ರಾಜ್ಯಾದ್ಯಂತ ಸುದ್ದಿಯಾಗುತ್ತಿರುವ ಕೆ.ಎನ್.ರಾಜಣ್ಣರ ಗಟ್ಟಿದನಿಯ ಕುರಿತ ಲೇಖನ ವೈರಲ್

ಮಧುಗಿರಿ :

   ಇತ್ತೀಚಿನ ದಿನಗಳಲ್ಲಿ ರಾಜ್ಯದ ಮುಖ್ಯ ಮಂತ್ರಿ ಖುರ್ಚಿ ಖಾಲಿ ಇಲ್ಲಾವೆಂದರೂ ತಿಳಿಯದ ಕಾಂಗ್ರೆಸ್ ನಾಯಕರೊಬ್ಬರು ಆ ಮುಖ್ಯ ಮಂತ್ರಿ ಹುದ್ದೆಗೆ ಪೈ ಪೋಟಿ ನೀಡುತ್ತಿದ್ದಾರೆ.

   ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯಲಿ ಎಂದು ರಾಜ್ಯದ ಜನತೆ ಹಾಗೂ ಮಂತ್ರಿ ಮಂಡಲದ ಕೆಲ ಸಚಿವರು ಸಿದ್ದರಾಮಯ್ಯನವರ ಪರ ಬ್ಯಾಟ್ ಬೀಸುತ್ತಿದ್ದಾರೆ ಅವರಲ್ಲಿ ಒಬ್ಬರಾಗಿರುವ ಕೆ ಎನ್ ರಾಜಣ್ಣ ನವರು ನೇರ ನುಡಿಗಳ ಮಾತುಗಳು ಕೆಲವರಿಗೆ ಅರಿಗಿಸಿಕೊಳ್ಳಲಾಗುತ್ತಿಲ್ಲ ಇಂತಹ ಸಂದರ್ಭದಲ್ಲಿ ಕೆ ಎನ್ ಆರ್ ಪರವಾಗಿ ಸಮಾಜಿಕ ಜಾಲತಾಣದಲ್ಲಿ ಚಿಕ್ಕ ಸುದ್ದಿಯೊಂದು ವೈರಲ್ ಆಗುತ್ತಿದೆ.ಕೊಡದ ಕುದುರೆಗಳ ಪಳಗಿಸಿ, ಕೊಟ್ಟ ಕೊದುರೆ ಏರಿದ ಧೀರ, ಶೂರರಾದ ನಾಯಕ ರಾಜಕಾರಣಿ ಕೆ.ಎನ್.ರಾಜಣ್ಣನವರು

ಕೆ.ಎನ್.ರಾಜಣ್ಣ ಎಂಬ ಒಂದು ಬ್ರಾಂಡ್ 

   ಕೆ.ಎನ್.ರಾಜಣ್ಣ ಎಂದರೆ ರಾಜಕೀಯ ವಲಯದಲ್ಲಿ ಎಂದಿಗೂ ಅಳಿಸಲಾರದ ಒಂದು ನಿಚ್ಚಳ ಬ್ರಾಂಡ್‌. ತುಮಕೂರಿಗೆ ಮಾತ್ರ ಸೀಮಿತವಲ್ಲದ ರಾಜ್ಯದಾದ್ಯಂತ ವಿಸ್ತರಿಸಿದ ನೆಟ್ವರ್ಕ್, ಇರುವ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಕೆ.ಎನ್.ರಾಜಣ್ಣನವರು ಒಬ್ಬರು. ಸಹಕಾರ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿಯುವ ಹೆಜ್ಜೆ ಗುರುತುಗಳು ರಾಜಣ್ಣನವರದ್ದಾಗಿದೆ. ರಾಜಣ್ಣನವರು ಅಂದರೆ ಅವರ ಕ್ಷೇತ್ರ ಮತ್ತು ಜಿಲ್ಲೆಯಲ್ಲಿ ಒಂದು ನಂಬಿಕೆ. ಕೊಟ್ಟ ಮಾತನ್ನ ತಪ್ಪಲ್ಲ ಕೆಲಸ ಆಗೊಲ್ಲ ಅಂದ್ರೆ ಆಗೊಲ್ಲ ಎಂದೇ ಹೇಳುವ ಛಾತಿ ಉಳ್ಳವರು. ಎಂದಿಗೂ ಹೆದರಿದವರಲ್ಲ ಅವರ ಧೈರ್ಯ ಹಲವು ಅಸಹಾಯಕರ ಧೈರ್ಯವು ಆಗಿದ್ದು ಇತಿಹಾಸ.

ಸಹಕಾರ ಕ್ಷೇತ್ರದ ಪದ್ಮವ್ಯೂಹವನ್ನು ಭೇದಿಸಿ ಗೆದ್ದ ಧೀರ

    ಡಿಸಿಸಿ ಬ್ಯಾಂಕ್‌ ಯಾರೋದೋ ಕೆಲ ಜಾತಿ, ಕೆಲ ಬಂಡವಾಳಿಗರ ಹಿಡಿತದಲ್ಲಿದ್ದಾಗ ಅದನ್ನು ನಿಧಾನಕ್ಕೆ ದಲಿತ, ಅಲ್ಪಸಂಖ್ಯಾತ, ಹಿಂದುಳಿದವರಿಗೆ ಬಾಗಿಲು ತೆಗೆಯುವಂತೆ ಮಾಡಿದರು. ಈ ಕ್ಷೇತ್ರಕ್ಕೆ ನಾವು ಕಾಲಿಡಬಹುದು ಎಂದು ಎಲ್ಲರಿಗೂ ಆಶಾಭಾವನೆಯನ್ನು ಮೂಡಿಸಿದವರು. ಸಹಕಾರ ಕ್ಷೇತ್ರದ ಪದ್ಮವ್ಯೂಹವನ್ನು ಭೇದಿಸಿ ಗೆದ್ದು ಆಳಿದವರು. ಈ ಗೆಲುವು ಸೋಲುಂಡ , ಶೋಷಿತ ಸಮುದಾಗಳ ಪಾಲಿಗೆ ಸ್ಪೂರ್ತಿ ಆಗಿದೆ . ಈ ಸಹಕಾರ ಕುದುರೆಯನ್ನು ಯಾರು ಅವರಿಗೆ ಎಲೆ ಅಡಿಕೆಯಲ್ಲಿ ಇಟ್ಟು ಕೊಟ್ಟಿಲ್ಲ ಬಹಳ ಚಿಕ್ಕ ವಯಸ್ಸಿಗೆ ಸಂಘಟಕರಾಗಿ, ಕಟ್ಟುವ ಕೆಲಸದಲ್ಲಿ ಪಳಗಿ ಶ್ರಮವಹಿಸಿ ಮೇಲೆ ಬಂದು ತನ್ನದೆ ಆದ ಸಾಮ್ರಾಜ್ಯವನ್ನು ಕಟ್ಟಿದವರು.

ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದು ಸಂವಿಧಾನ ಗೆಲ್ಲಿಸಿದವರು

    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕ್ಷೇತ್ರಗಳಿಗೆ ಮೀಸಲಿರುವ ಕ್ಷೇತ್ರಗಳಲ್ಲಿ ಆ ಸಮುದಾಯದಲ್ಲಿ ನಿಂತು ಉಳ್ಳವರ ಅಣತಿಯಂತೆ ನಡೆದುಕೊಳ್ಳಬೇಕಾಗುತ್ತದೆ. ಆದರೆ ಕೆ.ಎನ್.ರಾಜಣ್ಣ ಇಂತಹ ಎಲ್ಲಾ ಕ್ಷುಲ್ಲಕ ವಿಚಾರಕ್ಕೆ ಸವಾಲಾಗಿ ಸಾಮಾನ್ಯ ಕ್ಷೇತ್ರದಲ್ಲಿ ನಿಂತು ಗೆದ್ದು ಸಂವಿಧಾನ ಆಶಯವೇನು ಎಂಬುದನ್ನು ಕ್ರಿಯೆಯಲ್ಲಿ ತೋರಿಸಿದ್ದಾರೆ. ಈ ಗೆಲುವು ತಳಸಮುದಾಯಗಳಿಗರ ಧೈರ್ಯ ಬಲಿಷ್ಟ ಸಮುದಾಯಗಳ ಬಗೆಗಿನ ಪೂರ್ವಗ್ರಹ ಎರಡನ್ನು ಕಳಚುವಂತೆ ಮಾಡಿತು.

    ಇದೇ ರೀತಿ ರಾಜಕಾರಣಿಯ ನಾಯಕತ್ವ ಗುಣ ಹಲವರನ್ನು ಬೆಳಿಸಿದೆ. ಇವರಿಂದ ಗೆದ್ದವರೆ ಇವರಿಗೆ ಮುಳ್ಳಾದರೂ ಸಹ ಅವರನ್ನು ಇಗ್ನೋರ್ ಮಾಡಿ ಹೊಸ ನಾಯಕತ್ವವನ್ನು ಸೃಷ್ಟಿಸಿದ್ದಾರೆ. ರಾಜಕೀಯ ಎಂಬ ಎಳುಬೀಳಿನ ದುರ್ಗಮ ಕೋಟೆಯಲ್ಲಿ ಅವರು ಗೆಲ್ಲುವುದೇ ಕಷ್ಟ ಇರುವಾಗ ಹಲವರನ್ನು ಗೆಲ್ಲಿಸುವ /ಸೋಲಿಸುವ ಮೂಲಕ ಪಾಠಗಳನ್ನು ಕಲಿಸಿದ್ದಾರೆ.

     ಇಂತಹ ಸಂಘಟನಾ ಶಕ್ತಿ ಇರುವ ರಾಜಣ್ಣನವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳುವುದಾಗಲಿ ,ಉಪಮುಖ್ಯಮಂತ್ರಿ ಹುದ್ದೆ ಕೇಳುವುದಾಗಲಿ ಎಳ್ಳಷ್ಟು ತಪ್ಪಿಲ್ಲ. ದುಡ್ಡಿರುವವರು ಮಾತ್ರ ಸಂಘಟಕರು ದುಡ್ಡಿಲ್ಲದೇ ಇರುವವರು ಸಂಘಟಕರಲ್ಲ ಎನ್ನುವಂತ ಆಲೋಚನೆ ಸ್ವತಃ ರಾಹುಲ್ ಗಾಂಧಿಯವರು ಹೇಳುತ್ತಿರುವ ದಮನಿತರು ಅಧಿಕಾರಕ್ಕೆ ಬರಬೇಕು ಎಂಬ ತತ್ವಕ್ಕೆ ವಿರುದ್ದ. ಕುದುರೆ ಕೊಟ್ಟು ನೋಡಿ ಕೊಟ್ಟ ಕುದುರೆಯ ಏರಿ ರಾಜಗಾಂಭೀರ್ಯದಲ್ಲಿ ಪಕ್ಷವನ್ನ ಕಟ್ಟುತ್ತಾರೆ ನಿಜವಾದ ಕಾಂಗ್ರೆಸ್ ಪುಟಿದೇಳುವಂತೆ ಮಾಡುತ್ತಾರೆ. ಅವರಿಗೆ ಸಿಕ್ಕ ಸಣ್ಣ ಅವಕಾಶಗಳನ್ನು ಧೀರರಂತೆ ಗೆದ್ದೆ ತೋರಿಸಿದ್ದಾರೆ.

  ಈ ಸರ್ಕಾರದ ರಚನೆಯಾಗಲು ತಿರುವು ನೀಡಿದ ರಾಜಕೀಯ ಸಂಚಲನ ಸಿದ್ದಾರಾಮೋತ್ಸವದ ಸಂಘಟನೆ ಅಧ್ಯಕ್ಷ್ಯತೆ ಎಂಬುದನ್ನು ಮರೆಯಬಾರದು, ಜಿದ್ದಜಿದ್ದಿ ಹಾಸನ ಕ್ಷೇತ್ರದಲ್ಲಿ ಸಂಸದರನ್ನು ಗೆಲ್ಲಿಸಿದ್ದು ಕೆ.ಎನ್ .ರಾಜಣ್ಣನವರ ಉಸ್ತುವಾರಿಯಲ್ಲಿ ಎಂಬುದನ್ನು ಮರೆಯಬಾರದು. ಇನ್ನೂ ರಾಜಣ್ಣನವರ ಸಾಧನೆಯೇನು ಎಂದು ಚೆಕ್ ಮಾಡಲೇಬೇಕೆಂದು ಕೊಂಡರೆ ಬೆಳಿಗ್ಗೆ ಬೆಳಿಗ್ಗೆ ಅವರ ಮನೆಯ ಹತ್ತಿರ ಬನ್ನಿ ಜನರ ಸಮಸ್ಯೆಗಳನ್ನು ಆಲಿಸುತ್ತಿರುತ್ತಾರೆ. ಇಲ್ಲ ಸಂಘಟನೆಯ ಹಾದಿಯಲ್ಲಿಯೇ ಕ್ರೀಯಾಶೀಲರಾಗಿರುತ್ತಾರೆ. ಹಾಗಾಗಿ ಸಮರ್ಥ ನಾಯಕತ್ವದ ಕೆ.ಎನ್.ರಾಜಣ್ಣರ ರಾಜಕೀಯ ಇತಿಹಾಸ ದೊಡ್ಡದಿದೆ.ಕೆಲವರದು ಸೋಶಿಯಲ್ ಮೀಡಿಯಾ ನೆಟ್ವರ್ಕ್ ದೊಡ್ಡದಿರಬಹುದು ಅಷ್ಟೇ.

Recent Articles

spot_img

Related Stories

Share via
Copy link