ಮರುಸಿದ್ದಗೊಂಡ ತುಮಕೂರು ವಿವಿ ಪಾರ್ಕ್

ತುಮಕೂರು
    ತುಮಕೂರು ನಗರದ ವಿವಿ ಆವರಣದೊಳಗಿನ ಹೆಲಿಪ್ಯಾಡ್ ಏರಿಯಾವನ್ನು ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿ ಕಾರ್ಯ ಕೈಗೊಂಡು ಒಂದು ವರ್ಷದೊಳಗೆ ಹಾಳಾಗಿತ್ತು. ಈ ಬಗ್ಗೆ ವರದಿ ಪ್ರಕಟಣ ಮಾಡಿದ್ದರ ಪರಿಣಾಮ ಮರು ಸಿದ್ದಗೊಂದು ಸಾರ್ವಜನಿಕರಿಗೆ ಓಡಾಡಲು ಅನುಕೂಲವಾಗಿದೆ.
    ನವೆಂಬರ್ ತಿಂಗಳ ಕೊನೆಯಲ್ಲಿ “ಮತ್ತೂ ಅದ್ವಾನಗೊಂಡ ವಿವಿ ಉದ್ಯಾನವನ’’ ಎಂಬ ತಲೆ ಬರಹದಡಿ ವಿಶೇಷ ವರದಿಯನ್ನು ಪ್ರಕಟ ಮಾಡಲಾಗಿತ್ತು. ಈ ಮುಂಚೆಯೂ ಒಮ್ಮೆ ವಿವಿ ಉದ್ಯಾನವನದ ಅದ್ವಾನದ ಬಗ್ಗೆ ವರದಿ ಮಾಡಲಾಗಿತ್ತು. ಆ ಸಮಯದಲ್ಲಿಯೆ ಸ್ಮಾರ್ಟ್ ಸಿಟಿ ಎಂಡಿಯವರು ಗುತ್ತಿಗೆದಾರನಿಗೆ ನೋಟೀಸ್ ನೀಡಲಾಗುವುದು ಎಂದು ಹೇಳಿದ್ದರು. ನಂತರ ಇನ್ನಷ್ಟು ಅದ್ವಾನ ಗೊಂಡರೂ ಯಾರೂ ಗಮನ ಹರಿಸದೆ ಇದ್ದು, ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿತ್ತು. ಈ ನಡುವೆ ಮತ್ತೊಮ್ಮೆ ಪತ್ರಿಕೆಯಲ್ಲಿ ವರದಿ ಪ್ರಕಟಗೊಳ್ಳುತ್ತಿದ್ದಂತೆಯೆ ಸ್ಮಾರ್ಟ್ ಸಿಟಿಯ ಅಧಿಕಾರಿಗಳು ಸಂಬಂಧಿಸಿದ ಗುತ್ತಿಗೆದಾರರಿಗೆ ನೋಟೀಸ್ ನೀಡಿದ್ದಾರೆ. ನೋಟಿಸ್ ಪಡೆದ ಗುತ್ತಿಗೆದಾರರು ವಿವಿ ಆವರಣದಲ್ಲಿ ಅಭಿವೃದ್ಧಿ ಮಾಡಲಾಗಿದೆ.
ನೂತನ ಕಲ್ಲುಬೆಂಚುಗಳ ಅಳವಡಿಕೆ
    ವಿವಿ ಆವರಣದ ಹೆಲಿಪ್ಯಾಡ್ ಸ್ಥಳದಲ್ಲಿ ಎರಡು ಕಡೆಗಳಲ್ಲಿ ಕುಳಿತುಕೊಳ್ಳಲು ಕಲ್ಲುಬೆಂಚುಗಳನ್ನು ಮಾಡಲಾಗಿತ್ತು. ಅವುಗಳಿಗೆ ಅಳವಡಿಸಲಾಗಿದ್ದ ಗ್ರಾನೈಟ್ ಹಾಸುಗಳು ಕೆಲವು ಮುರಿದು ಬಿದ್ದಿದ್ದವು. ಇನ್ನೂ ಕೆಲವು ಕಿತ್ತುಹೋಗಿದ್ದವು. ಅವುಗಳ ಬದಲಾಗಿ ಹೊಸ ಹಾಸುಗಳನ್ನು ಮರುಜೋಡಣೆ ಮಾಡಿ ಕುಳಿತುಕೊಳ್ಳಲು ಅನುಕೂಲ ಮಾಡಲಾಗಿದೆ. 
ಭದ್ರಗೊಂಡ ಅಲಂಕಾರಿಕ ದೀಪಗಳು
    ಹೆಲಿಪ್ಯಾಡ್ ಸುತ್ತಲೂ ಅಳವಡಿಸಲಾದ ವಾಕಿಂಗ್‍ಪಾತ್ ಸುತ್ತಲೂ ಸುಮಾರು 40 ಅಲಂಕಾರಿಕ ದೀಪಗಳನ್ನು ಅಳವಡಿಸಲಾಗಿತ್ತು. ಅದರಲ್ಲಿ ಸುಮಾರು ದೀಪಗಳು ಕಳಚಿ ಬಿದ್ದಿದ್ದವು. ಅವುಗಳನ್ನು ಸರಿಪಡಿಸಿ, ಭದ್ರಪಡಿಸಲಾಗಿದೆ. ದೀಪಗಳ ಸುತ್ತ ಸಿಮೆಂಟ್ ಹಾಕಿ ಭದ್ರ ಮಾಡಿದ್ದಾರೆ. 
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link