ಭಾರತದ ಜನಸಂಖ್ಯೆ ಬೆಳವಣಿಗೆ ಬಗ್ಗೆ UN ಹೇಳಿದ್ದೇನು ಗೊತ್ತಾ….!

ಜಿನಿವಾ: 

    ಭಾರತದ ಜನಸಂಖ್ಯೆಯು 2060ರ ಹೊತ್ತಿಗೆ ಸುಮಾರು 1.7 ಶತಕೋಟಿಗೆ ಏರುತ್ತದೆ ಮತ್ತು ನಂತರ ಶೇ.12 ರಷ್ಟು ಕುಸಿಯುತ್ತದೆ ಹಾಗೂ ದೇಶವು ಶತಮಾನದುದ್ದಕ್ಕೂ ವಿಶ್ವದ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ.

    ಭಾರತವು ಪ್ರಸ್ತುತ ಜನಸಂಖ್ಯೆಯ ದೃಷ್ಟಿಯಿಂದ ವಿಶ್ವದ ಅತಿದೊಡ್ಡ ದೇಶವಾಗಿದೆ ಮತ್ತು ಇದು ಶತಮಾನದುದ್ದಕ್ಕೂ ಹಾಗೆಯೇ ಮುಂದುವರಿಯಲಿದೆ ಎಂದು ವಿಶ್ವಸಂಸ್ಥೆಯ ಹಿರಿಯ ಜನಸಂಖ್ಯಾ ವ್ಯವಹಾರಗಳ ಅಧಿಕಾರಿ ಕ್ಲೇರ್ ಮೆನೋಜಿ ಗುರುವಾರ ಯುಎನ್ ವಿಶ್ವ ಜನಸಂಖ್ಯಾ ಭವಿಷ್ಯ 2024 ಸಾರಾಂಶ   ವರದಿಯನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಹೇಳಿದರು.

    ವರ್ಲ್ಡ್‌ ಪಾಪ್ಯುಲೇಶನ್‌ ಪ್ರಾಸ್ಪೆಕ್ಟ್ಸ್ 2024 ವರದಿಯು, ಮುಂಬರುವ 50-60 ವರ್ಷಗಳಲ್ಲಿ ವಿಶ್ವದಲ್ಲಿ ಜನಸಂಖ್ಯೆಯ ಬೆಳವಣಿಗೆ ಮುಂದುವರೆಯುತ್ತದೆ ಎಂದು ನಿರೀಕ್ಷಿಸಲಾಗಿದೆ. 2080 ರ ಮಧ್ಯದಲ್ಲಿ ಸುಮಾರು 10.3 ಶತಕೋಟಿ ತಲುಪುತ್ತದೆ, ಇದು 2024 ರಕ್ಕೆ ಹೋಲಿಸಿದರೆ 8.2 ಶತಕೋಟಿ ಹೆಚ್ಚಾಗುತ್ತದೆ. ಉತ್ತುಂಗಕ್ಕೇರಿದ ನಂತರ, ಜಾಗತಿಕ ಜನಸಂಖ್ಯೆಯು ಕ್ರಮೇಣ ಕ್ಷೀಣಿಸಲು ಪ್ರಾರಂಭಿಸುತ್ತದೆ, ಶತಮಾನದ ಅಂತ್ಯದ ವೇಳೆಗೆ 10.2 ಶತಕೋಟಿ ಜನರಿಗೆ ಇಳಿಯುತ್ತದೆ ಎಂದಿದೆ. 

 

  ವರದಿಯ ಪ್ರಕಾರ, 2024 ರಲ್ಲಿ ಭಾರತದ ಜನಸಂಖ್ಯೆಯು 1.45 ಶತಕೋಟಿ ಎಂದು ಅಂದಾಜಿಸಲಾಗಿದೆ ಮತ್ತು ಇದು 2054 ರಲ್ಲಿ 1.69 ಶತಕೋಟಿಗೆ ಏರುತ್ತದೆ. ಇದರ ನಂತರ, ಭಾರತದ ಜನಸಂಖ್ಯೆಯು 2100 ರಲ್ಲಿ ಶತಮಾನದ ಅಂತ್ಯದ ವೇಳೆಗೆ 1.5 ಶತಕೋಟಿಗೆ ಕುಸಿಯುತ್ತದೆ ಎಂದು ಅಂದಾಜಿಸಲಾಗಿದೆ, ಆದರೆ ಭೂಮಿಯ ಮೇಲೆ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಉಳಿಯುತ್ತದೆ. ಇದು 2060 ರ ದಶಕದಲ್ಲಿ ಉತ್ತುಂಗಕ್ಕೇರುತ್ತದೆ ಮತ್ತು ಅನಂತರ ಅದು ಸ್ವಲ್ಪಮಟ್ಟಿಗೆ ಕುಸಿಯಲು ಪ್ರಾರಂಭಿಸುತ್ತದೆ.

   ಆದ್ದರಿಂದ ಶತಮಾನದ ಅಂತ್ಯದ ವೇಳೆಗೆ, ಭಾರತವು ಸುಮಾರು 1.5 ಶತಕೋಟಿ ಜನಸಂಖ್ಯೆ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ 2024 ರಲ್ಲಿ 1.41 ಶತಕೋಟಿಯಷ್ಟಿರುವ ಚೀನಾದ ಜನಸಂಖ್ಯೆಯು 2054 ರಲ್ಲಿ 1.21 ಶತಕೋಟಿಗೆ ಕುಸಿಯುತ್ತದೆ ಮತ್ತು 2100 ರ ವೇಳೆಗೆ 633 ಮಿಲಿಯನ್‌ಗೆ ಕುಸಿಯುತ್ತದೆ ಎಂದು ವರದಿ ಹೇಳಿದೆ. 

   2054 ರ ವೇಳೆಗೆ ದುಡಿಯುವ ವಯಸ್ಸಿನ ಜನಸಂಖ್ಯೆಯು ಬೆಳವಣಿಗೆಯಾಗುವ ದೇಶಗಳಲ್ಲಿ ಭಾರತವೂ ಸೇರಿದೆ ಎಂದು ವರದಿ ಉಲ್ಲೇಖಿಸಿದೆ. 20 ರಿಂದ 64 ವರ್ಷ ವಯಸ್ಸಿನ ಜನಸಂಖ್ಯೆಯನ್ನು ದುಡಿಯುವ ವಯಸ್ಸಿನ ಜನಸಂಖ್ಯೆ ಎಂದು ಪರಿಗಣಿಸಲಾಗಿದೆ. ದುಡಿಯುವ ವಯಸ್ಸಿನ ಜನಸಂಖ್ಯೆಯ ಸಾಮರ್ಥ್ಯವನ್ನು ಬಳಸಿಕೊಳ್ಳಲು ದೇಶಗಳು ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡಬೇಕು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಸರ್ಕಾರದ ದಕ್ಷತೆಯನ್ನು ಸುಧಾರಿಸಲು ಸುಧಾರಣೆಗಳನ್ನು ಜಾರಿಗೆ ತರಬೇಕು ಎಂದು ವರದಿ ಸಲಹೆ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap