ಗುಬ್ಬಿ:
ಗುಬ್ಬಿ ತಾಲೂಕಿನ ಕಸಬಾ ಹೋಬಳಿ ಸಿಂಗೋ ನಹಳ್ಳಿ ಗ್ರಾಮದ ಬಳಿ ರಾಮಚಂದ್ರ ಎಂಬ ರೈತ ಸತತ ಮೂವತ್ತು ವರ್ಷಗಳಿಂದ ಹೊಸ ಹೊಸ ಬೆಳೆಗಳನ್ನು ಸರ್ವೇ ನಂಬರ್ 53 ರ 2.33 ಕುಂಟೆ ಜಮೀನಿನಲ್ಲಿ ಹಣ್ಣು ತರಕಾರಿ ಹಾಗೂ ಹೂ ಗಳನ್ನು ಬೆಳೆಯುತ್ತಾ ಬಂದಿದ್ದು ಈ ವರ್ಷ ಸುಮಾರು 2400 ಗಿಡ ಚಂಡುಹೂ ಗಿಡಗಳನ್ನು ನೆಟ್ಟು ಪೋಷಿಸಿ ಚನ್ನಾದ ಬೆಳೆ ಬೆಳೆದ ಸಂದರ್ಭದಲ್ಲಿ ಬೆಲೆ ಇಲ್ಲದೆ ತತ್ತರಿಸಿಹೋಗಿದ್ದಾರೆ,
ಅವರಿಗೆ ಆಗಿರುವ ಖರ್ಚನ್ನು ಗಳಿಸದೇ ಇರುವ ಸಂದರ್ಭದಲ್ಲಿ ಹೂ ಗಳನ್ನು ಕೀಳದೆ ಗಿಡದಲ್ಲೇ ಬಿಟ್ಟಿದ್ದಾರೆ, ಇಷ್ಟೊಂದು ಚನ್ನಾಗಿ ಪೋಷಿಸಿ ಬೆಳೆದಿರುವ ಹೂವಿಗೆ ಬೆಲೆ ಸಿಗದಿದ್ದಾಗ ಏನು ಮಾಡಬೇಕು ಎಂದು ತೋಚದೆ ಹೂ ಒಣಗಲು ಬಿಟ್ಟಿದ್ದಾರೆ ರೈತರ ಇಂತಹ ಶೋಚನೀಯ ಸ್ಥಿತಿಯಲ್ಲಿ ತೋಟಗಾರಿಕೆ ಇಲಾಖೆಯವರು ನೆರವಿಗೆ ಬಂದು ಪ್ರೋತ್ಸಾಹಿಸಬೇಕೆಂಬುದೇ ಎಲ್ಲರ ಆಶಯ,
