ರೌಡಿಶೀಟರ್ ಗಳ ಬೆಳಗಿನ ಸುಖನಿದ್ರೆಗೆ ಪೊಲೀಸರ ಬ್ರೇಕ್

ಧಾರವಾಡ:

    ನಗರದಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಸಿಬ್ಬಂದಿ ಎಚ್ಚಗೊಂಡಿದ್ದು ನಗರದ 32 ರೌಡಿ ಶೀಟರ್ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಧಾರವಾಡದ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ 32 ರೌಡಿ ಶೀಟರ್ ಗಳ ಮನೆಗಲ ಮೇಲೆ ಬೆಳಗಿನ ಜಾವ ಇಸ್ಪೆಕ್ಟರ್ ವಿಶ್ವನಾಥ ಚೌಗಲೇ ನೇತೃತ್ವದಲ್ಲಿ ದಾಳಿ ಮಾಡಿ ಮನೆ ಹಾಗೂ ಸಂಬಂಧಿಸಿದ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರು.

    ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗವಹಿಸದಂತೆ ರೌಡಿ ಶೀಟರ್ ಗಳಿಗೆ ಖಡಕ್ ಎಚ್ಚರಿಕೆ ನೀಡಿದರು . ರೌಡಿಗಳು ಏಳುವ ಮುನ್ನವೇ ಮುನ್ನವೇ ಬಾಗಿಲು ಬಡಿದು, ಎಚ್ಚರಿಸುವ ಜೊತೆಗೆ ಎಚ್ಚರಿಕೆಯನ್ನ ಮೂರು ಠಾಣೆಯ ಪೊಲೀಸರು ಮಾಡಿದರು. ಧಾರವಾಡ ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ, ಶಹರ ಠಾಣೆಯ ವಿಶ್ವನಾಥ ಚೌಗಲೆ ಹಾಗೂ ಉಪನಗರ ಠಾಣೆಯ ದಯಾನಂದ ಶೇಗುಣಿಸಿ ಅವರುಗಳು ತಮ್ಮ ವ್ಯಾಪ್ತಿಯ ರೌಡಿಗಳಿಗೆ ಎಚ್ಚರಿಕೆಯನ್ನ ನೀಡಿದ್ದಾರೆ. ಎಸಿಪಿ ಬಿ.ಬಸವರಾಜ ಅವರ ಸೂಚನೆಯ ಆಧಾರದ ಮೇಲೆ ಸಂಘಟಿತವಾಗಿ ದಾಳಿ ಮಾಡಿದ ಪೊಲೀಸರು, ಅಹಿತಕರ ಘಟನೆಗಳು ನಡೆದರೇ, ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

   ಹುಬ್ಬಳ್ಳಿಯಲ್ಲಿ ಎರಡು ಭೀಕರ ಕೊಲೆಗಳು ನಡೆದ ನಂತರ ಪೊಲೀಸರು ಸಾಕಷ್ಟು ಜಾಗೃತೆ ವಹಿಸುತ್ತಿದ್ದು, ಸಾರ್ವಜನಿಕರು ಭಯ ಬೀಳದಂತ ಸ್ಥಿತಿಯನ್ನ ನಿರ್ಮಾಣ ಮಾಡುತ್ತಿದ್ದಾರೆ. ಜನತೆ ಕೂಡಾ ಪೊಲೀಸರಿಗೆ ಸಹಾಯ ಮಾಡುವ ಜೊತೆಗೆ, ಅಹಿತಕರ ಘಟನೆಗಳು ನಡೆಯಬಹುದೆಂಬ ಸೂಚನೆ ಸಿಕ್ಕರೂ ಪೊಲೀಸರಿಗೆ ತಕ್ಷಣ ತಿಳಿಸುವ ಅವಶ್ಯಕತೆಯಿದೆ ಎಂದು ಎಸಿಪಿ ಬಿ.ಬಸವರಾಜ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap