ಗೂಗಲ್‌ ಪ್ರಮುಖ ಹುದ್ದೆಗೇರಿದ ಪ್ರಭಾಕರ್‌ ರಾಘವನ್‌ ….!

ಬೆಂಗಳೂರು:

    ಗೂಗಲ್​ ಚೀಫ್​ ಟೆಕ್ನಾಲಾಜಿಸ್ಟ್​ ಮುಖ್ಯ ತಂತ್ರಜ್ಞರಾಗಿ ಪ್ರಭಾಕರ್ ರಾಘವನ್ ನೇಮಕಗೊಂಡಿದ್ದಾರೆ.ಗೂಗಲ್ ಸಿಇಒ ಸುಂದರ್ ಪಿಚೈ ಈ ಕುರಿತಂತೆ ಮಾಹಿತಿ ನೀಡಿದ್ದಾರೆ, ಎನ್ನಲಾಗಿದ್ದು ರಾಘವನ್ ಅವರು ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಎತ್ತರಕ್ಕೆ ಸಾಗುವ ಸಮಯ ಬಂದಿದೆ. 12 ವರ್ಷಗಳ ಕಾಲ ಪ್ರಮುಖ ವಿಭಾಗಗಳಲ್ಲಿ ಕೆಲಸ ನಿರ್ವಹಿಸಿದ ಪ್ರಭಾಕರ್, ತಮ್ಮ ಕಂಪ್ಯೂಟರ್ ಸೈನ್ಸ್​ ಮೂಲಕ್ಕೆ ಹಿಂತಿರುಗಿದ್ದಾರೆ. ರಾಘವನ್ ಗೂಗಲ್​ನ ಚೀಫ್​ ಟೆಕ್ನಾಲಿಜಿಸ್ಟ್​ ಆಗಿ ಕೆಲಸ ಮಾಡಲಿದ್ದಾರೆ. ಈ ಮೂಲಕ ಅವರು ನನ್ನೊಂದಿಗೆ ನಿಕಟವಾಗಿ ಪಾಲುದಾರರಾಗುತ್ತಾರೆ ಎಂದು ಸುಂದರ್ ಪಿಚೈ ಹೇಳಿದ್ದಾರೆ.

   ಕಂಪನಿಯ ಸರ್ಚ್ ಇಂಜಿನ್ ಮತ್ತು ಜಾಹೀರಾತು ಉತ್ಪನ್ನಗಳ ಉಸ್ತುವಾರಿ ಕಾರ್ಯನಿರ್ವಾಹಕ ಪ್ರಭಾಕರ್ ರಾಘವನ್ ಅವರಿಗೆ ಗೂಗಲ್​ ಹೆಚ್ಚಿನ ಜವಾಬ್ದಾರಿ ನೀಡುತ್ತಿದೆ. ಈಗ ಗೂಗಲ್ ಎಕ್ಸಿಕ್ಯೂಟಿವ್ ನಿಕ್ ಫಾಕ್ಸ್ ಅವರ ಸ್ಥಾನಕ್ಕೆ ರಾಘವನ್ ಬರಲಿದ್ದಾರೆ. ಹೌದು, ರಾಘವನ್​ ಅವರು ಈಗ ಮುಖ್ಯ ತಂತ್ರಜ್ಞರ ಪಾತ್ರವನ್ನು ವಹಿಸಲಿದ್ದಾರೆ ಎಂದಿದ್ದಾರೆ.

Recent Articles

spot_img

Related Stories

Share via
Copy link
Powered by Social Snap