ಬೆಂಗಳೂರು:
ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ಡಿಫರೆಂಟ್ ಶೈಲಿಯ ವಿಡಿಯೋ ಮಾಡುತ್ತಿದ್ದ ನಾನು ನಂದಿನಿ ಖ್ಯಾತಿಯ ವಿಕ್ಕಿಪೀಡಿಯಾ ವಿಕಾಸ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.ವಿಡಿಯೋವೊಂದರಲ್ಲಿ ಮಾದಕ ವಸ್ತು ವ್ಯಸನದ ಬಗ್ಗೆ ಮಾತನಾಡಿದ ಆರೋಪದ ಮೇಲೆ ವಿಕಾಸ್ ಅವರನ್ನು ಬೈಯಪ್ಪನಹಳ್ಳಿ ಪೊಲೀಸರು, ಠಾಣೆಗೆ ಕರೆದು ವಿಚಾರಣೆ ನಡೆಸಿ ಬಳಿಕ ಎಚ್ಚರಿಕೆಯನ್ನು ನೀಡಿ ವಾಪಸ್ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.ಅಲ್ಲದೇ ವಿಡಿಯೋ ಮಾಡುವಾಗ ಅನುಸರಿಸಬೇಕಾದ ಕೆಲವು ಸೂಚನೆಗಳನ್ನು ಪೊಲೀಸರು ವಿಕಾಸ್‌ಗೆ ನೀಡಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ಖ್ಯಾತಿ ಪಡೆದಿರುವ ವಿಕಾಸ್, ವಿಕ್ಕಿಪೀಡಿಯಾ ಅಂತಾಲೇ ಫುಲ್ ಫೇಮಸ್ ಆಗಿದ್ದಾರೆ. ಕಾಮಿಡಿ ವಿಡಿಯೋಗಳು, ಹಾಡುಗಳು ಹಾಗೂ ಸಾಮಾಜಿಕ ಕಳಕಳಿ ಇರುವಂತಹ ವಿಡಿಯೋಗಳನ್ನು ಮಾಡುವ ಇವರು ನಾನು ನಂದಿನಿ ಬೆಂಗಳೂರಿಗೆ ಬಂದಿನಿ ಎನ್ನುವ ಹಾಡಿನ ಮೂಲಕ ಸಖತ್ ವೈರಲ್ ಆಗಿದ್ದರು. ಜೊತೆಗೆ ಕರಿಮಣಿ ಮಾಲೀಕ ರಾಹುಲ್ಲಾ ಎನ್ನುವ ಇವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನಿರೀಕ್ಷೆಗೂ ಮೀರಿ ಹಿಟ್ ಆಗಿತ್ತು.
ಸಿನಿಮಾ ಹಾಗೂ ಕೆಲವು ಪ್ರಾಡೆಕ್ಟ್‌ಗಳ ಪ್ರಮೋಷನ್ ಅನ್ನು ಬಹಳ ಡಿಫರೆಂಟ್ ಆಗಿ ಮಾಡುವ ವಿಕ್ಕಿಪೀಡಿಯಾ ಹಾಗೂ ಅವರ ತಂಡ ಸಾಮಾಜಿಕ ಜಾಲತಾಣ ಬಳಸುವವರ ಫೇವರೇಟ್ ಕಟೆಂಟ್ ಟೀಂ ಆಗಿದ್ದರು. ಇವರ ಕಾಮಿಡಿ ಕಟೆಂಟ್‌ಗಳನ್ನು ನೋಡದವರಿಲ್ಲ, ನೋಡಿ ನಗದವರಿಲ್ಲ ಎನ್ನುವಷ್ಟರ ಮಟ್ಟಿಗೆ ಇವರ ವಿಡಿಯೋಗಳು ವೈರಲ್ ಆಗಿ ಟ್ರೆಂಡಿಂಗ್ ಆಗುತ್ತದೆ.
ಇದೀಗ ಅದೇ ರೀತಿ ಜನರನ್ನು ನಗಿಸಲು ಹೋಗಿ ವಿಕ್ಕಿಪೀಡಿಯಾ ವಿಕಾಸ್ ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಆಗಿದೆ. ಅಮಿತ್ ಜೊತೆಗೆ ವಿಕಾಸ್ ಮಾಡಿದ್ದ ಹೊಸ ವಿಡಿಯೋವನ್ನು ಎರಡು ಮೂರು ದಿನಗಳ ಹಿಂದೆ ಅಪ್ಲೋಡ್ ಮಾಡಲಾಗಿತ್ತು. ಈ ವಿಡಿಯೋದಲ್ಲಿ ಖುಷಿಗಾಗಿ ಡ್ರಗ್ಸ್ ಎನ್ನುವ ವಾಕ್ಯವೊಂದನ್ನು ಬಳಸಲಾಗಿತ್ತು. ಸದ್ಯ ಆ ವಿಡಿಯೋವನ್ನು ಡಿಲೀಟ್ ಮಾಡಲಾಗಿದ್ದು, ಪೊಲೀಸರು ವಿಕಾಸ್‌ಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.