ಬೆಂಗಳೂರಿನ 17 ಕ್ಕೂ ಹೆಚ್ಚು ಡ್ಯಾನ್ಸ್ ಬಾರ್​ಗಳ ಮೇಲೆ ಪೊಲೀಸರಿಂದ ದಾಳಿ

ಬೆಂಗಳೂರು

    ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಡ್ಯಾನ್ಸ್ ಬಾರ್​ಗಳ  ಮೇಲೆ ಗುರುವಾರ ತಡರಾತ್ರಿ ಪೊಲೀಸರು ದಾಳಿ ಮಾಡಿದ್ದಾರೆ. ಕ್ಲಬ್ ಒನ್, ರಂಬಾ, ಬ್ರಿಗೇಡ್ ಬ್ಲೂ ಸೇರಿದಂತೆ 17 ಕ್ಕೂ ಹೆಚ್ಚು ಬಾರ್​​ಗಳ ಮೇಲೆ ದಾಳಿ ನಡೆದಿದೆ. ಅವಧಿ ಮೀರಿ ಕಾರ್ಯಾಚರಿಸುತ್ತಿರುವುದು, ಯುವತಿಯರಿಂದ ಅಶ್ಲೀಲ ನೃತ್ಯ ಮಾಡಿಸುತ್ತಿರುವುದೂ ಸೇರಿದಂತೆ ಹಲವು ನಿಯಮಗಳ ಉಲ್ಲಂಘನೆ ಆರೋಪದ ಕಾರಣ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

   ಬೆಂಗಳೂರು ಕೇಂದ್ರ ವಿಭಾಗ ಹಾಗೂ ಪಶ್ಚಿಮ ವಿಭಾಗದ ಡ್ಯಾನ್ಸ್ ಬಾರ್​ಗಳ ಮೇಲೂ ದಾಳಿ ನಡೆದಿದೆ. ಕಬ್ಬನ್ ಪಾರ್ಕ್, ಅಶೋಕ್ ನಗರ, ಎಸ್.ಜೆ.ಪಾರ್ಕ್, ಉಪ್ಪಾರಪೇಟೆ ಸೇರಿ ನಗರದ ವಿವಿಧ ಠಾಣಾ ವ್ಯಾಪ್ತಿಗಳ ಬಾರ್​ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ನಿಯಮ ಉಲ್ಲಂಘಿಸಿದ ಬಾರ್​ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

   ಮತ್ತೊಂದು ಪ್ರಕರಣದಲ್ಲಿ, ಕಾರುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಗ್ಯಾಂಗ್​ ಅನ್ನು ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಉಮೇಶ್, ತಬ್ರೇಜ್, ಜಬೀರ್ ಖಾನ್ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ 12 ಲಕ್ಷ ರೂ. ಮೌಲ್ಯದ ಆರು ಓಮ್ನಿ ಕಾರುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಈ ಹಿಂದೆ ಈ ಗ್ಯಾಂಗ್​​ ಟ್ರ್ಯಾಕ್ಟರ್​​ಗಳನ್ನು ಕದ್ದು ಮಾರಾಟ ಮಾಡುತ್ತಿತ್ತು. 2020ರಲ್ಲಿ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಟ್ರ್ಯಾಕ್ಟರ್ ಕಳ್ಳತನ ಕೇಸ್​​ನಲ್ಲಿ ಬಂಧನವಾಗಿತ್ತು. ನಂತರ ಜೈಲು ಸೇರಿದ್ದ ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದರು. ಬಳಿಕ ಟ್ರ್ಯಾಕ್ಟರ್ ಬಿಟ್ಟು ಓಮ್ನಿ ಕಾರು ಕದಿಯುತ್ತಿದ್ದರು. 

   ಬೆಂಗಳೂರಿನಲ್ಲಿ ಕಾರುಗಳನ್ನು ಕದ್ದು ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದರು. ಆರೋಪಿಗಳು ಮೇ ತಿಂಗಳಲ್ಲಿ ವಿದ್ಯಾರಣ್ಯಪುರದಲ್ಲಿ ಕಾರು ಕಳವು ಮಾಡಿದ್ದರು. ಆ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.

Recent Articles

spot_img

Related Stories

Share via
Copy link