ಮಾರುತಿ ಸುಜುಕಿಯಿಂದ ಮತ್ತೊಂದು ಎಂಪಿವಿ XL6 ..!!

   ದೇಶದ ಪ್ರಸಿದ್ಧ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ ತಮ್ಮ ನೆಕ್ಸಾ ಬ್ರಾಂಡ್ ನ ವೆಬ್‌ಸೈಟ್‌ನಲ್ಲಿ ಹೊಸ ಮಾದರಿಯಾದ ಎಕ್ಸ್‌ಎಲ್ 6 ನ ಒಳಾಂಗಣ ವಿನ್ಯಾಸವನ್ನು ರಿವೀಲ್ ಮಾಡಿದ್ದು ಗ್ರಾಹಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

       ಮೇಲ್ನೋಟಕ್ಕೆ ಇದು ತನ್ನ ಹಿಂದಿನ ಮಾದರಿಯಾದ ಎರ್ಟಿಗಾದಂತೆ ಇದ್ದರೂ ಸಂಪೂರ್ಣವಾಗಿ ಇದರ ವಿನ್ಯಾಸವನ್ನು ಹೊಸ ಪ್ರೇರಣೆಯಿಂದ ಮಾಡಿದ್ದು ಗ್ರಾಹಕರಿಗೆ ಹೊಸ ಅನುಭವ ನೀಡುವುದು ಖಚಿತ ಎಂದು ಕಂಪನಿ ಹೇಳಿದೆ. ಇದರ ಡ್ಯಾಶ್‌ಬೋರ್ಡ್ ವಿನ್ಯಾಸವು ಕೊಂಚ ಎರ್ಟಿಗಾವನ್ನು ಹೋಲುತ್ತದೆಯಾದರೂ ಇದು ಮಾರುತಿಯ ಐಕಾನಿಕ ಬ್ಲಾಕ್ ಸ್ಕೀಮ್ ಹೊಂದಿರುತ್ತದೆ.

 

      ಎಕ್ಸ್‌ಎಲ್ 6 ನಲ್ಲಿ ಎರಡನೇ ಸಾಲಿಗೆ ಕ್ಯಾಪ್ಟನ್ ಸೀಟ್ಸ್ ನೀಡುವ ಮೂಲಕ ಗ್ರಾಹಕನಿಗೆ ಅತ್ಯಂತ ಅರಾಮದಾಯಕ ಅನುಭವ ನೀಡಲು ಸಿದ್ದವಾಗಿದೆ ಎಂದು ಮಾರುತಿ ಇಂಡಿಯಾ ತಿಳಿಸಿದೆ. ಇನ್ನೂ ಇದರ ಒಳಾಂಗಣ ವಿನ್ಯಾಸಕ್ಕೆ ಬಂದರೆ ಡ್ಯಾಶ್ ಬೋರ್ಡ್ ನಲ್ಲಿ ಸಿಗುವ ಮಲ್ಟಿ ಮೀಡಿಯಾ ಪ್ಲೇಯರ್ ನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ನಂತಹ ಅತ್ಯಾಧುನಿಕ ವ್ಯವಸ್ಥೆ, ಸ್ವಯಂಚಾಲಿತ ಹವಾಮಾನ ನಿಯಂತ್ರಣ ವ್ಯವಸ್ಥೆ, ಪವರ್ ವಿಂಡೋಸ್, ಇನ್ನೂ ಹಲವು ವಿಶೇಷ ಸೌಲಭ್ಯಗಳು ಮತ್ತು ಅತ್ಯಾಧುನಿಕ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಸಿದ್ದವಾಗುತ್ತಿದೆ ಎಕ್ಸ್ಎಲ್ 6.

      ಇನ್ನು ಕಡಿಮೆ ಬೆಲೆಯಲ್ಲಿ ಇಂತಹ ಆರಾಮದಾಯಕ ಸವಾರಿ ನೀಡುವ XL6 ಕಾರು ಇದೇ ಆಗಸ್ಟ್ 21 ರಂದು ಬಿಡುಗಡೆಯಾಗಲಿದ್ದು, ಇದರ ಬೆಲೆ 7.55 ಲಕ್ಷದಿಂದ 11.21 ಲಕ್ಷ ರೂ ಇರುತ್ತದೆ ಎಂದು ಕಂಪನಿ ತಿಳಿಸಿದೆ. 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap