ಮಧುಗಿರಿ :-
ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯನ್ನ ಹೊಂಚು ಹಾಕಿದ ಆರೋಪಿ ಲಗ್ನ ಪತ್ರಿಕೆ ಕೊಡುವ ನೆಪದಲ್ಲಿ ಮನೆಗೆ ಹೋಗಿ ಒಂಟಿ ಮಹಿಳೆ ಕಣ್ಣಿಗೆ ಕಾರದಪುಡಿ ಎಲಚಿ ಮಾಂಗಲ್ಯ ಸರ ಕಿಟ್ಟು ಪರಾರಿಯಾಗಿದ್ದ ಆರೋಪಿಯನ್ನ ಮಧುಗಿರಿ ಪೋಲಿಸ್ ನವರು ಆರೋಪಿಯನ್ನ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಮಧುಗಿರಿ ತಾಲೂಕಿನ ಕಸಬಾ ವ್ಯಾಪ್ತಿಯ ವಡೇರಹಳ್ಳಿ ಗ್ರಾಮದ ಮಂಜುನಾಥ್ ಎಂಬುವರ ಪತ್ನಿ ಕಾಂತಮ್ಮ (55 ವರ್ಷ) ಎಂಬುವರು ಏಕಾಂಗಿಯಾಗಿರುವುದನ್ನ ಹೊಂಚು ಹಾಕಿದ ಬಂದ್ರೆ ಹಳ್ಳಿಯ ರಂಗನಾಥ್ ಅಲಿಯಾಸ್ ಪಕೋಡಿ ಎಂಬ ಆರೋಪಿ ಮಹಿಳೆಗೆ ಕಾರದಪುಡಿ ಎರಚಿ 55 ಗ್ರಾಂ ಮಾಂಗಲ್ಯ ಸರ ಕಸಿದು ಸಿನಿಮಿಯ ರೀತಿಯಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಆರೋಪಿ ರಂಗನಾಥ್ ಅಲಿಯಾಸ್ ಪಕೋಡಿ ಮಂಜುನಾಥ್ ಪತ್ನಿ ಕಾಂತಮ್ಮನಿಂದ ಹಲವು ಬಾರಿ ಸಾಲ ಪಡೆದು ಹಿಂತಿರುಗಿಸುತ್ತಿದ್ದ ಎನ್ನಲಾಗಿದ್ದು, ಈಕೆಯ ಬಳಿ ಚಿನ್ನಾಭರಣ ನಗದು ಇರುವುದನ್ನ ಮನಗಂಡು ಮಹಿಳೆ ಒಂಟಿಯಾಗಿರುವುದನ್ನು ಗಮನಿಸಿ ಏಕಾಯಕಿ ಮಹಿಳೆಯ ಮೇಲೆ ಕಾರದಪುಡಿ ಎರಚಿ ಮಾಂಗಲ್ಯ ಸರ ಕಸಿದು ಆರೋಪಿ ಕ್ಷಣಾರ್ಧದಲ್ಲಿ ದ್ವಿಚಕ್ರ ವಾಹನದ ಮೂಲಕ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ.
ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ವಿಜಯ್ ಕುಮಾರ್ ಹಾಗೂ ಮುತ್ತುರಾಜು ಘಟನೆ ನಡೆದ ಎರಡು ದಿನದಲ್ಲಿ ಆರೋಪಿಯನ್ನ ಪತ್ತೆ ಹಚ್ಚಿ ಮರುವೆಕೆರೆ ಕೇರಿನ ಬೀದಿಯ ಶ್ರೀ ಮೀನುಗುಂಡಿ ರಂಗನಾಥ ಸ್ವಾಮಿ ದೇವಸ್ಥಾನದ ಬಳಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.








