ಟ್ವಿಟರ್ ಸಿಇಓ ಖಾತೆ ಹ್ಯಾಕ್..!

     ಜಗತ್ತಿನೆಲ್ಲಡೆಯಲ್ಲಿ ಪ್ರತಿಯೊಬ್ಬರನ್ನು ತಲುಪುವ ಸಾಮಾಜಿಕ ಜಾಲತಾಣವಾದ ಟ್ವಿಟರ್ ಮೇಲೆ ಹ್ಯಾಕರ್ ಗಳು ದಾಳಿ ಮಾಡುವುದು ಹೊಸದೇನಲ್ಲ ನಿನ್ನೆ ಮಧ್ಯಾಹ್ನನಂತರ ಟ್ವಿಟರ್‌ ಸಿಇಒ ಜಾಕ್ ಡೋರ್ಸಿಯವರ ಖಾತೆಯನ್ನೆ ಹ್ಯಾಕರ್‌ಗಳು ಹ್ಯಾಕ್ ಮಾಡಿದ ಘಟನೆ ವರದಿಯಾಗಿದೆ .ಜಾಕ್ ಅವರ ಖಾತೆ ಹ್ಯಕರ್ ಗಳ ಕೈ ಸೇರುತ್ತಿದ್ದಂತೆ ಅದರಲ್ಲಿ ಹ್ಯಾಕರ್‌ಗಳು ನಾನಾ ತರದ ಪೋಸ್ಟ್‌ಗಳನ್ನು ಹಾಕುತ್ತಿದ್ದರು. ಈ ಕೃತ್ಯ ಜಾಕ್‌ ಻ವರ ಗಮನಕ್ಕೆ ಬಂದ ತಕ್ಷಣ ಎಚ್ಚೆತ್ತ ತಜ್ಞರ ತಂಡ ಖಾತೆಯನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಂಪನಿಯ ಮೂಲಗಳು ತಿಳಿಸಿದ್ದಾರೆ.

      ಸುಮಾರು 10 ನಿಮಿಷ ಕಾಲ ಹ್ಯಾಕರ್‌ಗಳು ಜಾಕ್ ಖಾತೆಯಿಂದ ಅಸಂಬದ್ಧ ಟ್ವೀಟ್‌ಗಳನ್ನು ಮಾಡುವ ಮೂಲಕ ಜಾಕ್‌ ಹೆಸರನ್ನು ಹಾಳುಮಾಡುವ ಯತ್ನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಟ್ವಿಟರ್ ಸಿಬ್ಬಂದಿ, ಖಾತೆಯನ್ನು ಹ್ಯಾಕರ್‌ಗಳ ಕೈಯಿಂದ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಹ್ಯಾಕರ್‌ಗಳು ಮಾಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಲಾಗಿದೆ. ಜಾಕ್ ಖಾತೆಯನ್ನು ಹ್ಯಾಕರ್ ಕೈಯಿಂದ ಮರಳಿ ಪಡೆಯಲಾಗಿದೆ. ಹ್ಯಾಕರ್‌ಗಳ ಉದ್ದೇಶವೇನಿತ್ತು ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ಅಗತ್ಯವಾಗಿ ನಡೆಸಲಾಗುತ್ತದೆ ಎಂದು ಟ್ವಿಟರ್ ಹೇಳಿದೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap