ಬಳ್ಳಾರಿ :
ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಪರ ಪ್ರಚಾರ ಕಾರ್ಯ ನಡೆಸಲು ತೆಲುಗಿನ ಸ್ಟಾರ್ ನಟ ಹಾಗೂ ಜನಸೇನಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಪವನ್ ಕಲ್ಯಾಣ್ ಅವರು ಇದೇ ತಿಂಗಳ 17ರಂದು ಬಳ್ಳಾರಿಗೆ ಆಗಮಿಸಲಿದ್ದಾರೆ.
ಏ.17ರಂದು ಬೆಳಗ್ಗೆ ರಾಯಚೂರಿನ ಗಂಜ್ ವೃತ್ತದಲ್ಲಿ ಬೃಹತ್ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ. ನಂತರ 12.15ಕ್ಕೆ ಯೆರಮರಸ್ನ ಹೆಲಿಪ್ಯಾಡ್ನಿಂದ್ ಬಳ್ಳಾರಿಯ ಕೊಳಗಲ್ ರಸ್ತೆಯ ಹೆಲಿಪ್ಯಾಡ್ಗೆ ಆಗಮಿಸಿ 1.10ರಿಂದ ಬಳ್ಳಾರಿಯಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ರಾಯಲ್ ವೃತ್ತದಿಂದ, ಬೆಂಗಳೂರು ರಸ್ತೆ ಮೂಲಕ ಎಪಿಎಂಸಿ ಬಳಿ ವರೆಗೆ ರೋಡ್ ಶೋ ನಡೆಸಿ ಪ್ರಚಾರ ನಡೆಸಿ 2.15 ಬಳ್ಳಾರಿಯ ಕೊಳಗಲ್ ಹೆಲಿಪ್ಯಾಡ್ ಮೂಲಕ ಚಿಕ್ಕಬಳ್ಳಾಪುರಕ್ಕೆ ತೆರಳಲಿದ್ದಾರೆ ಎಂದು ರಾಜ್ಯ ಬಿಜೆಪಿ ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ