ಬೆಂಗಳೂರು:
ಫೆಬ್ರವರಿ 19 ರಂದು ಟ್ವೀಟರ್ನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್(kamal pant) ಲೈವ್ ಬರಲಿದ್ದಾರೆ.
ಈ ಕುರಿತು ಸ್ವತಃ ಕಮಲ್ ಪಂತ್ ಅವರು ಟ್ವೀಟ್(Tweet) ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ನಾನು ಈ ಶನಿವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆ ಟ್ವೀಟರ್ನಲ್ಲಿ ಲೈವ್(Live) ಬರುತ್ತೇನೆ ಎಂದು #AskCPBlr ಎಂಬ ಹ್ಯಾಶ್ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.
ಸಾರ್ವಜನಿಕರ ಕುಂದುಕೊರತೆಗಳನ್ನು, ಅಹವಾಲುಗಳನ್ನು, ಆಲೋಚನೆಗಳು ಮತ್ತು ಸಲಹೆಗಳನ್ನು ಪೊಲೀಸ್ ಆಯಕ್ತರೊಂದಿಗೆ ಹಂಚಿಕೊಳ್ಳಲು ಟ್ವೀಟರ್ ಅವಕಾಶ ಮಾಡಿಕೊಟ್ಟಿದೆ. ಇದನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಸತಃ ಹಂಚಿಕೊಂಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್, ಫೆಬ್ರವರಿ 19 ರಂದು ಭೇಟಿಯಾಗೋಣ ಎಂಬ ಶೀರ್ಷಿಕೆಯೊಂದಿಗೆ ಟ್ವೀಟ್ ಮಾಡಿದ್ದಾರೆ.
ನೀವು ಕೂಡ ನಿಮ್ಮ ಗೊಂದಲ ಅಥವಾ ಸಾರ್ವಜನಿಕ ವಲಯಗಳಲ್ಲಿನ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕು ಎಂಬ ನಿರೀಕ್ಷೆಯಲ್ಲಿದ್ದರೆ, ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಟ್ವಿಟರ್ ಲೈವ್ ಸೇಶನ್ನಲ್ಲಿ ಸಂಪರ್ಕಿಸಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ