ನಕಲಿ ನಂಬರ್‌ ಫ್ಲೇಟ್‌ ಬಳಸಿ ಸಿಕ್ಕಿ ಬಿದ್ದ ಐಪಿಸ್‌ ಅಧಿಕಾರಿ …..!

ಮೇಘಾಲಯ 

    ನಮ್ಮ ನಡುವೆ ಹಲವರು ತರಹೇವಾರಿ ನಂಬರ್‌ ಪ್ಲೇಟ್‌ಗಳನ್ನು ಬಳಸಿಕೊಂಡು ಶೋಕಿ ಮಾಡುವುದನ್ನು ನೋಡಿದ್ದೇವೆ. ಕೆಲವರು ಸಾಕಷ್ಟು ದುಡ್ಡುಕೊಟ್ಟು ಫ್ಯಾನ್ಸಿ ನಂಬರ್‌ ಪ್ಲೇಟ್‌ಗಳನ್ನು ಬಳಸಿದರೆ, ಇನ್ನು ಕೆಲವರು ನಕಲಿ ನಂಬರ್‌ ಪ್ಲೇಟ್‌ಗಳನ್ನು ಬಳಸುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಉನ್ನತ ಪೊಲೀಸ್‌ ಅಧಿಕಾರಿಯೇ ಎದ್ದು ಹೊಲ ಮೇಯ್ದಿದ್ದಾನೆ.

    ಇಲ್ಲೊಂದು ಕಡೆ ಡಿಜಿಪಿಯೊಬ್ಬ ತನ್ನ ಲಕ್ಷುರಿ ಕಿಯಾ ಕಾರ್ನಿವಲ್‌ ಕಾರಿಗೆ ನಕಲಿ ವಿಐಪಿ ನಂಬರ್‌ ಪ್ಲೇಟ್‌ ಅನ್ನು ಅಳವಡಿಸಿಕೊಂಡು ಶೋಕಿ ಮಾಡುತ್ತಿದ್ದುದು ಕಂಡು ಬಂದಿದ್ದು, ಈತನ ಮೇಲೆ ಇದೀಗ ಕೇಸ್‌ ದಾಖಲಿಸಲಾಗಿದೆ. ಈತನನ್ನು ಲಜ್ಜಾ ರಾಮ್‌ ಬಿಶ್ಣೋಯ್‌ ಎಂದು ಗುರುತಿಸಲಾಗಿದ್ದು, ಈ ಡಿಜಿಪಿ ಮೇಲೆ ಮೇಘಾಲಯ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. 

    ಮಾಹಿತಿಗಳ ಪ್ರಕಾರ ಈತ ತನ್ನ ಬಿಳಿ ಬಣ್ಣದ ಕಿಯಾ ಕಾರ್ನಿವಲ್‌ನಲ್ಲಿ ಈ ನಂಬರ್‌ ಪ್ಲೇಟ್‌ ಅನ್ನು ಉಪಯೋಗಿಸುತ್ತಿದ್ದ. ಈ ನಕಲಿ ನಂಬರ್‌ ಪ್ಲೇಟ್‌ ಅನ್ನು ಬಳಸಿಕೊಂಡೇ ಹಲವು ಕಡೆ ಹೋಗಿದ್ದಾನೆ. ಸದ್ಯಕ್ಕೆ ಈತನನ್ನು ಕೆಲಸದಿಂದ ಸಸ್ಪೆಂಡ್‌ ಮಾಡಿದ್ದು, ತನಿಖೆ ನಡೆಯುತ್ತಿದೆ. ಈ ಡಿಜಿಪಿ ಲಜ್ಜಾ ರಾಮ್‌ ಬಿಶ್ಣೋಯ್ ತನ್ನ ಕಾರಿಗೆ ಬಳಕೆ ಮಾಡಿರುವ ನಬರ್‌ ಆತನ ಅರ್ಹತೆಎಗೂ ಮೀರಿದ್ದಾಗಿದೆ. ವಿಡಿಯೋದಲ್ಲಿ ಕಾಣುವಂತೆ ಕಿಯಾ ಕಾರ್ನಿವಲ್‌ ಕಾರಿನ ನಂಬರ್‌ ಪ್ಲೇಟ್, ML 02 A 0001 ಎಂದು ತಿಳಿದು ಬರುತ್ತದೆ.

    ಇಲ್ಲಿನ ಇನ್ನೊಂದು ಕುತೂಹಲಕಾರಿ ವಿಷಯವೆಂದರೆ ಈತನ ಕಾರಿನಲ್ಲಿ ಕಂಡು ಬಂದ ML 02 A 0001 ಬಂಬರ್‌ ಪ್ಲೇಟ್‌, ಹ್ಯುಂಡೈ ವೆರ್ನಾ ಕಾರೊಂದರ ನಂಬರ್‌ ಪ್ಲೇಟ್‌ ಆಗಿದ್ದು ಈ ಕಾರನ್ನು ರಾಜ್ಯ ಸಾರಿಗೆ ಸಂಸ್ಥೆಯ ಅಡಿಯಲ್ಲಿ ರಿಜಿಸ್ಟರ್‌ ಮಾಡಲಾಗಿತ್ತು. ಆ ನಂಬರ್‌ ಪ್ಲೇಟ್‌ ಈತನ ಕೈ ಹೇಗೆ ಸೇರಿತು ಎಂಬುದನ್ನು ತನಿಖೆ ಮಾಡಬೇಕಿದೆ ಎಂದು ಹೇಳಲಾಗುತ್ತಿದೆ.

   ಇನ್ನು ಆರೋಪಕ್ಕೆ ಒಳಗಾಗಿರುವ ಲಜ್ಜಾ ರಾಮ್‌ ಬಿಶ್ಣೋಯ್ ೧೯೯೧ ರ ಐಪಿಎಸ್‌ ಬ್ಯಾಚ್‌ನ ಅಸ್ಸಾಮ್‌ ಮೇಘಾಲಯ ಕ್ಯಾಡರ್‌ನ ಐಪಿಎಸ್‌ ಆಫೀಸರ್ ಆಗಿದ್ದಾರೆ. ಈತನ ಬಳಿ ನಂಬರ್‌ ಪ್ಲೇಟ್‌ ಪ್ರಕರಣದ ಕುರಿತಾಗಿ ಕೇಳಿದಾಗ ಅದಕ್ಕೆ ಸೆಕ್ಯುರಿಟಿ ಕಾರಣಗಳಿದೆ ಎಂದು ಕಾರಣ ನೀಡಿರುವುದಾಗಿ ತಿಳಿದು ಬಂದಿದೆ.

    ಇನ್ನು ಪೊಲೀಸ್ ಅಧಿಕಾರಿಯ ಕಿಯಾ ಕಾರ್ನಿವಲ್‌ ಬಗ್ಗೆ ನೋಡುವುದಾದರೆ, ಭಾರತದಲ್ಲಿ ಕಿಯಾ ಕಾರ್ನಿವಲ್ ರೂ.30.99 ಲಕ್ಷದಿಂದ ರೂ.35.49 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತಿತ್ತು ಹಾಗೂ ಏಳು ಆಸನ ವ್ಯವಸ್ಥೆಯಲ್ಲಿ ಮೂರು ರೂಪಾಂತರದಲ್ಲಿ ಸಿಗುತ್ತಿತ್ತು. ಇದರ 2.2 ಲೀಟರ್ ಡೀಸೆಲ್ ಎಂಜಿನ್, 200 PS ಗರಿಷ್ಠ ಪವರ್ ಹಾಗೂ 440 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 8 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಹೈಲೈಟ್.

    ಕಿಯಾ ಕಾರ್ನಿವಲ್ ಎಂಪಿವಿ ಗ್ರಾಹಕರನ್ನು ಆಕರ್ಷಿಸುವ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದ್ದು, 3 ಜೋನ್ ಕ್ಲೇಮೇಟ್ ಕಂಟ್ರೋಲ್, ಡುಯೆಲ್ ಪ್ಯಾನಲ್ ಸನ್‌ರೂಫ್, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮಿಡಲ್ ರೋ ಆಕ್ಯುಪೆಟ್ಸ್ ಗಾಗಿ 10.1-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ ಹೊಂದಿದೆ. ಇದಿಷ್ಟೇ ಅಲ್ಲದೆ, 540 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಪಡೆದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap