ಕ್ರೆಡಿಟ್ ಕಾರ್ಡ್ ಎಂದರೇನು ಎಂದು ಟೆಕ್ಕಿಗಳು ಮತ್ತು ಶ್ರೀಮಂತರನ್ನು ಕೇಳಿದರೆ ಅದು ಒಂದು ಸ್ಟೇಟಸ್ ಸಿಂಬಲ್ ಎನ್ನುತ್ತಾರೆ ಮತ್ತು ಅವರಿಗೆ ಇಷ್ಟವಾದುದನ್ನು ತಕ್ಷಣ ಖರೀದಿಸಿ ನಂತರ ಸುಲಭ ಕಂತುಗಳಲ್ಲಿ ಪಾತಿಸಲು ಇರುವ ಒಂದು ಸಾಧನ ಎಂದರೂ ತಪ್ಪಿಲ್ಲ ಎನ್ನುತ್ತಾರೆ , ಇನ್ನು ಮಧ್ಯಮ ವರ್ಗದವರೂ ಸಹ ಕೆಲವರಿಗೆ ಇದರ ಅರಿವಿದ್ದರೂ ಸಾಲದ ವಿಚಾರವೇ ಬೇಡ ಎಂದು ಸುಮ್ಮನಾಗುವ ಜನರೇ ಹೆಚ್ಚಾಗಿರುತ್ತಾರೆ ಅಷ್ಟಕ್ಕೂ ಈ ಕ್ರೆಡಿಟ್ ಕಾರ್ಡ್ ಅಂದರೆ ಏನು ಅದರ ಕಾರ್ಯಾಚರಣೆ ಹೇಗೆ ಎಂದು ನೋಡಿದರೆ ಕ್ರೆಡಿಟ್ ಕಾರ್ಡ್ ಎಂದರೆ ಆಡು ಭಾಷೆಯಲ್ಲಿ ಸಾಲದ ಕಾರ್ಡು ಎಂದರ್ಥ ಬಂದರೂ ಅದು ಅನುಕೂಲ ಸಿಂಧುವು ಹೌದು .ಇನ್ನು ಇದರ ತತ್ವ ಏನೆಂದು ನೋಡಿದರೆ ಮೊದಲು ಕಾರ್ಡ್ ಬಳಸಿ ಖರೀದಿಸಿ ನಂತರ ಪಾವತಿಸಿ ಎನ್ನುವುದರ ಮೇಲೆ ಕಾರ್ಯನಿರ್ವಹಿಸುತ್ತವೆ.
ತ್ವರಿತ ಸಾಲವನ್ನು ನೀಡುವುದರ ಹೊರತಾಗಿ, ನಿಯಮಿತವಾಗಿ ವಹಿವಾಟು ನಡೆದರೆ ನೀವು ತೆಗೆದುಕೊಳ್ಳುವ ಸಾಲದಲ್ಲೂ ಗಳಿಕೆ ಮಾಡಬಹುದು ಅದು ಹೇಗೆಂದರೆ ರಿವಾರ್ಡ್ ಪಾಯಿಂಟ್‌ಗಳು, ರಿಯಾಯಿತಿಗಳು ಮತ್ತು ಕ್ಯಾಶ್‌ಬ್ಯಾಕ್‌ಗಳಂತಹ ಇತರ ಪ್ರಯೋಜನಗಳನ್ನೂ ಸಹ ನೀಡುತ್ತಾರೆ. ಕ್ರೆಡಿಟ್ ಕಾರ್ಡ್‌ಗಳನ್ನು ನಿಯಮಿತ ಮತ್ತು ಶಿಸ್ತುಬದ್ಧವಾಗಿ ಬಳಕೆ ಮಾಡುವುದು ಉತ್ತಮ, ನೀವು ಹೊಸ ವರ್ಷಕ್ಕೆ ಕಾಲಿಡುತ್ತಿರುವಾಗ, ಕ್ರೆಡಿಟ್ ಕಾರ್ಡ್ ಬಳಸುವಾಗ ಆಗುವ ಈ ಸಾಮಾನ್ಯ ತಪ್ಪುಗಳಿಂದ ಎಚ್ಚರವಹಿಸಿ:
1.ಎಟಿಎಂಗಳಿಂದ ಹಣವನ್ನು ವಿತ್ ಡ್ರಾ ಮಾಡಲು ಕ್ರೆಡಿಟ್ ಕಾರ್ಡ್ ಬಳಸುವುದು.
ನೀವು ಕ್ರೆಡಿಟ್ ಕಾರ್ಡ್ ಮೂಲಕ ಹಣವನ್ನು ಎಟಿಎಂಗಿಂದ ಹಣ ವಿತ್ ಡ್ರಾ ಮಾಡುವಾಗ ಗಮನಿಸಿ ನೀವು ತೆಗೆದು ಕೊಳ್ಳುವ ಮೊತ್ತವನ್ನು ಕಂಪನಿಯವರು ಮುಂಗಡ ಹಣವೆಂದು ಭಾವಿಸಿ 3.5% ವರೆಗಿನ ನಗದು ಮುಂಗಡ ಶುಲ್ಕವನ್ನು ವಿಧಿಸುತ್ತಾರೆ ಮತ್ತು ನೀವು ಹಣ ತೆಗೆದುಕೊಂಡ ದಿನದಿಂದ ಮುಂದಿನ ಪಾವತಿ ದಿನದವರೆಗೂ ಶುಲ್ಕವನ್ನು ವಿಧಿಸುತ್ತಾರೆ. ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲಿನ ಶುಲ್ಕಗಳು 49.36% P.A. ನಷ್ಟು ಮುಟ್ಟಬಹುದು ಅದು ನಿಮ್ಮ ಕಾರ್ಡ್ ಯಾವುದು ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ, ಹಾಗಾಗಿ ಕ್ರೆಡಿಟ್ ಕಾರ್ಡ್ ಮೂಲಕ ವಿತ್ ಡ್ರಾ ಮಾಡುವಾಗ ಎಚ್ಚರ ವಹಿಸಿ ಮತ್ತು ಅನಿವಾರ್ಯವಾದಾಗ ಮಾತ್ರ ಈ ಆಯ್ಕೆಯನ್ನು ಬಳಸಿ.
2. ಕನಿಷ್ಠ ಮೊತ್ತವನ್ನು ಪುನರಾವರ್ತಿತವಾಗಿ ಮರುಪಾವತಿಸುವುದು
ಕ್ರೆಡಿಟ್ ಕಾರ್ಡ್ ಹೊಂದಿರುವವರು ಮಾಡುವ ಮೊದಲ ತಪ್ಪು ಎಂದರೆ ತಮಗೆ ಬಂದಿರುವ ಬಿಲ್ ಮೊತ್ತವನ್ನು ಸಮಯಕ್ಕೆ ಮರುಪಾವತಿಸಲು ಸಾಧ್ಯವಾಗದೆ ಕನಿಷ್ಠ ಬಾಕಿ ಮೊತ್ತವನ್ನು ಮರುಪಾವತಿಸುತ್ತಾರೆ. ಕನಿಷ್ಠ ಮೊತ್ತವನ್ನು ಪಾವತಿಸುವುದರಿಂದ ಹಣಕಾಸು ಶುಲ್ಕವನ್ನು ತಪ್ಪಿಸಿಕೊಳ್ಳಬಹುದು ಎಂಬ ಹುಸಿ ನಂಬಿಕೆ ಇದೆ.
ಆದರೆ ಇರುವ ವಾಸ್ತವ ಇದಕ್ಕೆ ತದ್ವಿರುದ್ಧವಾಗಿದೆ, ಕನಿಷ್ಠ ಬಾಕಿ ಮೊತ್ತವನ್ನು ಪಾವತಿಸುವುದರಿಂದ ನೀವು ಲೇಟ್ ಫೀಯಿಂದ ಮಾತ್ರ ತಪ್ಪಿಸಿಕೊಳ್ಳುತ್ತೀರಿ.ಆದರೆ ಒಂದನ್ನು ಮರೆತಿದ್ದೀರಿ ನಿಮ್ಮ ಬಾಕಿ ಉಳಿದಿರುವ ಕ್ರೆಡಿಟ್ ಕಾರ್ಡ್ ಬಿಲ್ ಮೊತ್ತಕ್ಕೆ ಬಡ್ಡಿ ಬೆಳೆಯುತ್ತಲೇ ಹೋಗುತ್ತದೆ. ಇನ್ನು ಕೆಲವರು ನಂಬುವ ಪ್ರಕಾರ ಕನಿಷ್ಠ ಮೊತ್ತವನ್ನು ಪಾವತಿಸಿದರೆ ಎಲ್ಲಾ ಮುಗಿಯಿತು ಎನ್ನುತ್ತಾರೆ ಆದರೆ ಅವರಿಗೆ ಗೊತ್ತಿಲ್ಲದೆ ಒಂದು ದೊಡ್ಡ ಸಾಲದ ಸುಳಿಯಲ್ಲಿ ಸಿಲುಕುತ್ತೀರಿ ಎಚ್ಚರ.
ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪೂರ್ಣವಾಗಿ ಮತ್ತು ಸಮಯಕ್ಕೆ ಮರುಪಾವತಿಸಲು ಪ್ರಯತ್ನಿಸಿ. ಒಂದು ವೇಳೆ ನೀವು ಹಾಗೆ ಮಾಡುವಲ್ಲಿ ತೊಂದರೆಗಳನ್ನು ಎದುರಿಸಿದರೆ, ಬಾಕಿ ಇರುವ ಮೊತ್ತವನ್ನು ಇಎಂಐಗಳಾಗಿ ಪರಿವರ್ತಿಸಿ. ಬಾಕಿ ಇರುವ ಮೊತ್ತವನ್ನು ಬೇರೊಂದು ಕಡಿಮೆ ಬಡ್ಡಿದರದ ಕ್ರೆಡಿಟ್ ಕಾರ್ಡ್ ಗೆ ವರ್ಗಾಯಿಸಿಕೊಳ್ಳಿ ಅಥವಾ ಕಡಿಮೆ ಬಡ್ಡಿದರಗಳಲ್ಲಿ ಸಾಲ ಬಲವರ್ಧನೆಯನ್ನು ಚಲಾಯಿಸಲು ವೈಯಕ್ತಿಕ ಸಾಲವನ್ನು ಪಡೆಯಬಹುದು.
3. ಕ್ರೆಡಿಟ್ ಬಳಕೆಯ ಅನುಪಾತವನ್ನು 30% ಕ್ಕಿಂತ ಹೆಚ್ಚು ನಿರ್ವಹಿಸುವುದು
ಕ್ರೆಡಿಟ್ ಕಾರ್ಡ್ ನೀಡುವವರು ಕ್ರೆಡಿಟ್ ಬಳಕೆಯ ಅನುಪಾತಗಳನ್ನು 30% ಕ್ಕಿಂತ ಹೆಚ್ಚು ಸಾಲ ಬಳಕೆಯನ್ನು ಸಂಕೇತವೆಂದು ಪರಿಗಣಿಸುವುದರಿಂದ, ಕ್ರೆಡಿಟ್ ಬ್ಯೂರೋಗಳು ಈ ಹಂತವನ್ನು ಉಲ್ಲಂಘಿಸುವಾಗ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಕೆಲವು ಅಂಕಗಳಿಂದ ಕಡಿಮೆಗೊಳಿಸುತ್ತವೆ. ಆದ್ದರಿಂದ, ನಿಮ್ಮ ಕ್ರೆಡಿಟ್ ಕಾರ್ಡ್ ನ ಕ್ರೆಡಿಟ್ ಮಿತಿಯ 30% ಒಳಗೆ ಖರ್ಚು ಮಾಡುವುದನ್ನು ರೂಢಿಸಿಕೊಳ್ಳಿ ಅಥವಾ ನೀವು ಆಗಾಗ್ಗೆ ಈ ರೇಖೆಯನ್ನು ಉಲ್ಲಂಘಿಸುವ ಪ್ರವೃತ್ತಿಯನ್ನು ಹೊಂದಿದ್ದರೆ, ನಿಮ್ಮ ಕ್ರೆಡಿಟ್ ಮಿತಿಯನ್ನು ಹೆಚ್ಚಿಸಲು ನಿಮ್ಮ ಕ್ರೆಡಿಟ್ ಕಾರ್ಡ್ ಕಂಪನಿಗೆ ವಿನಂತಿಸಿ ಅಥವಾ ಇನ್ನೊಂದು ಕ್ರೆಡಿಟ್ ಕಾರ್ಡ್ ತೆಗೆದುಕೊಂಡು ನಿಮ್ಮ ಪಾವತಿಗಳನ್ನು ಹಂಚುವ ಮೂಲಕ ಈ ಮಿತಿಯಲ್ಲೇ ಇರಬಹುದು ಮತ್ತು ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಬದಲಾವಣೆ ತಪ್ಪಿಸಬಹುದು.
4. ಬಡ್ಡಿ ರಹಿತ ದಿನಗಳಲ್ಲಿ ಕಾರ್ಡ್ ಬಳಸಿ.
ಬಡ್ಡಿರಹಿತ ಅವಧಿ ಎಂದರೆ ಇದು ನಿಮ್ಮ ಕ್ರೆಡಿಟ್ ಕಾರ್ಡ್ ಕಂಪನಿ ನೀವು ಮಾಡುವ ಖರೀದಿಗಳಿಗೆ ಈ ಅವಧಿಯಲ್ಲಿ ಯಾವುದೇ ಬಡ್ಡಿಯನ್ನು ವಿಧಿಸುವುದಿಲಾ ಸಾಮಾನ್ಯವಾಗಿ ಈ ಅವಧಿಯೂ ವಹಿವಾಟಿನ ದಿನಾಂಕದಿಂದ ಅದರ ಪಾವತಿಯ ದಿನಾಂಕದ ನಡುವಿನ ಅವಧಿಯನ್ನು ಸೂಚಿಸುತ್ತದೆ.ನೀವು ಕಾರ್ಡ್ ಬಳಿಸಿ ಖರ್ಚು ಮಾಡಲು ಬಯಸಿದರೆ ಈ ಅವಧಿಯಲ್ಲಿ ಬಳಸಿ , ವಿಶೇಷವಾಗಿ ದೊಡ್ಡ ಖರ್ಚುಗಳನ್ನು ಇನ್ನು ಈ ಅವಧಿಯಲ್ಲಿ ಮಾಡಿದ ಖರೀಧಿ ನಿಮಗೆ ಗರಿಷ್ಠ ಬಡ್ಡಿರಹಿತ ಅವಧಿಯನ್ನು ನೀಡುತ್ತದೆ.
5. ನಿಮ್ಮ ರಿವಾರ್ಡ್ ಪಾಯಿಂಟ್ಸ್ ಬಗ್ಗೆ ಇರಲಿ ಎಚ್ಚರ
ಹೆಚ್ಚಿನ ಕ್ರೆಡಿಟ್ ಕಾರ್ಡ್ ಕಂಪನಿ ತಮ್ಮ ಗ್ರಾಹಕರ ರಿವಾರ್ಡ್ ಪಾಯಿಂಟ್‌ಗಳಿಗೆ ಎಕ್ಸ್ಪೈರಿ ದಿನಾಂಕವನ್ನು ನಿಗದಿಪಡಿಸುತ್ತಾರೆ. ಈ ಅವಧಿಯು ಸಾಮಾನ್ಯವಾಗಿ 2-3 ವರ್ಷಗಳ ನಡುವೆ ಇರುತ್ತದೆ ಮತ್ತು ನಂತರ ಅವುಗಳನ್ನು ಪುನಃ ಪಡೆದುಕೊಳ್ಳಲಾಗುವುದಿಲ್ಲ. ಆದ್ದರಿಂದ, ನಿಮ್ಮ ಕಾರ್ಡ್‌ನ ರಿವಾರ್ಡ್ ಪಾಯಿಂಟ್‌ಗಳ ನಿಯಮಗಳು ಮತ್ತು ಷರತ್ತುಗಳನ್ನು ನಿಯಮಿತವಾಗಿ ಅನುಸರಿಸುವ ಮೂಲಕ ನಿಮ್ಮ ರಿವಾರ್ಡ್ ಪಾಯಿಂಟ್ಸ್ ಗಳ ಪ್ರಯೋಜನಗಳ ಮುಕ್ತಾಯ ದಿನಾಂಕಗಳ ಬಗ್ಗೆ ಗಮನವಿಡಿ.ಇನ್ನು ಕೆಲವರು ತಮ್ಮ ಬಳಿಯಲ್ಲಿ ಅಷ್ಟು ರಿವಾರ್ಡ್ ಪಾಯಿಂಟ್ಸ್ ಇದೆ ಆದರೆ ಅದರ ಉಪಯೋಗ ಹೇಗೆ ಎಂಬುದು ನನಗೆ ಗೊತ್ತಿಲ್ಲ ಎಂದು ಗೊಣಗಾಡುತ್ತಾರೆ. ಅಂತಹವರು ತಮ್ಮ ಬಳಿ ಇರುವ ಪಾಯಿಂಟ್ಸ್ ಗಳನ್ನು ಗಿಫ್ಟ್ ವೋಚರ್ ಅಥವಾ ಮರ್ಚಂಡೈಸ್ ಅಥವಾ ಕೆಲವೊಂದು ದೇಶಗಳಲ್ಲಿ ವಿಮಾನ ಪ್ರಯಾಣಕ್ಕೂ ಬಳಸಬಹುದಾಗಿದೆ ಆದ್ದರಿಂದ ನಿಮಗೆ ಕಂಪನಿ ನೀಡುವ ರಿವಾರ್ಡ್ ಪಾಯಿಂಟ್ಸ್ ಗಳ ಮೇಲೆ ನಿಗಾವಹಿಸುವುದು ಅಗತ್ಯ.