ಮಾರಾಟಕ್ಕಿದೆ ಪ್ರಜ್ವಲ್‌ ವಿಡೀಯೋ : ಸಮಾಜಿಕ ಜಾಲತಾಣದಲ್ಲಿ ಪೊಸ್ಟರ್‌ ವೈರಲ್

ಬೆಂಗಳೂರು :

     ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಮಾರಾಟ ದಂಧೆ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಜ್ವಲ್ ರೇವಣ್ಣ ಫೋಟೋದೊಂದಿಗೆ ವಿಡಿಯೋ ಬೇಕೇ? ಎಂಬ ಪೋಸ್ಟರ್ ಹರಿದಾಡುತ್ತಿದೆ.

    ಇಂತಹ ಫೋಟೋ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹರಿದಾಡುತ್ತಿದ್ದು ಎಸ್‌ಐಟಿ ಅಧಿಕಾರಿಗಳು ಇದೆಲ್ಲವನ್ನೂ ಗಮನಿಸುತ್ತಿಲ್ಲ ಯಾಕೆ ಎಂದು ಜನ ಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬೇಕಾ? ಡಿಎಂ ಮಾಡಿ. ಡಿಎಂ  ಮಾಡುವುದರ ಜೊತೆಗೆ ಪೇಜ್ ಲೈಕ್ ಮಾಡಿ ಎಂದು ಪೋಸ್ಟರ್ ಹಾಕಲಾಗಿದೆ.

    ಪ್ರಜ್ವಲ್ ರೇವಣ್ಣ ಅವರ ವಿಡಿಯೋಗಳನ್ನು ಹಂಚಿಕೆ ಮಾಡಲು ಕಿಡಿಗೇಡಿಗಳು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಹಾಸನದಲ್ಲಿ ವಿಡಿಯೋ ಹಂಚಿಕೊಳ್ಳಲು ಬಸ್‌ ಸ್ಟಾಪ್ ಇತರೆಡೆ ಪೆನ್‌ಡ್ರೈವ್ಗಳನ್ನು ಹಂಚಿಕೊಳ್ಳಲಾಗಿತ್ತು. ವಿಡಿಯೋದಲ್ಲಿ ಇರುವ ಮಹಿಳೆಯರ ಮುಖ ಕೂಡ ನೇರವಾಗಿ ತೋರಿಸಲಾಗಿತ್ತು.

    ವಿಡಿಯೋ ವೈರಲ್ ಆದ ಬಳಿಕ ಅದೆಷ್ಟೋ ಮಹಿಳೆಯರು ಛೀಮಾರಿ ಹಾಕಿಸಿಕೊಂಡು ಆತ್ಮಹತ್ಯೆಗೂ ಯತ್ನಿಸಿದ್ದರು. ಇದೇ ವಿಡಿಯೋಗಳನ್ನು ಇಟ್ಟುಕೊಂಡು ಕೆಲ ಕಿಡಿಗೇಡಿಗಳು ದಂಧೆಗಿಳಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನೇರವಾಗಿ ‘ಪ್ರಜ್ವಲ್ ವಿಡಿಯೋ ಬೇಕಾ?’ ಎಂಬ ಪೋಸ್ಟರ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

    ಪ್ರಜ್ವಲ್ ರೇವಣ್ಣ ವಿಡಿಯೋ ಇವೆ. ವಿಡಿಯೋ ಬೇಕಾದರೆ ಪೇಜ್ ಅನ್ನು ಲೈಕ್ ಮಾಡಿ. ಹಣ ಪಾವತಿ ಮಾಡಿ. ನೇರವಾಗಿ ಮೆಸೇಜ್ ಮಾಡುವ ಮೂಲಕ ವಿಡಿಯೋ ಪಡೆಯಬಹುದು ಎಂದು ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ನೇರವಾಗಿ ಪೋಸ್ಟರ್ ಹಾಕಿದ್ದಾರೆ. ತಮ್ಮ ಪೇಜ್ ಲೈಕ್ ಮಾಡಲು ಹಾಗೂ ಹಣದ ಆಸೆಗೆ ಅಪರಾಧಕ್ಕಿಳಿದಿದ್ದಾರೆ.

    ಅಷ್ಟೇ ಅಲ್ಲದೇ ಕೆಲ ನಟಿಯರ ಪೋಟೋ ಬಳಿಸಿಕೊಂಡು ಹಣದ ಬೇಡಿಕೆ ಇಡುತ್ತಿದ್ದಾರೆ. ಇದೆಲ್ಲದನ್ನು ಎಸ್‌ಐಟಿ ಗಮನಿಸುತ್ತಿಲ್ಲ ಯಾಕೆ ಎಂದು ಜನ ಸಾಮಾನ್ಯರು ಕಿಡುಕಾರುತ್ತಿದ್ದಾರೆ. ಇಂತಹ ವಿಡಿಯೋಗಳು ಸಿಗುವುದರಿಂದ ಅದೆಷ್ಟೋ ಜನ ಹಾಳಾಗುತ್ತಾರೆ. ಇಂತಹ ದಂಧೆಕೋರರನ್ನು ಬಂಧಿಸಿಬೇಕು. ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜನ ಒತ್ತಾಯಿಸಿದ್ದಾರೆ.

   ಸಂತ್ರಸ್ತೆಯರಲ್ಲದೆ ತೆಲುಗು ನಾಯಕ ನಟಿಯರ ಫೋಟೋ ಕೂಡ ಪೋಸ್ಟರ್‌ನಲ್ಲಿ ಬಳಸಿಕೊಳ್ಳಲಾಗುತ್ತಿದೆ. ಈಗಾಗಲೇ ವಿಡಿಯೋಗಳನ್ನು ಹಂಚಿಕೊಳ್ಳದಂತೆ ಸುತ್ತೋಲೆ ಬಿಡುಗಡೆ ಮಾಡಲಾಗಿದೆ. ಆದರೂ ಹಣಕ್ಕಾಗಿ ಲೈಕ್ ಪಡೆಯಲು ಕೆಲ ಕಿಡಿಗೇಡಿಗಳು ಈ ಕೃತ್ಯಕ್ಕೆ ಇಳಿದಿದ್ದಾರೆ.

   ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಅವರನ್ನು ತನಿಖೆಗೆ ಒಳಪಡಿಸಲಾಗಿದೆ. ಏಳು ದಿನ ಎಸ್‌ಐಟಿ ಬಂಧನದಲ್ಲಿರುವ ಪ್ರಜ್ವಲ್ ರೇವಣ್ಣ ತನಿಖೆ ಬಳಿಕಷ್ಟೇ ಎಲ್ಲಾ ಮಾಹಿತಿ ಹೊರಬೀಳಲಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ