ಪ್ರೇಯಸಿ ಜೊತೆ ಪತ್ನಿ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದ ಪೋಲಿಸಪ್ಪ…!

ರಾಯಚೂರು:-

   ರಾಯಚೂರು ಜಿಲ್ಲೆ ಸಿರವಾರ ಪಟ್ಟಣದ ಮನೆಯೊಂದರಲ್ಲಿ ಹೆಡ್​ಕಾನ್ಸ್​ಟೇಬ್ ರಾಜ್ ಮೊಹಮ್ಮದ್, ಪ್ರೇಯಸಿ ಜೊತೆ ಇದ್ದಾಗಲೇ ಸಿಕ್ಕಿಬಿದ್ದಿದ್ದಾರೆ. ತನ್ನ ಪತಿ ಪ್ರೇಯಸಿ ಜೊತೆ ಇರುವುದನ್ನು ರೆಡ್​ಹ್ಯಾಂಡ್​ ಆಗಿ ಲಾಕ್ ಮಾಡಿದ ಪತ್ನಿ ಪ್ಯಾರಿ ಬೇಗಂ, ಬಳಿಕ ಎಸ್​​ಪಿಗೆ ಕರೆ ಮಾಡಿ ದೂರು ನೀಡಿದ್ದಾರೆ. 

   ರಾಜ್ ಮೊಹಮ್ಮದ್ , ಪ್ರೇಯಸಿಗಾಗಿ ಕಳೆದ 4 ವರ್ಷಗಳಿಂದ ಪತ್ನಿಯನ್ನು ದೂರ ಮಾಡಿದ್ದ ಎಂದು ಆರೋಪಿಸಲಾಗಿದೆ. ಆದ್ರೆ, ಈ ಬಾರಿ ಹೆಡ್​ಕಾನ್ಸ್​ಟೇಬಲ್ ರಾಜ್ ಮೊಹಮ್ಮದ್, ರಾಯಚೂರು ಜಿಲ್ಲೆ ಸಿರವಾರ ಪಟ್ಟಣದಲ್ಲಿ ಮನೆಯೊಂದರಲ್ಲಿ ಪ್ರೇಯಸಿ ಜೊತೆ ಇರುವಾಗಲೇ ಪತ್ನಿ ಪ್ಯಾರಿ ಬೇಗಂ ಲಾಕ್ ಮಾಡಿದ್ದು, ಬಳಿಕ ಕರೆ ಮಾಡಿ ಎಸ್​​ಪಿಗೆ ದೂರು ನೀಡಿದ್ದಾರೆ

   ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಠಾಣೆ ಪೊಲೀಸರು ಆಗಮಿಸಿ ಮನೆ ಲಾಕ್​ ಓಪನ್ ಮಾಡಿ ಬಳಿಕ ಹೆಡ್​ಕಾನ್ಸ್​ಟೇಬಲ್ ರಾಜ್ ಮೊಹಮ್ಮದ್ ಮತ್ತು ಪ್ರೇಯಸಿಯನ್ನು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಸುತ್ತಮುತ್ತಲಿನ ಜನರು ಜಮಾವಣೆಗೊಂಡಿದ್ದರು

Recent Articles

spot_img

Related Stories

Share via
Copy link
Powered by Social Snap