ನಿಮ್ಮ ವೈಫಲ್ಯಕ್ಕೆ ರಾಜಿನಾಮೆ ಒಂದೇ ಉತ್ತರ… : ಪ್ರಹ್ಲಾದ್‌ ಜೋಶಿ

ಬೆಂಗಳೂರು:

    ಕೆಪಿಎಸ್‌ಸಿ ಇಂದು ಭಾರತಕ್ಕೆ ಕಪ್ಪು ಚುಕ್ಕೆಯಾಗಿರುವುದು ಅತ್ಯಂತ ದುರಾದೃಷ್ಟಕರ ಹಾಗೂ ಸರ್ಕಾರದ ಅತಿದೊಡ್ಡ ವೈಫಲ್ಯಗಳಲ್ಲಿ ಒಂದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ರಾಜ್ಯದಲ್ಲಿ ‌ತುಘಲಕ್‌ ಸರ್ಕಾರ ನಡೆಯುತ್ತಿದೆಯೇ? ತಡರಾತ್ರಿ‌ ದೂರದ ಊರಿನಿಂದ‌ ಮಹಿಳೆಯರು ಹೇಗೆ ಬೆಂಗಳೂರಿಗೆ ಬರಲು ಸಾಧ್ಯ? ಕನ್ನಡ ಭಾಷಿಗರ ರಕ್ಷಣೆ, ಅವರ ಕನಸು ನುಚ್ಚುನೂರು ಮಾಡುತ್ತಿರುವ ನಿಮ್ಮ ಸರ್ಕಾರ ಪ್ರತಿಭಟನೆಗಳ‌‌ ಹೆಸರಲ್ಲಿ ಕಾಲಾಹರಣ ಮಾಡುತ್ತಾ ದುರಾಡಳಿತ ನಡೆಸುತ್ತಿದ್ದೀರಾ.

    ಇಂದು ಕೆ ಎ ಎಸ್ ಮುಖ್ಯ ಪರೀಕ್ಷೆ ಆರಂಭ, ನಿನ್ನೆ ಮಧ್ಯರಾತ್ರಿಯವರೆಗೂ ಕೆಪಿಎಸ್‌ಸಿಯ ಮುಂದೆ ಅಭ್ಯರ್ಥಿಗಳು ನಿಲ್ಲುವ ಸ್ಥಿತಿ. ಕೆಪಿಎಸ್‌ಸಿ ಇಂದು ಭಾರತಕ್ಕೆ ಕಪ್ಪು ಚುಕ್ಕೆಯಾಗಿರುವುದು ಅತ್ಯಂತ ದುರಾದೃಷ್ಟಕರ ಹಾಗೂ ಸರ್ಕಾರದ ಅತಿದೊಡ್ಡ ವೈಫಲ್ಯಗಳಲ್ಲಿ ಒಂದು. ಅಭ್ಯರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ನಿಮ್ಮ ದುರಾಡಳಿತದ ಸರ್ಕಾರದಿಂದ ಜನ ಬೇಸತ್ತಿದ್ದಾರ. ಕೆಪಿಎಸ್‌ಸಿ ಸಾಲು ಸಾಲು ತಪ್ಪುಗಳು ಮಾಡುತ್ತಿದೆ, ಎಷ್ಟು ಬಾರಿ ಕ್ಷಮೆ ಕೋರುತ್ತಿರಾ? ಈ ವೈಫಲ್ಯಕ್ಕೆ ನಿಮ್ಮ ರಾಜಿನಾಮೆ ಒಂದೇ ಉತ್ತರ, ಕರ್ನಾಟಕ ಲೋಕಸೇವಾ ಆಯೋಗ- ಇಂದು ಇಡೀ ದೇಶಕ್ಕೆ ಒಂದು ಕೆಟ್ಟ ಸಂದೇಶ ರವಾನಿಸಿದೆ.

    ಒಂದು ಲೋಕಸೇವಾ ಆಯೋಗ ಹೇಗೆ ಮಾದರಿಯಾಗಿ ಇರಬಾರದು ಅನ್ನೊದನ್ನು ಇಡೀ ದೇಶಕ್ಕೆ ತೋರಿಸಿದೆ. ಪರೀಕ್ಷೆ ಆರಂಭಕ್ಕೂ‌ ಮೊದಲಿನಿಂದಲೂ ಗೊಂದಲ, ತಪ್ಪುಗಳು. ಪರೀಕ್ಷೆಯಲ್ಲಿ ಸಾಲು ಸಾಲು ತಪ್ಪು, ಎಡವಟ್ಟುಗಳು. ತಪ್ಪು ತಪ್ಪಾಗಿ ಕನ್ನಡದಲ್ಲಿ ಪ್ರಶ್ನೆಗಳ ಪ್ರಕಟ. ಎರಡೆರಡು ಬಾರಿ ಪರೀಕ್ಷೆ, ಅದರಲ್ಲಿಯೂ ಸಾಲು ಸಾಲು ತಪ್ಪುಗಳು. ದುರಾಡಳಿತ ಅನ್ನೊದು ಕೆಪಿಎಸ್‌ಸಿ ಮತ್ತು ನಿಮ್ಮ‌ ಕಾಂಗ್ರೆಸ್ ಸರ್ಕಾರ ಇಡೀ ದೇಶಕ್ಕೆ ತೋರಿಸುತ್ತಿದೆ.

   ಸಿದ್ದರಾಮಯ್ಯನವರೇ, ಕಳೆದ ಸದನದಲ್ಲಿ ಕೆಪಿಎಸ್‌ಸಿ ವಿಚಾರವಾಗಿ “ಸರ್ವಪಕ್ಷ ಸಭೆ ಕರೆಯುತ್ತೇನೆ.. ಎಲ್ಲರಿಂದ ಅಭಿಪ್ರಾಯ ಪಡೆಯುತ್ತೇನೆ.. ಕನ್ನಡಿಗರಿಗೆ ಅನ್ಯಾಯ ಆಗಲು ಬಿಡುವುದಿಲ್ಲಾ..” ಹೀಗೆ ಸುಳ್ಳು ಹೇಳಿ ರಾತ್ರೋರಾತ್ರಿ ದುರಾಡಳಿತದ ಈ ಪರೀಕ್ಷೆ ನಡೆಸಲು ಮುಂದಾಗುತ್ತೀರುವ ನಿಮಗೆ ನಾಚಿಕೆ ಮಾನ ಮರ್ಯಾದೆ ಇಲ್ಲವೇ? ತಡರಾತ್ರಿ‌ ದೂರದ ಊರಿನಿಂದ‌ ಮಹಿಳೆಯರು ಹೇಗೆ ಬೆಂಗಳೂರಿಗೆ ಬರಲು ಸಾಧ್ಯ? ಕೆಪಿಎಸ್ ಸಿ ಕರ್ನಾಟಕದ ಪಾಲಿಗೆ ಶಾಪದ ಸಂಸ್ಥೆಯಾಗಿದೆ. ಕೆಪಿಎಸ್ ಸಿ ದೇಶಕ್ಕೆ ಕಪ್ಪು ಚುಕ್ಕೆಯಾಗಿರುವುದು ಅತ್ಯಂತ ದುರಾದೃಷ್ಟಕರ ಹಾಗೂ ಸರ್ಕಾರದ ಅತಿದೊಡ್ಡ ವೈಫಲ್ಯಗಳಲ್ಲಿ ಒಂದು. ನಿಮ್ಮ ದುರಾಡಳಿತದ ಸರ್ಕಾರ ಅಭ್ಯರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ.. ನಿಮಗೆ ಸರ್ಕಾರದ ದುರಾಡಳಿತ ರಾಜ್ಯಕ್ಕೆ ಬೇಡವಾಗಿದೆ. ನಿಮ್ಮ ರಾಜಿನಾಮೆ ಮಾತ್ರ ನ್ಯಾಯ ಒದಗಿಸುತ್ತದೆ ಎಂದಿದ್ದಾರೆ.

Recent Articles

spot_img

Related Stories

Share via
Copy link