ಕಲಬುರಗಿ
ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ಮುಂಜಾನೆ 3.30ರ ಸುಮಾರಿಗೆ ಬೀದರ್ ಡಿಪೋಗೆ ಸೇರಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅಪಹರಣ ಮಾಡಲಾಗಿದೆ.
ಬೀದರ್ ಬಸ್ ಡಿಪೋ-2ಕ್ಕೆ ಸೇರಿದ ಕೆಎ 38, ಎಫ್ 971 ನೋಂದಣಿ ಸಂಖ್ಯೆಯ ಸಾಮಾನ್ಯ ಬಸ್ ಕಳ್ಳತನವಾಗಿದೆ. ಒಟ್ಟು ಮೂವರಿದ್ದ ಗುಂಪು ಈ ಕಳ್ಳತನ ನಡೆಸಿ ತೆಲಂಗಾಣ ಕಡೆ ಬಸ್‌ನಲ್ಲಿ ಸಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಸೋಮವಾರ ಕೊನೆಯ ಟ್ರಿಪ್ ಮುಗಿಸಿ ಚಿಂಚೋಳಿ ನಿಲ್ದಾಣಕ್ಕೆ ಬಸ್ ತಂದು ನಿಲ್ಲಿಸಲಾಗಿತ್ತು. ಆದರೆ ಬೆಳಗ್ಗೆ ಬಂದು ನೋಡಿದರೆ ಬಸ್ ಕಾಣುತ್ತಿಲ್ಲ. ಬಸ್ ನಿಲ್ದಾಣದಲ್ಲಿ ಬ್ಯಾಗು, ಮೊಬೈಲ್ ದೋಚುವುದು ಸಾಮಾನ್ಯ. ಆದರೆ ಬಸ್ ಅನ್ನೇ ಕಳ್ಳತನ ಮಾಡಿದ್ದು ನೋಡಿ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಮೂವರ ತಂಡ ಬಸ್ ಸೇರಿ ಅದನ್ನು ನೈಪುಣ್ಯತೆಯಿಂದ ಸ್ಟಾರ್ಟ್ ಮಾಡಿಕೊಂಡು ಹೋಗಿದ್ದಾರೆ. ಬೆಳಗ್ಗೆ ಸಿಬ್ಬಂದಿ ಬಂದು ನೋಡಿದಾಗ ಬಸ್ ಕಳುವಾಗಿರುವುದು ತಿಳಿದಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
