ಶಿರಸಿ:
ಶಿರಸಿ ನಗರಸಭೆ ಬಿಜೆಪಿ ಆಡಳಿತ ಭ್ರಷ್ಟಾಚಾರದೊಂದಿಗೆ ಶಾಮಿಲಾಗಿದೆ ಎಂದು ನಗರಸಭೆ ಸದಸ್ಯ, ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ ಆಪಾದಿಸಿದರು. ಅವರು ಇಂದು ಶಿರಸಿ ನಗರಸಭೆ ವಿಶೇಷ ಸಭೆ ಕರೆಯುವಂತೆ ಆಗ್ರಹಿಸಿ ಉಪಾಧ್ಯಕ್ಷರಿಗೆ ಮನವಿ ಪತ್ರ ನೀಡಿ ಬಳಿಕ ಸುದ್ಧಿಗಾರರೊಂದಿಗೆ ನಗರಸಭೆ ಎದುರು ಮಾತನಾಡಿದರು.
ಈಗಾಗಲೇ ನಗರಸಭೆಯಲ್ಲಿ ನಡೆಯುತ್ತಿರುವ ಪ್ರಕರಣಗಳ ಕುರಿತು ಅಧ್ಯಕ್ಷರಿಗೆ ವಿಶೇಷ ಸಭೆ ಕರೆಯುವಂತೆ ಮನವಿ ಮಾಡಿದ್ದರೂ ಅವರು ಕರೆದಿಲ್ಲ ಎಂದು ಆಪಾದಿಸಿದ ಅವರು ಈಗ ನಿಯಮಾವಳಿಯಂತೆ ಉಪಾಧ್ಯಕ್ಷರಿಗೂ ಕೂಡ ಮನವಿ ನೀಡಿದ್ದೇವೆ. ಆದರೆ ಈಗ ಉಪಾಧ್ಯಕ್ಷರೂ ಕೂಡ ಕಾನೂನಿನ ಅಭಿಪ್ರಾಯ ಪಡೆದು ಸಭೆ ಕರೆಯುವ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳುತ್ತಿದ್ದಾರೆ ಎಂದರು. ನಗರಸಭೆಯ ಕಾಂಗ್ರೆಸ್ ಸದಸ್ಯರುಗಳಾದ ದಯಾನಂದ ನಾಯಕ, ಮಧು ಬಿಲ್ಲವ,ಶ್ರೀಧರ ನಾಯ್ಕ್, ವನಿತಾ ಶೆಟ್ಟಿ ಸೇರಿದಂತೆ ಇತರರು ಇದ್ದರು.








