ಬೆಲೆ ಕಡಿಮೆಯಾದರು ಪಾಕೆಟ್‌ ಪ್ರೆಂಡ್ಲಿ ಕಾರ್‌ ಗಳಿವು ….!

ಬೆಂಗಳೂರು:   

     ಮಧ್ಯಮ ವರ್ಗದವರು ಅದಕ್ಕಿಂತ ಕೆಳಗಿನ ವರ್ಗದವರು ಹಾಗೂ ಬಜೆಟ್ ಬೆಲೆಯಲ್ಲಿ ಸರಿಯಾದ ಕಾರನ್ನು ಹುಡುಕುತ್ತಿರುವವರಿಗೆ ಸರಿಹೊಂದುವಂತಹ ಕಾರುಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಅದಕ್ಕಾಗಿಯೇ 2024 ರಲ್ಲಿ ನೀವು ಖರೀದಿಸಬಹುದಾದ ಭಾರತದ ಅತ್ಯಂತ ಅಗ್ಗದ ಕಾರುಗಳ ಪಟ್ಟಿಯನ್ನು ನಾವು ನಿಮಗೆ ತಂದಿದ್ದೇವೆ.

ಮಾರುತಿ ಆಲ್ಟೋ 800: 

ಅಗ್ಗದ ಬೆಲೆಯ ಕಾರುಗಳು ಎಂದಾಕ್ಷಣ ಮೊದಲಿಗೆ ನೆನಪಾಗುವುದು ಮಾರುತಿ ಸುಜುಕಿಯ ಕಾರುಗಳು, ಇವರ ಅತ್ಯಂತ ಅಗ್ಗದ ಎಂಟ್ರಿ ಲೆವಲ್ ಕಾರಾದ Maruti Alto 800 ಬೆಲೆಯು 3.54 ಲಕ್ಷ ರೂ.(ಎಕ್ಸ್ ಶೋರೂಂ) ನಿಂದ ಪ್ರಾರಂಭವಾಗುತ್ತದೆ. 22.05 ಕಿ.ಮೀ ಮೈಲೇಜ್ ನೀಡುತ್ತದೆ, ಇದರ ಫ್ಯೂಯಲ್ ಟ್ಯಾಂಕ್ ಕೆಪಾಸಿಟಿ 35ಲೀ.(ಪೆಟ್ರೋಲ್) ಇದೆ. ಹಾಗೆಯೇ ಸಿಎನ್‌ಜಿ ಟ್ಯಾಂಕ್ ಕೆಪಾಸಿಟಿ 60ಲೀ. ಇರುತ್ತದೆ.

2. ಮಾರುತಿ ಆಲ್ಟೋ ಕೆ10: ಅಗ್ಗದ ಕಾರುಗಳ ಪಟ್ಟಿಯಲ್ಲಿ ಎರಡನೇ ಕಾರು ಕೂಡ ಮಾರುತಿಯದ್ದಾಗಿದೆ. Maruti Alto K10 ಬೆಲೆಯು ರೂ.3.99 (ಎಕ್ಸ್ ಶೋರೂಂ) ಲಕ್ಷದಿಂದ ಪ್ರಾರಂಭವಾಗುತ್ತದೆ. ಈ ಕಾರು ಪ್ರತಿ ಲೀಟರ್‌ಗೆ 24.39 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಇದರ ಇಂಧನ ಟ್ಯಾಂಕ್ 27 ಲೀ. ಕೆಪಾಸಿಟಿ ಹೊಂದಿದ್ದು, ಸಿಎನ್‌ಜಿಯಲ್ಲಿ 55 ಲೀ. ಪಡೆಯಬಹುದು.

3. ಮಾರುತಿ ಎಸ್-ಪ್ರೆಸ್ಸೊ: ಪಟ್ಟಿಯಲ್ಲಿ ಮೂರನೇ ಸ್ಥಾನ Maruti S-Presso ಪಡೆದುಕೊಂಡಿದೆ. ಈ ಕಾರು 4.26 ಲಕ್ಷ ರೂ. ಆರಂಭಿಕ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. ಈ ಕಾರು ಪ್ರತಿ ಲೀಟರ್‌ಗೆ 24.76 ರಿಂದ 25.30 ಕಿ.ಮೀ ಮೈಲೇಜ್ ನೀಡುತ್ತದೆ. ಇದರ ಇಂಧನ ಟ್ಯಾಂಕ್ ಕೆಪಾಸಿಟಯು 27 ಲೀಟರ್ (ಪೆಟ್ರೋಲ್) ಇದ್ದು, ಸಿಎನ್‌ಜಿ ಆಯ್ಕೆಯಲ್ಲಿ 55 ಲೀಟರ್ ಟ್ಯಾಂಕ್ ಪಡೆಯಬಹುದು.

 

4. ರೆನಾಲ್ಟ್ ಕ್ವಿಡ್   ನಾಲ್ಕನೇ ಸ್ಥಾನದಲ್ಲಿ Renault Kwid ಇದ್ದು, ಇದರ ಆರಂಭಿಕ ಬೆಲೆಯು 4.69 ಲಕ್ಷ ರೂ.(ಎಕ್ಸ್ ಶೋರೂಂ)ಇದೆ. 22 ಕಿ.ಮೀ ಮೈಲೇಜ್ ನೀಡುತ್ತದೆ. 28 ಲೀ. ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ. ಇನ್ನು ಸೆಲೆರಿಯೊ 5.37 ಲಕ್ಷ ರೂ.(ಎಕ್ಸ್ ಶೋರೂಂ)ಆರಂಭಿಕ ಬೆಲೆಯಿದೆ. 26 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಇಂಧನ ಟ್ಯಾಂಕ್-37 ಲೀಟರ್(ಪೆಟ್ರೋಲ್), 55 ಲೀಟರ್ (ಸಿಎನ್‌ಜಿ)ಇದೆ.

6. ಮಾರುತಿ ವ್ಯಾಗನ್‌ಆರ್: Maruti WagonR ಬೆಲೆಯು ರೂ. 5.54 ಲಕ್ಷದಿಂದ(ಎಕ್ಸ್ ಶೋರೂಂ) ಆರಂಭವಾಗುತ್ತದೆ. 23.56 ಕಿ.ಮೀ ಮೈಲೇಜ್ ನೀಡುತ್ತದೆ. ಇದರ ಸಿಎನ್‌ಜಿ ಆವೃತ್ತಿಯು 34.05 ಕಿ.ಮೀ ಮೈಲೇಜ್ ನೀಡುತ್ತದೆ. ಇದರ ಪೆಟ್ರೋಲ್ ಆವೃತ್ತಿಯ ಇಂಧನ ಟ್ಯಾಂಕ್ ಕೆಪಾಸಿಟಿಯು 37 ಲೀಟರ್ ಹಾಗೂ 55 ಲೀಟರ್ ಸಿಎನ್‌ಜಿಯಲ್ಲಿ ಪಡೆಯಬಹುದು.

 

7. ಟಾಟಾ ಟಿಯಾಗೊ:  Tata ಕೂಡ ಅಗ್ಗದ ಬೆಲೆಯಲ್ಲಿ ಕಾರುಗಳನ್ನು ನೀಡುತ್ತಿದೆ. ಅದರಲ್ಲಿ Tata Tiago ಮೊದಲ ಕಾರಾಗಿದ್ದು, ಇದರ ಆರಂಭಿಕ ಬೆಲೆಯು 5.6 ಲಕ್ಷ ರೂ. (ಎಕ್ಸ್ ಶೋರೂಂ) ಇದೆ. ಪ್ರತಿ ಲೀ.ಗೆ 20.01 ಕಿ.ಮೀ ಮೈಲೇಜ್ ನೀಡುತ್ತದೆ. ಇಂಧನ ಟ್ಯಾಂಕ್ 37 ಲೀಟರ್ (ಪೆಟ್ರೋಲ್) ಇದ್ದು, 60 ಲೀಟರ್ (ಸಿಎನ್‌ಜಿ) ಇದೆ.

8. ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್: ಹ್ಯುಂಡೈನ ಜನಪ್ರಿಯ Grand i10 Nios ಕಾರು ರೂ. 5.84 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. 16 ರಿಂದ 18 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಇಂಧನ ಟ್ಯಾಂಕ್ 37 ಲೀಟರ್ (ಪೆಟ್ರೋಲ್), 60 ಲೀಟರ್ (ಸಿಎನ್‌ಜಿ) ಇದೆ.

 

9. ಮಾರುತಿ ಇಗ್ನಿಸ್    Maruti Suzuki Ignis ಬೆಲೆಯು ರೂ. 5.84 ದಿಂದ (ಎಕ್ಸ್ ಶೋರೂಂ) ಆರಂಭವಾಗುತ್ತದೆ. 20.89 ಕಿ.ಮೀ ಮೈಲೇಜ್ ನೀಡಲಿದ್ದು, 32ಲೀ. ಇಂಧನ ಟ್ಯಾಂಕ್ ಕೆಪಾಸಿಟಿಯಿದೆ. ಟಾಟಾ ಪಂಚ್ ಬೆಲೆಯು 5.99 ಲಕ್ಷ ರೂ.ನಿಂದ ಆರಂಭವಾಗುತ್ತದೆ. 18 ರಿಂದ 20 ಕಿ.ಮೀ ಮೈಲೇಜ್ ನೀಡುತ್ತದೆ. ಇಂಧನ ಟ್ಯಾಂಕ್-37 ಲೀಟರ್ (ಪೆಟ್ರೋಲ್), 60 ಲೀಟರ್ (ಸಿಎನ್‌ಜಿ) ಇದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap