ಪೊಲೀಸ್​ ಕಾನ್​ಸ್ಟೆಬಲ್ ಹೆಂಡತಿ ಆತ್ಮಹತ್ಯೆ: ಪೊಲೀಸ್​ ವಸತಿಗೃಹದಲ್ಲೇ ನೇಣಿಗೆ ಶರಣು

ಚಿಕ್ಕನಾಯಕನಹಳ್ಳಿ: 

ಪೊಲೀಸ್ ಕಾನ್​ಸ್ಟೆಬಲ್​ವೊಬ್ಬರ ಹೆಂಡತಿ ಪೊಲೀಸ್​ ವಸತಿಗೃಹದಲ್ಲಿ ನೇಣು ಹಾಕಿಕೊಂಡ ಪ್ರಕರಣ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಟ್ಟಣದ ಪೊಲೀಸ್ ವಸತಿಗೃಹದಲ್ಲಿ ವಾಸವಿದ್ದ ಪೊಲೀಸ್ ಕಾನ್​ಸ್ಟೆಬಲ್ ಶಶಿಧರ್ ಎಂಬವರ ಪತ್ನಿ ಲಾವಣ್ಯ (21) ಆತ್ಮಹತ್ಯೆ ಮಾಡಿಕೊಂಡವರು.

ಇವರು ಭಾನುವಾರ ಮಧ್ಯಾಹ್ನ ನೇಣು ಹಾಕಿಕೊಂಡಿದ್ದರು.

ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಲಾವಣ್ಯ-ಶಶಿಧರ್ ದಂಪತಿಗೆ 6 ತಿಂಗಳಿನ ಗಂಡು ಮಗುವಿದೆ. ಈಕೆ ಮೂಲತಃ ಹುಳಿಯಾರು ಹೋಬಳಿ ಕಲ್ಲಹಳ್ಳಿ ಗ್ರಾಮದವರಾಗಿದ್ದು, ಬುಕ್ಕಾಪಟ್ಟಣದ ಬಳಿಯ ತುಪ್ಪದಕೋಣದ ಶಶಿಧರ್ ಅವರನ್ನು ಮದುವೆಯಾಗಿದ್ದರು.

ಶಶಿಧರ್ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆತ್ಮಹತ್ಯೆಗೆ ಕಾರಣ ಏನು ಎಂಬ ಮಾಹಿತಿ ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link