ ಆಗಿದೆ ಎಂದು ತನಿಖೆ ಆರಂಭಿಸಿವೆ.ಪ್ರಧಾನಮಂತ್ರಿ ಕಚೇರಿ, ಹಣಕಾಸು ಸಚಿವಾಲಯ, ವಿದೇಶಾಂಗ ಸಚಿವಾಲಯ, ಆಂತರಿಕ ಸಚಿವಾಲಯ (ಬಹುಶಃ ಗೃಹ ಸಚಿವಾಲಯ)ದ ಮಾಹಿತಿಗಳು ಇದರಲ್ಲಿವೆ. 2021ರ ಮಾಹಿತಿಗಳು ಇವಾಗಿವೆ. ಹೀಗಾಗಿ ಭಾರತ-ಚೀನಾ ನಡುವಿನ ಗಲ್ವಾನ್‌ ಸಂಘರ್ಷದ ಅವಧಿಯ ದತ್ತಾಂಶ ಇವಾಗಿರಬಹುದು ಎಂದು ಹೇಳಲಾಗುತ್ತಿದೆ.

    ರಿಲಯನ್ಸ್ ಹಾಗೂ ಏರ್ ಇಂಡಿಯಾ ದತ್ತಾಂಶಗಳೂ ಇವೆ. ವಿದೇಶಗಳ ದತ್ತಾಂಶವೂ ಸೋರಿಕೆ: ಪಾಕಿಸ್ತಾನ, ನೇಪಾಳ, ಮ್ಯಾನ್ಮಾರ್, ಮಂಗೋಲಿಯಾ, ಮಲೇಷ್ಯಾ, ಅಫ್ಘಾನಿಸ್ತಾನ, ಫ್ರಾನ್ಸ್, ಥಾಯ್ಲೆಂಡ್, ಕಜಕಿಸ್ತಾನ, ಟರ್ಕಿ, ಕಾಂಬೋಡಿಯಾ ಹಾಗೂ ಫಿಲಿಪೀನ್ಸ್ ದತ್ತಾಂಶಗಳೂ ಸೋರಿಕೆ ಪಟ್ಟಿಯಲ್ಲಿವೆ. ಈ ಬಗ್ಗೆ ಭಾರತ ಸದ್ಯ ಯಾವ ಪ್ರತಿಕ್ರಿಯೆ, ಮಾಹಿತಿ ನೀಡಿಲ್ಲ. ಆದರೆ ಚೀನಾ ಬೆಂಬಲಿತ ದಾಳಿ ನಡೆಸಿರಬಹುದು ಎಂಬ ಮಾಹಿತಿ ಕೇಳಿ ಬಂದಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap