ಬಿಜೆಪಿ ಶಾಸಕನ ಮನೆ ಮೇಲೆ ಕಲ್ಲು ತೂರಾಟ :ವಿಡಿಯೋದಲ್ಲಿ ಸಿಕ್ಕಿಬಿದ್ದ ಆರೋಪಿ!!

ಹಾಸನ:

     ಬಿಜೆಪಿ ಶಾಸಕ ಪ್ರೀತಂಗೌಡ ನಿವಾಸಕ್ಕೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಕಾರ್ಯಕರ್ತನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 

     ಬಂಧಿತ ಆರೋಪಿಯನ್ನು ಹಾಸನದ ಜೆಡಿಎಸ್ ಕಾರ್ಯಕರ್ತ ಚೇತನ್ ಎನ್ನಲಾಗಿದೆ.  ಫೆಬ್ರವರಿ 13ರಂದು ಬಿಜೆಪಿ ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆಯುತ್ತಿದ್ದ ಸಮಯದಲ್ಲಿ ಚೇತನ್ ಎರಡು ಕಲ್ಲೆತ್ತಿಕೊಂಡು ಬಂದು ಜನರ ನಡುವೆ ನಿಂತು ಶಾಸಕರ ಮನೆಯತ್ತ ಕಲ್ಲೆಸೆದಿದ್ದಾನೆ. ಬಳಿಕ ಕಲ್ಲೆಸೆದು ಸದ್ದಿಲ್ಲದೆ ಹಿಂದೆ ಓಡಿ ಹೋಗಿದ್ದನು. ಪ್ರತಿಭಟನೆ ವೇಳೆ ಚೇತನ್ ಗೌಡ ಕಲ್ಲು ತೂರಿದ್ದು ವಿಡಿಯೋದಿಂದ ಬಹಿರಂಗವಾಗಿತ್ತು.  

      ಚೇತನ್ ಜೆಡಿಎಸ್ ಕಾರ್ಯಕರ್ತನಾಗಿದ್ದು, ಲೋಕೋಪಯೋಗಿ ಸಚಿವ ರೇವಣ್ಣ, ಪ್ರಜ್ವಲ್ ಸೇರಿದಂತೆ ಹಲವು ನಾಯಕರೊಂದಿಗೆ ಫೋಟೋ ತೆಗೆಸಿಕೊಂಡಿಸಿದ್ದನು.

      ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಂಟು ಜನರ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಸದ್ಯಕ್ಕೆ ಬಡಾವಣೆ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 307 ಅಡಿ ಪ್ರಕರಣ ದಾಖಲಿಸಿ ಚೇತನ್ ನನ್ನು ಜೈಲಿಗೆ ಕಳುಹಿಸಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link