ಟಿಕ್ ಟಾಕ್ ನಲ್ಲಿ ಟ್ರೆಂಡ್ ಆಗ್ತಿದೆ ” ಸ್ಕಲ್ ಬ್ರೇಕರ್ ಚಾಲೆಂಜ್ “

     ಈ ನಡುವೆ ಸಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗದಿರುವ ವಿಷಯವೇ ಇಲ್ಲಾ ಯಾರಾದರು ಸೆಲೆಬ್ರೆಟಿ ಒಂದು ಚಾಲೆಂಜ್ ಹಾಕಿದರೆ ಮುಗಿಯಿತು ಇನ್ನು ಅದು ವೈರಲ್ ಆದರೆ ಎಲ್ಲರೂ ಅದನ್ನೆ ಮಾಡಲು ಸನ್ನದ್ದರಾಗಿ ನಿಲ್ಲುತ್ತಾರೆ ಇಂತಹುದೆ ರೀತಿಯಲ್ಲಿ ಬಂದ ಹೊಸ ಚಾಲೆಂಜ್ ” ಟ್ರಿಪ್ಪಿಂಗ್ ಜಂಪ್ “ಅಥವಾ” ಸ್ಕಲ್ ಬ್ರೇಕರ್ ” ಚಾಲೆಂಜ್,ಈ ಸವಾಲನ್ನು ನೋಡಿದ ಕೆಲ ಪೋಷಕರ ಕಳವಳ ವ್ಯಕ್ತಪಡಿಸಿದ್ದಾರೆ.ಇನ್ನು ವೈದ್ಯರು ಹೇಳುವ ಪ್ರಕಾರ ೀ ಚಾಲೆಂಜ್ ಗೆ ಒಬ್ಬ ವ್ಯಕ್ತಿಯ ಜೀವನಕ್ಕೆ ಆಧಾರವಾಗುವ  ಮೂಳೆಗಳನ್ನು ಮುರಿತಕ್ಕೆ ಒಳಪಡಿಸುವ ಸಾಮರ್ಥ್ಯ ಇದೇ ಎಂದು ಅಭಿಪ್ರಾಯ ಪಟ್ಟಿದ್ದಾರೆ , ಮತ್ತು ಇದು ಈ ಹಿಂದೆ ಜಗತ್ತಿನಾಧ್ಯಂತ ಎಷ್ಟೋ ಜನರ ಜೀವಕ್ಕೆ ಸಂಚಕಾರ ತಂದೊಡ್ಡಿದ್ದ ಬ್ಲೂ ವೇಲ್ ಮತ್ತು ಮೊಮೊ ಗೇಮ್ ಗಳಿಗಿಂತ ಹೆಚ್ಚು ಅಪಾಯಕಾರಿ ಎಂದಿದ್ದಾರೆ.

  ಅನೇಕ ಶಾಲೆಗಳ ಪ್ರಾಂಶುಪಾಲರು ಹೇಳುವ ಪ್ರಕಾರ ನಾವು ಮಕ್ಕಳು ಈ ಚಾಲೆಂಜ್ ಮಾಡುವುದನ್ನು ನೋಡಿಲ್ಲವಾದರೂ ಈ ರೀತಿಯ ಮಾರಣಾಂತಿಕ ಚಾಲೆಂಜ್ ಗಳ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದಿದ್ದಾರೆ.ಅಲ್ಲದೇ ಇಂತಹ ಚಾಲೆಂಜ್ ನೀಡುವವರ ಮೇಲೂ ಸಹ ನಿಗಾ ವಹಿಸುವು ಅಗತ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಕೆಲವು ದೇಶಗಳು ಈ ಸವಾಲನ್ನು ಈಗಾಗಲೆ ಮಾರಾಣಾಂತಿಕ ಎಂದಿದೆ ಅಲ್ಲದೇ ಈ ರೀತಿಯ ಚಾಲೆಂಜ್ ಗಳು ನಡೆಯದಂತೆ ಮುನ್ನೆಚ್ಚರಿಕೆಯನ್ನು ಸಹ ತೆಗೆದುಕೊಳ್ಳುತ್ತಿವೆ . ಇನ್ನು ಕೆಲವು ದೇಶಗಳ ಪೊಲೀಸರು ಶಾಲೆಗಳಿಗೆ ಭೇಟಿ ನೀಡಿ ಇದರ ಪರಿಶೀಲನೆ ಜೊತೆಗೆ ಜಾಗೃತಿಯನ್ನೂ ಸಹ ಮೂಡಿಸುತ್ತಿದ್ದಾರೆ .

ಅಷ್ಟಕ್ಕೂ ಈ ಚಾಲೆಂಜ್ ಏನು ???

   ಈ ಚಾಲೆಂಜ್ ನಲ್ಲಿ  ಮೂವರು ನಿಂತಿರುತ್ತಾರೆ ಈ ಮೂವರಲ್ಲಿ ಮಧ್ಯದ ವ್ಯಕ್ತಿ ಮೇಲಕ್ಕೆ ಜಿಗಿದಾಗ ಅಕ್ಕ ಪಕ್ಕ ನಿಂತಿರುವವರು ಜಿಗಿದವನ ಕಾಲುಗಳಿಗೆ ಒದೆಯುತ್ತಾರೆ ಈ ಪ್ರಕ್ರಿಯೆಯಿಂದ ಜಿಗಿದ ವ್ಯಕ್ತಿ ತನ್ನ ಸಮತೋಲನ ಕಳೆದುಕೊಂಡು ನೆಲದ ಮೇಲೆ ಬಿದ್ದಾಗ ಆತನಿಗೆ ಬೀಳುವ ಏಟಿನೊಂದಿಗೆ ಈ ಚಾಲೆಂಜ್ ಮುಗಿಯುತ್ತದೆ .ಆದರೆ ದುರಾದೃಷ್ಟವಶಾತ್ ಏನಾದರು ಆತ ಸಮತೋಲನ ಕಳೇದುಕೊಂಡರೆ ಆತನ ಜೀವಕ್ಕೆ ಕುತ್ತು ಬರುವ ಸಂಭವವಿದೆ ಇದನ್ನು ಗಮನಿಸಿದ ಕೆಲವರು ಈ ರೀತಿಯ ಚಾಲೆಂಜ್ ಗಳನ್ನು ಮಕ್ಕಳಿಗೆ ನೀಡುತ್ತಿರುವ ಟಿಕ್ ಟಾಕ್ ಮೇಲೆ ಕೆಂಡಾಕಾರುತ್ತಿದ್ದಾರೆ.

 ಇನ್ನು ಈ ಸ್ಕಲ್ ಬ್ರೇಕರ್ ಚಾಲೆಂಜ್ ನ ವಿಡಿಯೋ ಒಂದು ವಾಟ್ಸಾಪ್ ಫಾರ್ವರ್ಡ್ ಆಗಿ ಪಡೆದ ತಾಯಿ, “ಇದು ತುಂಬಾ ಭಯಾನಕವಾಗಿದೆ. ನೀವು ಜಿಗಿಯುವಾಗ ಬೀಳುವುದನ್ನು ಕಲ್ಪಿಸಿಕೊಳ್ಳಿ. ಈ ದಿನಗಳಲ್ಲಿ, ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಿಟ್ಟರೇ ಬೇರೆ ಪ್ರಪಂಚವೇ ಇಲ್ಲ ಎಂಬಂತಾಗಿದೆ ಅವರಿಗೆ ಹೊರಗಿನ ಪರಿವೇ ಇಲ್ಲದೇ ಮಕ್ಕಳು ಅದಕ್ಕೆ ವ್ಯಸನಿಗಳಾಗುತ್ತಿದ್ದಾರೆ , ಆದ್ದರಿಂದ ನಾವು ಅವರನ್ನು ಹೇಗೆ ಮುಕ್ತಗೊಳಿಸಬೇಕು? ಎಂಬುದೇ ದೊಡ್ಡ ಸವಾಲಾಗಿದೆ ಎಂದಿದ್ದಾರೆ. ”

  ಇನ್ನು ಕೆಲವೇ ತಿಂಗಳ ಹಿಂದೆಯಷ್ಟೆ ಬಾಲಕನೊಬ್ಬ ಪಬ್ ಜೀ ಆಡಲು ಮೊಬೈಲ್ ಕೊಡದ ಕಾರಣ ತನ್ನ ಹೆತ್ತ ತಂದೆಯನ್ನು ಅಮಾನವೀಯವಾಗಿ ತುಂಡು ತಂಡಾಗಿ ಕತ್ತರಿಸಿ ಬಕೆಟ್ ಗಳಲ್ಲಿ ತುಂಬಿಟ್ಟ ಘಟನೆ ಸಮಾಜಿಕ ವ್ಯಸನಿಗಳಿಗೆ ಒಂದು ಎಚ್ಚರಿಕೆಯ ಕರೆ ಘಂಡೆಯಾದರು ಯಾರು ಸಹ ತಲೆಕೆಡಿಸಿಕೊಳ್ಳದೇ ಇರುವುದು ವಿಪರ್ಯಾಸವೇ ಸರಿ ,ಇನ್ನು ಕೆಲವರು ಸಮಾಜಿಕ ಜಾಲತಾಣ ಟಿಕ್ ಟಾಕ್ ನಿಂದ ತಮಗೆ ದೊರೆತ ಸುಂದರ ಬದುಕನ್ನು ಹಾಳು ಮಾಡಿಕೊಂಡಿದುಂಟು.

    ಈ ರೀತಿಯ ಘಟನೆ ನಡೆದಾಗೆಲ್ಲಾ ಗಂಟೆಗಟ್ಟಲೆ ಟಿಆರ್ ಪಿ ಗೋಸ್ಕರ ತೋರಿಸುವ ಟಿ ವಿ ಮಾಧ್ಯಮದ ನಿರೂಪಕ/ನಿರೂಪಕಿಯರೇ ಟಿಕ್ ಟಾಕ್ ,ಲೈಕ್ ಇನ್ನು ಮುಂತಾದ ವ್ಯಸನಗಳಿಗೆ ಮಾರು ಹೋಗಿರುತ್ತಾರೆ . ಈಗಲಾದರು ಸಮಾಜಿಕ ಜಾಲತಾಣಕ್ಕೆ ವ್ಯಸನಿಗಳಾಗದೆ ಮಕ್ಕಳು/ದೊಡ್ಡವರೂ ಯಾರೆ ಆಗಲಿ ಜವಾಬ್ದಾರಿಯಿಂದ ನಡೆದುಕೊಳ್ಳುವ ಕಾಲ ಇದಾಗಿದೆ.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap