ಬೆಂಗಳೂರು : ಸ್ವಾತಂತ್ರ್ಯೋತ್ಸವ ಸಮಾರಂಭ ಆಚರಣೆಗೆ ಪೊಲೀಸ್‌ ಸರ್ಪಗಾವಲು

ಬೆಂಗಳೂರು

    ಸ್ವಾತಂತ್ರ್ಯೋತ್ಸವ ಸಮಾರಂಭ ಆಚರಣೆಗೆ ಬೆಂಗಳೂರು ನಗರದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಭದ್ರತೆ ಸಂಬಂಧಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಮಹತ್ವದ ಮಾಹಿತಿ ನೀಡಿದ್ದಾರೆ. ಸಿದ್ಧತೆ ಮತ್ತು ಭದ್ರತೆಗೆ ಸಂಬಂಧಿಸಿದ ಮಾಹಿತಿ ನೀಡಿದ ಅವರು, ಮಾಣೆಕ್​ ಷಾ ಪರೇಡ್ ಗ್ರೌಂಡ್​​ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಿಹರ್ಸಲ್‌ ಕಾರ್ಯಕ್ರಮ ಮಾಡಲಾಗಿದೆ. ಕಾರ್ಯಕ್ರಮ ಹಿನ್ನೆಲೆ 15ದಿನಗಳಿಂದ ಕಟ್ಟೆಚ್ಚರವಹಿಸಲಾಗಿದೆ ಎಂದರು. 

   15ನೇ ತಾರೀಖಿನಂದು ನಡೆಯಲಿರುವ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ ವಹಿಸಲಾಗಿದೆ. 10 ಡಿಸಿಪಿ, 17 ಎಸಿಪಿ, 42 ಇನ್ಸ್​​​ಪೆಕ್ಟರ್, 112 ಪಿಎಸ್ಐ, 62 ಎಎಸ್ಐ, 511 ಕಾನ್ಸ್​​​ಟೇಬಲ್​​ಗಳು, 72 ಮಹಿಳಾ ಸಿಬ್ಬಂದಿ ನೇಮಕ ಮಾಡಲಾಗಿದೆ. 129 ಮಂದಿ ಮಫ್ತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿ ದಯಾನಂದ ಮಾಹಿತಿ ನೀಡಿದ್ದಾರೆ.

   ಸಿಸಿಟಿವಿ ಪರಿಶೀಲನೆ ಮಾಡುವುದಕ್ಕೆಂದೇ 27 ಸಿಬ್ಬಂದಿಯ ನೇಮಕ ಮಾಡಲಾಗಿದೆ. ಹೆಚ್ಚುವರಿಯಾಗಿ ಹತ್ತು ಕೆಎಸ್ಆರ್​ಪಿ ತುಕಡಿ ನಿಯೋಜನೆ‌ ಮಾಡಲಾಗಿದೆ. ಸಂಚಾರ ನಿರ್ವಹಣೆ ವಿಚಾರವಾಗಿಯೂ ಪೊಲೀಸ್ ಅಧಿಕಾರಿಗಳ‌ ನೇಮಕ ಮಾಡಲಾಗಿದೆ ಎಂದು ಅವರು ಹೇಳಿದರು. 3 ಜನ ಡಿಸಿಪಿ, 6 ಜನ ಎಸಿಪಿ, 19 ಜನ ಇನ್ಸ್​ಪೆಕ್ಟರ್, 32 ಪಿಎಸ್ಐ, 111 ಎಎಸ್ಐ ಹಾಗೂ 430 ಕಾನ್ಸಟೇಬಲ್​​​ಗಳು ಸೇರಿದಂತೆ ನೂರಾರು ಸಿಬ್ಬಂದಿ‌ಯನ್ನು ಮೈದಾನದ ಸುತ್ತಮುತ್ತ ಟ್ರಾಫಿಕ್ ಕಂಟ್ರೋಲ್‌ಗೆ ನೇಮಕ‌ ಮಾಡಲಾಗಿದೆ. ಪ್ರತಿ ಗೇಟ್​​ನಲ್ಲೂ ಪೊಲೀಸ್ ಅಧಿಕಾರಿಗಳು ತಪಾಸಣೆ ನಡೆಸುತ್ತಾರೆ. ಅನುಮಾನ ಬಂದರೆ ಅಂತಹ ವ್ಯಕ್ತಿಗಳನ್ನು ವಶಪಡೆಯಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

   ಸಿಗರೇಟ್, ಬೆಂಕಿಪೊಟ್ಟಣ, ಕಪ್ಪು ಕರ ವಸ್ತುಗಳು, ಚೂಪಾದ ವಸ್ತುಗಳು, ಕ್ಯಾಮರಾಗಳಿಗೆ ಅವಕಾಶ ಇಲ್ಲ. ಮೈದಾನದ ಒಳಗೆ ಬಿಡುವ ಮುನ್ನ ಎಲ್ಲವನ್ನೂ ಪರಿಶೀಲನೆ ಮಾಡಲಾಗುತ್ತದೆ ಎಂದು ದಯಾನಂದ ಹೇಳಿದರು.

Recent Articles

spot_img

Related Stories

Share via
Copy link