ಶಿವಯೋಗಿ
ಶತಮಾನದ ಶಕಪುರುಷ
ಸಿದ್ಧಗಂಗೆಯ ಶಿವಯೋಗಿ
ತ್ರಿದಾಸೋಹ ನಿರತ ಚೇತನ
ಕಲ್ಪತರು ನಾಡ ಕರ್ಮಯೋಗಿ |
ಹಸಿದವರಿಗೆ ಅನ್ನವನ್ನು ನೀಡಿ
ಅಜ್ಞಾನ ಕಳೆದ ಅಕ್ಷರ ಯೋಗಿ
ಬಳಲಿದವರಿಗೆ ಆಶ್ರಯ ಕೊಟ್ಟ
ಶತಾಯುಷಿ ಭವ, ಭಾವಯೋಗಿ |
ಒಳಗಣ್ಣು ತೆರೆದು ನಾಡಿ ಹಿಡಿದು
ಆಪ್ತತೆಯ ಮೈದವಡಿದ ಧನ್ಯಯೋಗಿ
ಅಸಾಹಯಕರ ಅಂತರಂಗ ಅರಿತು
ತಾನೇ ಅವರ ಕಣ್ಣಾದ ಧರ್ಮಯೋಗಿ |
ದೇಶದೆಲ್ಲೆಡೆ ದಾಸೋಹ ಪರಂಪರೆ ಸೃಷ್ಟಿಸಿ
ನವ ರಸ ಭಾವ ಕಿರಣವಾದ ಆತ್ಮಯೋಗಿ
ಸೇವೆಯ ಬಾಗಿಲು ತೆರೆದು ಕಾಯಕ ಮಾಡಿ
ವಿಶ್ವಮಾನ್ಯ ಚೇತನರೆನಿಸಿದ ಕಾಯಕಯೋಗಿ |
ಸರಳತೆ ಸಜ್ಜನಿಕೆ ವ್ಯಕ್ತಿತ್ವ ವಿಕಸನದ ದೀಪ
ಎಂದು ತಾನೇ ಹಣತೆಯಾದ ಜ್ಞಾನಯೋಗಿ
ನುಡಿದಂತೆ ನಡೆದ ಹಲವಾರು ಸಜ್ಜನರಂತೆ
ಹಣತೆಯ ಹಚ್ಚಿ ಸಾಧಕರಾದ ದಿವ್ಯಯೋಗಿ |
ಭಕ್ತರ ತನು ಮನಗಳ ತಮವ ಕಳೆದು
ಸುಜ್ಞಾನವ ಬಿತ್ತಿದ ಪರಂದಾಮ ಯೋಗಿ
ಜನ ಮನ ಅರಳುವಂತೆ ಶುಭ ಹಾರೈಸಿ
ಜನಮಾನಸರತ್ನರಾದ ನಿಷ್ಕಾಮ ಯೋಗಿ. ||
ವೆನ್ನಲಕೃಷ್ಣ ತುಮಕೂರು
98457 89124
